ಕುಂದಾಪುರ ಮಿರರ್ ಸುದ್ದಿ…
ಕುಂದಾಪುರ: ಇಲ್ಲಿನ ಕೋಟದ ಮಣೂರು ಸ್ನೇಹಕೂಟ ದಶಮಾನೋತ್ಸವ ಸಂಭ್ರಮದಲ್ಲಿದ್ದು ಈ ಹಿನ್ನಲ್ಲೆಯಲ್ಲಿ ವಿವಿಧ ಸರಣಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ಈ ದಿಸೆಯಲ್ಲಿ ಬುಧವಾರ ಸ್ನೇಹಕೂಟದ ಸಂಚಾಲಕಿ ಮಣೂರು ಬೆಳ್ಳಿಚುಕ್ಕಿಮನೆಯಂಗಳದಿ ಸ್ನೇಹ ಕಾರ್ತಿಕ ಎಂಬ ವಿಶಿಷ್ಟ ರೀತಿಯಲ್ಲಿ ಮಹಿಳೆಯರು ಸದಸ್ಯರು ಕೈಯಲ್ಲಿ ಹಣತೆ ಇರಿಸಿ ನೃತ್ಯಗೈದು ಸಂಭ್ರಮಿಸಿಕೊಂಡರು.
ಈ ಸಂದರ್ಭದಲ್ಲಿ ಸ್ನೇಹಕೂಟ ಸಂಚಾಲಕಿ ಭಾರತಿ ವಿ. ಮಯ್ಯ ದೀಪಾವಳಿಯ ಸಂದೇಶ ನೀಡಿದರು. ಸಂಘದ ಪದಾಧಿಕಾರಿಗಳು, ಸದಸ್ಯರು ಉಪಸ್ಥಿತರಿದ್ದರು.











