ಕುಂದಾಪುರ ಮಿರರ್ ಸುದ್ದಿ…
ಹೆಮ್ಮಾಡಿ :ಇತ್ತೀಚಿಗೆ ಗಂಗೊಳ್ಳಿಯಲ್ಲಿ ನಡೆದ ದೋಣಿ ದುರಂತದಲ್ಲಿ ಮೃತರಾದ ದಿ. ಸುರೇಶ್ ಖಾರ್ವಿಯವರ ಮಗಳಾದ ಶ್ರೀಯಾ ಜನತಾ ಪದವಿಪೂರ್ವ ಕಾಲೇಜಿನಲ್ಲಿ ಪ್ರಥಮ ಪಿ.ಯು.ಸಿ.ವಿಜ್ಞಾನ ವಿಭಾಗದಲ್ಲಿ ವ್ಯಾಸಾಂಗ ಮಾಡುತ್ತಿದ್ದು, ಈ ವಿದ್ಯಾರ್ಥಿನಿಯ ತಂದೆ ಮೃತರಾದ ಸಂದರ್ಭದಲ್ಲಿ ಕಾಲೇಜಿನ ಪ್ರಾಂಶುಪಾಲರು ವಿದ್ಯಾರ್ಥಿನಿಯ ಮನೆಗೆ ಭೇಟಿ ನೀಡಿ ಎರಡು ವರ್ಷದ ಸಂಪೂರ್ಣ ಕಾಲೇಜಿನ ಶುಲ್ಕವನ್ನು( ಕಾಲೇಜು ಶುಲ್ಕ,ಸಮವಸ್ತ್ರ, ಮಧ್ಯಾಹ್ನ ಊಟ, ವಾಹನ ಶುಲ್ಕ)ಭರಿಸುವುದಾಗಿ ಆಶ್ವಾಸನೆ ಕೊಟ್ಟಿದ್ದರು ಅಂತೆಯೇ ಈ ದಿನ ವಿದ್ಯಾರ್ಥಿನಿಗೆ ಕಾಲೇಜಿನ ಆಡಳಿತ ಮಂಡಳಿಯ ಕಛೇರಿಯಲ್ಲಿ ಆಡಳಿತ ಮಂಡಳಿಯ ಅಧ್ಯಕ್ಷರು ಹಾಗೂ ಪ್ರಾಂಶುಪಾಲರಾದ ಗಣೇಶ ಮೊಗವೀರರವರು ಚೆಕ್ ಹಸ್ತಾಂತರಿಸುವ ಮೂಲಕ ನುಡಿದಂತೆ ನಡೆದು, ಎರಡು ವರ್ಷಗಳ ಪದವಿಪೂರ್ವ ಶಿಕ್ಷಣದ ಸಂಪೂರ್ಣ ಜವಬ್ದಾರಿಯನ್ನು ವಹಿಸಿಕೊಂಡು ಮಾನವೀಯತೆ ಮೆರೆದಿದ್ದಾರೆ.
ಈ ಸಂದರ್ಭದಲ್ಲಿ ಕಾಲೇಜಿನ ಉಪ ಪ್ರಾಂಶುಪಾಲರು,ಬೋಧಕ,ಬೋಧಕೇತರ ವೃಂದದವರು ಉಪಸ್ಥಿತರಿದ್ದರು.











