ಕೋಟ ಶ್ರೀ ಅಮೃತೇಶ್ವರಿ ಹಲವು ಮಕ್ಕಳ ತಾಯಿ ದೇವಸ್ಥಾನಕ್ಕೆ ಭೇಟಿ

0
407

Click Here

Click Here

ಕುಂದಾಪುರ ಮಿರರ್ ಸುದ್ದಿ…

ಕುಂದಾಪುರ: ಇಲ್ಲಿನ ಕೋಟದ ಶ್ರೀ ಅಮೃತೇಶ್ವರಿ ಹಲವು ಮಕ್ಕಳ ತಾಯಿ ದೇವಸ್ಥಾನಕ್ಕೆ ಅಖಿಲ ಭಾರತ ಲಿಂಗಾಯತ ಪಂಚಮಸಾಲಿ ಸಮಾಜದ ರಾಷ್ಟ್ರೀಯ ಕಾರ್ಯಧ್ಯಕ್ಷ, ಕರ್ನಾಟಕ ಸರಕಾರದ ಗೃಹಮಂತ್ರಿ ಡಾ. ಜಿ. ಪರಮೇಶ್ವರ್ ಇವರ ಆಪ್ತ ಸಹಾಯಕ ರಾಜಶೇಖರ ಮೆಣಸಿನಕಾಯಿ ಹಾಗೂ ಕರ್ನಾಟಕ ಜಂಗಮ ಕ್ಷೇಮ ಭಿವೃದ್ಧಿ ಮಹಾಸಭಾದ ರಾಜ್ಯಾಧ್ಯಕ್ಷ ಬಂಗಾರೇಶ್ ಹಿರೇಮಠ್, ಕೆಪಿಸಿಸಿ ಪದಾಧಿಕಾರಿ ಸುರೇಶ ಸವಣೂರ, ಬಾಂಡ್ ಉದ್ಯಮಿ ರಫೀಕ್ ದೊಡ್ಡಮನಿ ಭೇಟಿ ನೀಡಿದರು.

Click Here

ದೇವಸ್ಥಾನದ ಆಡಳಿತ ಮಂಡಳಿಯ ಅಧ್ಯಕ್ಷ ಆನಂದ್ ಸಿ ಕುಂದರ್ ಶಾಲು ಹೊದಿಸಿ ದೇವಿಯ ಪ್ರಸಾದವನ್ನು ನೀಡಿ ಗೌರವಿಸಿ ಸನ್ಮಾನಿಸಿದರು.

ಈ ಸಂದರ್ಭದಲ್ಲಿ ದೇಗುಲದ ವ್ಯವಸ್ಥಾಪನಾ ಸಮಿತಿಯ ಸದಸ್ಯರಾದ ಸುಬ್ರಾಯ ಜೋಗಿ, ಸುಧಾ ಎ ಪೂಜಾರಿ, ಸುಭಾಸ್ ಶೆಟ್ಟಿ, ಗಣೇಶ್ ಕೆ ನೆಲ್ಲಿಬೆಟ್ಟು, ಜ್ಯೋತಿ ಡಿ ಕಾಂಚನ್, ರತನ್ ಐತಾಳ್, ಕಾಂಗ್ರೆಸ್ ಮುಖಂಡರಾದ ಉಣಕಲ್ ಪ್ರಕಾಶ್ ಶೆಟ್ಟಿ, ಅಪ್ಪಣ್ಣ ಕಮ್ಮಾರ, ಸೂರ್ಯಕಾಂತ್ ಗೋಡ್ಕೆ ಹಾಗೂ ದೇವಸ್ಥಾನದ ವ್ಯವಸ್ಥಾಪಕ ಗಣೇಶ್ ಹೊಳ್ಳ ಉಪಸ್ಥಿತರಿದ್ದರು.

Click Here

LEAVE A REPLY

Please enter your comment!
Please enter your name here