ಕುಂದಾಪುರ ಮಿರರ್ ಸುದ್ದಿ…
ಕುಂದಾಪುರ: ಎಂ.ಎಂ.ಪಿ ನಿರ್ಮಾಣದ ಗುಲ್ವಾಡಿ ಟಾಕೀಸ್ ಅರ್ಪಿಸುವ ಆ 90 ದಿನಗಳು ಚಲನಚಿತ್ರದ ಚಿತ್ರದ ಫಸ್ಟ್ ಲುಕ್ ಪೋಸ್ಟರ್, ಟ್ರೈಲರ್, ಆಡಿಯೋ ಬಿಡುಗಡೆ ಕಾರ್ಯಕ್ರಮ ಗುಲ್ವಾಡಿಯಲ್ಲಿ ಜ.2ರ ಸಂಜೆ ನಡೆಯಿತು.
ಜಿ.ಶಂಕರ್ ಫ್ಯಾಮಿಲಿ ಟ್ರಸ್ಟ್ ಪ್ರವರ್ತಕರಾದ ಡಾ|ಜಿ.ಶಂಕರ್ ಟ್ರೈಲರ್ ಬಿಡುಗಡೆಗೊಳಿಸಿ ಮಾತನಾಡಿ, ಸ್ಥಳೀಯ ಪ್ರತಿಭೆಗಳನ್ನು ಗುರುತಿಸಿ ಉತ್ತಮ ಸಿನಿಮಾವನ್ನು ನಿರ್ಮಾಣ ಮಾಡಿದ್ದಾರೆ. ಈ ಚಿತ್ರಕ್ಕೆ ಚಿತ್ರಪ್ರೇಮಿಗಳ ಪ್ರೋತ್ಸಾಹ ಅಗತ್ಯ. 100 ಪ್ರದರ್ಶನಗಳನ್ನು ಆ 90 ದಿನಗಳು ಚಲನಚಿತ್ರ ಕಾಣಲಿ ಎಂದರು.
ರಾಜ್ಯ ಹಿಂದುಳಿದ ಆಯೋಗದ ಅಧ್ಯಕ್ಷ ಜಯಪ್ರಕಾಶ್ ಹೆಗ್ಡೆ ಮಾತನಾಡಿ,ಗುಲ್ವಾಡಿ ಟಾಕೀಸ್ ರಾಷ್ಟ್ರ ಮಟ್ಟದಲ್ಲಿ ಗುರುತಿಸುವಂತಾಗಲಿ. ಸ್ಥಳೀಯ ಪ್ರತಿಭೆಯನ್ನು ಗುರುತಿಸಿ ವೇದಿಕೆ ಕಲ್ಪಿಸಬೇಕು ಎಂದರು. ಚಲನಚಿತ್ರ ಯಶಸ್ವಿಯಾಗಲಿ ಎಂದು ಶುಭ ಹಾರೈಸಿದರು.
ರಾಜ್ಯ ಪ್ರಶಸ್ತಿ ಪುರಸ್ಕೃತ ನಟ, ನಿರ್ದೇಶಕ ರಿಷಬ್ ಶೆಟ್ಟಿ ಮಾತನಾಡಿ,ಸಿನೆಮಾ ಮಂದಿರದಲ್ಲಿ ಆ 90 ದಿನಗಳು ಚಲನ ಚಿತ್ರ 100 ದಿನ ಯಶಸ್ವಿಯಾಗಿ ಪ್ರದರ್ಶನಗೊಳ್ಳಲಿ ಎಂದರು. ಸ್ಥಳೀಯ ಪ್ರತಿಭೆಯನ್ನು ಗುರುತಿಸಿ ಸಿನೆಮಾ ಮಾಡಿದ್ದಾರೆ. ಕುಂದಾಪುರ ಊರಿನಲ್ಲಿ ಸಿನೆಮಾ ವೇದಿಕೆ ರಚಿಸಿ ಸಿನೆಮಾ ಮಾಡುವುದು ಯಾಕುಬ್ ಗುಲ್ವಾಡಿ ಅವರ ಪ್ರಯತ್ನ ಯಶಸ್ವಿಯಾಗಲಿ ಎಂದರು.
ಕಾರ್ಯಕ್ರಮದಲ್ಲಿ ರಾಜ್ಯ ಪ್ರಶಸ್ತಿ ಪುರಸ್ಕøತ ಸಂಗೀತ ನಿರ್ದೇಶಕ ರವಿ ಬಸ್ರೂರು, ಉಡುಪಿ ಜಿಲ್ಲಾ ಆರೋಗ್ಯಾಧಿಕಾರಿ ಡಾ|ನಾಗಭೂಷಣ ಉಡುಪ, ಯುವ ಮೆರಿಡಿಯನ್ ಮಾಲಕ ಉದಯ ಕುಮಾರ್ ಶೆಟ್ಟಿ, ಹಿರಿಯ ನ್ಯಾಯವಾದಿ ಎಎಸ್.ಎನ್ ಹೆಬ್ಬಾರ್, ರೋಜರಿ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ಅಧ್ಯಕ್ಷ ಜೋನ್ಸನ್ ಡಿ ಅಲ್ಮೇಡಾ, ಬ್ರಹ್ಮಾವರ ಸಕ್ಕರೆ ಕಾರ್ಖಾನೆ ಅಧ್ಯಕ್ಷ ಬೈಕಾಡಿ ಸುಪ್ರಸಾದ್ ಶೆಟ್ಟಿ, ಸಹನ ಗ್ರೂಫ್‍ನ ಸುರೇಂದ್ರ ಶೆಟ್ಟಿ ಭಾಗವಹಿಸಿದ್ದರು.
ಸಂಜೆ 6 ಗಂಟೆಗೆ ಸಿನಿಮಾ ಮತ್ತು ಜಾನಪದ ಹಾಡುಗಳ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಕಸಾಪ ಜಿಲ್ಲಾಧ್ಯಕ್ಷ ನೀಲಾವರ ಸುರೇಂದ್ರ ಅಡಿಗ, ಉಡುಪಿ ಜಿಲ್ಲಾ ಮೊಗವೀರ ಯುವ ಸಂಘಟನೆ ಅಧ್ಯಕ್ಷ ಶಿವರಾಮ ಕೆಪಿ, ಯುವ ಮೆರಿಡಿಯನ್ ಮಾಲಕರಾದ ವಿನಯ ಕುಮಾರ ಶೆಟ್ಟಿ, ಗುಲ್ವಾಡಿ ಗ್ರಾ.ಪಂ.ಅಧ್ಯಕ್ಷ ಸುದೇಶ ಕುಮಾರ್ ಶೆಟ್ಟಿ, ಆದರ್ಶ ಆಸ್ಪತ್ರೆ ವೈದ್ಯಕೀಯ ನಿರ್ದೇಶಕ ಡಾ|ಆದರ್ಶ ಹೆಬ್ಬಾರ್,, ಕೋಟದ ಮನಸ್ಮಿತ ಫೌಂಡೇಶನ್ ನಿರ್ದೇಶಕ ಡಾ|ಪ್ರಕಾಶ್ ತೋಳಾರ್, ಕುಂದಾಪುರ ನ್ಯೂ ಮೆಡಿಕಲ್ ವೈದ್ಯಕೀಯ ನಿರ್ದೇಶಕ ಡಾ|ರಂಜನ್ ಶೆಟ್ಟಿ, ಪ್ರಭಾ ಕಿರಣ್ ಟೈಲ್ಸ್ ಗುಲ್ವಾಡಿಯ ಪ್ರಶಾಂತ್ ತೋಳಾರ್, ಉಡುಪಿ ಕಸಾಪ ಗೌರವ ಕಾರ್ಯದರ್ಶಿ ಸುಬ್ರಹ್ಮಣ್ಯ ಶೆಟ್ಟಿ, ದುರ್ಗಾಕೃಪಾ ಮೋಟಾರ್ಸ್‍ನ ವಿವೇಕಾನಂದ ಭಂಡಾರಿ, ಶೇಖರ ಶೆಟ್ಟಿ ಕೋಟೇಶ್ವರ, ನ್ಯಾಯವಾದಿ ರವಿಕಿರಣ್ ಮುರ್ಡೇಶ್ವರ ಭಾಗವಹಿಸಿದ್ದರು.
ಚಿತ್ರದ ನಿರ್ದೇಶಕ, ನಿರ್ಮಾಪಕ ರೊನಾಲ್ಡ್ ಲೋಬೊ, ಯಾಕುಬ್ ಖಾದರ್ ಗುಲ್ವಾಡಿ, ನಾಯಕ ನಟ ರತಿಕ್ ಮುರ್ಡೇಶ್ವರ್, ನಾಯಕಿ ನಟಿ ಚಂದ್ರಿಕಾ, ತಂತ್ರಜ್ಞರು ಉಪಸ್ಥಿತರಿದ್ದರು. ಶಿಕ್ಷಕರ ದಿನಕರ ಶೆಟ್ಟಿ ಕಾರ್ಯಕ್ರಮ ನಿರ್ವಹಿಸಿದರು.
ಖ್ಯಾತ ಗಾಯಕರಾದ ಡಾ|ಸತೀಶ್ ಪೂಜಾರಿ, ಅರ್ಫಾಝ್ ಉಳ್ಳಾಲ್, ಗವಿಶಿದ್ದಯ್ಯ ಹಳ್ಳಿಕೇರಿಮಠ, ಮೆಹಬೂಬ್ ಕಿಲ್ಲೆದಾರ್ ಸಿನಿಮಾ ಹಾಗೂ ಜಾನಪದ ಹಾಡುಗಳನ್ನು ಪ್ರಸ್ತುತ ಪಡಿಸಿದರು.