ಕುಂದಾಪುರ ಮಿರರ್ ಸುದ್ದಿ…

ಕುಂದಾಪುರ :ಸಂತೆಕಟ್ಟೆಯಲ್ಲಿರುವ ಸ್ಕಿಲ್ ಯುವಂ ಅಕಾಡೆಮಿಯಲ್ಲಿ ವಿದ್ಯಾರ್ಥಿಗಳಿಗೆ ಆರೋಗ್ಯ ಮಾಹಿತಿ ಕಾರ್ಯಕ್ರಮ ನಡೆಯಿತು.
ಮಣಿಪಾಲ ತಪೋವನ ಆಯುರ್ವೇದ ಹಾಸ್ಪಿಟಲ್ ಇದರ ವೈದ್ಯರಾದ ವಾಣಿಶ್ರೀ ಇವರು ಸಮಾರಂಭದ ಉದ್ಘಾಟಿಸಿ, ಪ್ರತಿಯೊಬ್ಬರು ಆರೋಗ್ಯದ ಬಗ್ಗೆ ಕಾಳಜಿ ವಹಿಸಬೇಕಾದ ಅಗತ್ಯ ಇದೆ. ಸರಿಯಾದ ಸಮಯದಲ್ಲಿ ನಿದ್ರೆ, ಉತ್ತಮ ಆಹಾರ ಪದ್ಧತಿಯನ್ನು ಜೀವನದಲ್ಲಿ ಅಳವಡಿಸಿಕೊಂಡಲ್ಲಿ ಕಾಯಿಲೆಯಿಂದ ದೂರ ಇರಬಹುದು ಎಂದರು. ಕ್ಷಣಿಕ ಸುಖಕ್ಕೆ ಮಾದಕ ವ್ಯಸನಕ್ಕೆ ವಿದ್ಯಾರ್ಥಿಗಳು ತಮ್ಮ ಜೀವನವನ್ನು ಹಾಳು ಮಾಡಿಕೊಳ್ಳುತ್ತಿದ್ದು, ಈ ನಿಟ್ಟಿನಲ್ಲಿ ಅವರನ್ನು ಮಾನಸಿಕವಾಗಿ ಸದೃಢಗೊಳಿಸುವ ಕೆಲಸ ಆಗಬೇಕು ಎಂದರು.
ಮುಖ್ಯ ಅತಿಥಿಗಳಾಗಿ ಕುಂದಾಪುರ ತಾಲೂಕು ಕಾರ್ಯನಿರತ ಸಂಘದ ಅಧ್ಯಕ್ಷ ನಾಗರಾಜ್ ರಾಯಪ್ಪನ ಮಠ, ಸಂಸ್ಥೆಯ ಪಾಲುದಾರರಾದ ಅಭಿಷೇಕ್ ಪೂಜಾರಿ, ಅನುಶ್ರೀ, ಅಕ್ಷಯ್ ಹಾಗೂ ವ್ಯವಸ್ಥಾಪಕರಾದ ರಾಘವೇಂದ್ರ ಪೂಜಾರಿ ಉಪಸ್ಥಿತರಿದ್ದರು.
ವೈಷ್ಣವಿ ಸ್ವಾಗತಿಸಿ ಪ್ರಗತಿ ವಂದಿಸಿದರು.











