ಕುಂದಾಪುರ ಮಿರರ್ ಸುದ್ದಿ…
ಕುಂದಾಪುರ : ಕನ್ನಡಾಭಿಮಾನಿ ಡಾ. ಸಂಘಟನೆಯ ಆಶ್ರಯದಲ್ಲಿ ಹೊಸ ಬಸ್ ನಿಲ್ದಾಣದಲ್ಲಿ ಕನ್ನಡ ರಾಜ್ಯೋತ್ಸವವನ್ನು ಆಚರಿಸಲಾಯಿತು.
ದೀಪ ಬೆಳಗಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಹಿರಿಯ ನ್ಯಾಯವಾದಿ ಶಿರಿಯಾರ ಮುದ್ದಣ್ಣ ಅವರು ಸಮಾಜಮುಖಿಯಾಗಿ ಗುರುತಿಸಿ ಕೊಂಡಿರುವ ಸಂಘದ ಆಶ್ರಯದಲ್ಲಿ ಸತತವಾಗಿ ಆಚರಿಸುತ್ತಿರುವ ರಾಜ್ಯೋತ್ಸವ ಸಮಾರಂಭಕ್ಕೆ ಶುಭ ಹಾರೈಸಿ, ಕನ್ನಡಿಗರೆಲ್ಲರಿಗೂ ಇದು ಪ್ರೇರಣೆಯಾಗಲಿ ಎಂದರು.
ಕುಂದಾಪುರ ಪೊಲೀಸ್ ಠಾಣೆಯ ಎಎಸೈ ಮೋಹನ್ ಪಿ. ಅವರು ಕನ್ನಡ ಧ್ವಜಾರೋಹಣಗೈದು ಸಂಘದ ಕಾರ್ಯ ಚಟುವಟಿಕೆಗಳನ್ನು ಶ್ಲಾಘಿಸಿದರು.
ಸಭಾಕಾರ್ಯಕ್ರಮದ ಅಧ್ಯಕ್ಷತೆಯನ್ನು ಡಾ. ರಾಜ್ ಕುಮಾರ್ ಸಂಘದ ಅಧ್ಯಕ್ಷ ಕೋಡಿ ರತ್ನಾಕರ ಪೂಜಾರಿ ವಹಿಸಿದ್ದರು.
ಈ ಸಂದರ್ಭದಲ್ಲಿ ಸಂಘದ ನವೀನ್ ಪೂಜಾರಿ, ಆಗಸ್ಟಿನ್ ಡಿ’ ಸೋಜ, ಪ್ರಭಾಕರ ಖಾರ್ವಿ, ಗಾಳಿ ಮಾಧವ ಖಾರ್ವಿ, ಹುಸೇನ್ ಹೈಕಾಡಿ, ನಾಗರಾಜ ಮೊವಾಡಿ, ರಾಜ ಖಾರ್ವಿ ಇತರರು ಉಪಸ್ಥಿತರಿದ್ದರು.
ದುಂಢಿರಾಜ್ ಪ್ರಾಸ್ತವಿಕ ಮಾತುಗಳನ್ನಾಡಿದರು, , ಶ್ರೀಧರ್ ಗಾಣಿಗ ಧನ್ಯವಾದ ಅರ್ಪಿಸಿ, ಹರ್ಷವರ್ಧನ್ ಖಾರ್ವಿ ಕಾರ್ಯಕ್ರಮ ನಿರೂಪಿಸಿದರು. ಸೇವಾದಳದ ವಿದ್ಯಾರ್ಥಿಗಳು ಪ್ರಾರ್ಥನೆಗೈದರು.











