ಕುಂದಾಪುರ ಮಿರರ್ ಸುದ್ದಿ…
ಕೋಟ: ಕೋಡಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಸಂಜೀವಿನಿ ಸಂಘದ ಕಛೇರಿಯನ್ನು ಗ್ರಾಮ ಪಂಚಾಯತ್ ಬಸ್ ನಿಲ್ದಾಣದ ಬಳಿಯ ಪಂಚಾಯತ್ ಕಟ್ಟಡದಲ್ಲಿ ಇತ್ತಿಚಿಗೆ ಕೋಡಿ ಗ್ರಾಮ ಪಂಚಾಯತ್ ಅಧ್ಯಕ್ಷ ಪ್ರಭಾಕರ ಮೆಂಡನ್ ಉದ್ಘಾಟಿಸಿದರು. ಪಂಚಾಯತ್ ಅಭಿವೃದ್ಧಿ ಅಧಿಕಾರಿ ರವೀಂದ್ರ ರಾವ್ ಸಂಘದ ಪದಾಧಿಕಾರಿಗಳಿಗೆ ಸದಸ್ಯರಿಗೆ ಶುಭ ಹಾರೈಸಿದರು.
ಗ್ರಾಮ ಪಂಚಾಯತ್ ಸದಸ್ಯರಾದ ಗೀತಾ ಖಾರ್ವಿ, ಕೃಷ್ಣ ಪೂಜಾರಿ, ಸತೀಶ್ ಜಿ ಕುಂದರ್, ಒಕ್ಕೂಟದ ಅಧ್ಯಕ್ಷ ರೇವತಿ, ಕಾರ್ಯದರ್ಶಿ ಆಶಾ, ಉಪಾಧ್ಯಕ್ಷ ಮಾಲತಿ, ಕೋಶಾಧಿಕಾರಿ ಸುಮಿತ್ರಾ,ಅಂಗನವಾಡಿ ಕಾರ್ಯಕರ್ತೆಯರು, ಆಶಾ ಕಾರ್ಯಕರ್ತೆಯರು, ಸಂಘದ ಪದಾಧಿಕಾರಿಗಳು, ಸದಸ್ಯರು, ಗ್ರಾಮಸ್ಥರು ಉಪಸ್ಥಿತರಿದ್ದರು.











