ಕುಂದಾಪುರ ಮಿರರ್ ಸುದ್ದಿ…
ಕುಂದಾಪುರ: ಕುಂದಾಪುರ ತಾಲೂಕು ಗುಲ್ವಾಡಿ ಗ್ರಾಮದ ಕಂಬಳಗದ್ದೆ ರಸ್ತೆಯಲ್ಲಿರುವ ಶರತ್ ಶೆಟ್ಟಿ ಎಂಬುವರ ಅಕ್ಕಿ ಗಿರಣಿಯಲ್ಲಿ ಸರ್ಕಾರದಿಂದ ನೀಡಲಾದ ಉಚಿತ ಅನ್ನ ಭಾಗ್ಯ ಅಕ್ಕಿಯನ್ನು ಅಕ್ರಮವಾಗಿ ದಾಸ್ತಾನು ಇಟ್ಟಿರುವ ಬಗ್ಗೆ ಖಚಿತ ಮಾಹಿತಿಯಂತೆ ದಾಳಿ ನಡೆಸಿದ್ದು ಶರತ್ ಶೆಟ್ಟಿ ಮತ್ತು ಸಲಾಂ @ ಪಕೀರ್ ಬ್ಯಾರಿ ಎಂಬವರು ಯಾರಿಂದಲೋ ಖರೀದಿಸಿಕೊಂಡು ಬಂದು ಶರತ್ ಶೆಟ್ಟಿ ಎಂಬವರ ಮಾಲಿಕತ್ವದ ಅಕ್ಕಿ ಗಿರಣಿಯಲ್ಲಿ 22 ಕ್ವಿಂಟಾಲ್ ಕೊಚ್ಚಿಗೆ ಅಕ್ಕಿ ಹಾಗೂ 5 ಕ್ವಿಂಟಾಲ್ ಬೆಳ್ತಿಗಿ ಅಕ್ಕಿ ಒಟ್ಟು 62,100 ರೂ ಮೌಲ್ಯದ 27 ಕ್ವಿಂಟಾಲ್ ಅಕ್ಕಿಯನ್ನು ಅಕ್ರಮವಾಗಿ ಕಾನೂನು ಬಾಹಿರವಾಗಿ ದಾಸ್ತಾನು ಪತ್ತೆಯಾಗಿದೆ.
ಈ ಬಗ್ಗೆ ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.











