ಪ್ಲಾಸ್ಟಿಕ್ ತ್ಯಾಜ್ಯ ಪರಿಸರಕ್ಕೆ ಮಾರಕ – ಬನ್ನಾಡಿ ನಾರಾಯಣ ಆಚಾರ್

ಕುಂದಾಪುರ ಮಿರರ್ ಸುದ್ದಿ…
ಕುಂದಾಪುರ: ಮನುಕುಲ ಪ್ರಕೃತಿಯ ಮೇಲೆ ದೊಡ್ಡ ಮಟ್ಟದ ಹಾನಿಯುಂಟು ಮಾಡುತ್ತಿದ್ದಾನೆ. ಇದಕ್ಕೆ ಇತ್ತೀಚಿಗಿನ ಪ್ಲಾಸ್ಟಿಕ್ ತ್ಯಾಜ್ಯದ ದುಷ್ಪರಿಣಾಮವೇ ಸಾಕ್ಷಿ ಎಂದು ಮುಂಬೈ ಓಎನ್‍ಜಿಸಿ ಇದರ ನಿವೃತ್ತ ಅಧಿಕಾರಿ ಬನ್ನಾಡಿ ನಾರಾಯಣ ಆಚಾರ್ ಹೇಳಿದರು.
ಭಾನುವಾರ ಸಾಲಿಗ್ರಾಮ ಪಟ್ಟಣಪಂಚಾಯತ್ ಸುವರ್ಣ ಮಹೋತ್ಸವದ ಹಿನ್ನಲ್ಲೆಯಲ್ಲಿ ಕೋಟದ ಪಂಚವರ್ಣ ಯುವಕ ಮಂಡಲ ಪ್ರವರ್ತಿತ ಸಂಸ್ಥೆ ಪಂಚವರ್ಣ ಮಹಿಳಾ ಮಂಡಲ ಕೋಟ ನೇತೃತ್ವದಲ್ಲಿ ಹಂದಟ್ಟು ಮಹಿಳಾ ಬಳಗ, ಮಣೂರು ಫ್ರೆಂಡ್ಸ್, ಜೆಸಿಐ ಸಿನಿಯರ್ ಲಿಜನ್ ಕೋಟ, ಸಾಲಿಗ್ರಾಮ ಪಟ್ಟಣಪಂಚಾಯತ್, ಗೀತಾನಂದ ಫೌಂಡೇಶನ್ ಮಣೂರು ಸಹಯೋಗದೊಂದಿಗೆ ವಿನ್ ಲೈಟ್ ಸ್ಪೋರ್ಟ್ಸ್ ಕ್ಲಬ್ ಪಾರಂಪಳ್ಳಿ ಸಂಯೋಜನೆಯೊಂದಿಗೆ 276ನೇ ಭಾನುವಾರದ ಪರಿಸರಸ್ನೇಹಿ ಪಾರಂಪಳ್ಳಿ ಪಡುಕರೆ ಬೀಚ್ ಕ್ಲಿನಿಂಗ್ ಅಭಿಯಾನದಲ್ಲಿ ಮಾತನಾಡಿ ಪಂಚವರ್ಣ ಸಂಘಟನೆ ಅದೆಷ್ಟೋ ವರ್ಷಗಳಿಂದ ಪರಿಸರ ಸಂರಕ್ಷಣೆಗೆ ಪಟತೊಟ್ಟು ಕಾರ್ಯನಿರ್ವಹಿಸುತ್ತಿದೆ. ಇಷ್ಟಿದ್ದು ಸಮಾಜ ಅರ್ಥೈಸಿಕೊಂಡು ಪರಿಸರಸಕ್ಕೆ ಪೂರಕ ವಾತಾವರಣ ಕಲ್ಪಿಸಬೇಕಿದೆ. ಪ್ಲಾಸ್ಟಿಕ್ ಮುನುಕುಲವನ್ನು ಅದಪಥನದತ್ತ ಕೊಂಡ್ಯೋಯುತ್ತಿದೆ ಇದರ ಬಗ್ಗೆ ಜಾಗೃತರಾಗಿ ಎಂದು ಕರೆ ಕೊಟ್ಟರು.
ಈ ಸಂದರ್ಭದಲ್ಲಿ ಸುಮಾರು 25ಚೀಲಕ್ಕೂ ಅಧಿಕ ಪ್ಲಾಸ್ಟಿಕ್ ತ್ಯಾಜ್ಯಗಳನ್ನು ತೆರವುಗೊಳಿಸಲಾಯಿತು.
ಪಂಚವರ್ಣ ಯುವಕ ಮಂಡಲದ ಅಧ್ಯಕ್ಷ ಕೆ. ಮನೋಹರ್ ಪೂಜಾರಿ, ಮಹಿಳಾ ಮಂಡಲದ ಸಂಚಾಲಕಿ ಸುಜಾತ ಬಾಯರಿ, ವಿನ್ ಲೈಟ್ ಸ್ಪೋರ್ಟ್ ಕ್ಲಬ್ ಪಾರಂಪಳ್ಳಿ ಸಂಸ್ಥೆಯ ದೇವೇಂದ್ರ ಶ್ರೀಯಾನ್, ಸುಧಾಕರ್ ಪೂಜಾರಿ ಮತ್ತಿತರರು ಇದ್ದರು.
ಅಭಿಯಾನವನ್ನು ಪಂಚವರ್ಣದ ರವೀಂದ್ರ ಕೋಟ ಸಂಯೋಜಿಸಿದರು.











