ಕುಂದಾಪುರ ಮಿರರ್ ಸುದ್ದಿ….
ಕುಂದಾಪುರ :ಅಜ್ಮೇರ್ ಬಿಷಪ್ ಜೋನ್ ಕರ್ವಾಲೋ ಅವರ ತಾಯಿ, ದಿ.ಪೀಟರ್ ಕರ್ವಾಲೋ ಅವರ ಪತ್ನಿ, ಕೋಣಿ ಮಲ್ಲನಬೆಟ್ಟು ನಿವಾಸಿ ಮಾರ್ಗರೇಟ್ ಕರ್ವಾಲೋ (87ವ) ವಯೋ ಸಹಜ ಕಾರಣದಿಂದ ಅ.21ರಂದು ನಿಧನರಾದರು.
ಮೃತರು ಇಬ್ಬರು ಪುತ್ರರು, ಐವರು ಪುತ್ರಿಯರು, ಹತ್ತು ಮಂದಿ ಮೊಮ್ಮಕ್ಕಳು, ನಾಲ್ವರು ಮರಿಮಕ್ಕಳನ್ನು ಅಗಲಿದ್ದಾರೆ. ಮೃತರು ಕೃಷಿಕರಾಗಿದ್ದು, ಜನಾನುರಾಗಿದ್ದರು.
ಅವರ ಅಂತಿಮ ವಿಧಿವಿಧಾನ ಅ.22ರಂದು ಸಂಜೆ 4ಕ್ಕೆ ಬಸ್ರೂರು ಸಂತ ಫಿಲೀಪ್ ನೇರಿ ಚರ್ಚ್‍ನಲ್ಲಿ ನಡೆಯಲಿದೆ ಎಂದು ಮೃತರ ಕುಟುಂಬದ ಪ್ರಕಟಣೆ ತಿಳಿಸಿದೆ.











