ಕುಂದಾಪುರ ಮಿರರ್ ಸುದ್ದಿ…
ಕುಂದಾಪುರ : ಕಳೆದ 38ವರ್ಷಗಳಿಂದ ಕುಂದಾಪುರ ಪುರಸಭೆಯ ನೀರು ಸರಬರಾಜಿನ ಹಿರಿಯ ವಾಲ್ ಮ್ಯಾನ್ ಆಗಿ ಸೇವೆ ಸಲ್ಲಿಸುತ್ತಿದ್ದ ವಿ.ಅಶೋಕ್ ಅವರು ಸೇವಾ ನಿವೃತ್ತಿ ಹೊಂದಿದ್ದು, ಪುರಸಭೆಯ ವತಿಯಿಂದ ಅಶೋಕ್ ದಂಪತಿಗಳನ್ನು ಸಮ್ಮಾನಿಸಿ, ನೆನಪಿನ ಕಾಣಿಕೆಗಳನ್ನು ನೀಡುವ ಮೂಲಕ ಬೀಳ್ಕೊಡಲಾಯಿತು.
ಈ ಸಂದರ್ಭದಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದ ಕಚೇರಿ ವ್ಯವಸ್ಥಾಪಕ ಸೂರ್ಯಕಾಂತ ಖಾರ್ವಿ ಅವರು, 1987ರಲ್ಲಿ ಕುಂದಾಪುರ ಪುರಸಭೆಗೆ ಏಕಕಾಲಕ್ಕೆ ನಿಯುಕ್ತಿ ಗೊಂಡ ಅಶೋಕ್ ಅವರ ಆತ್ಮೀಯ ಒಡನಾಟ, ಕಪ್ಪು ಚುಕ್ಕೆಯಿಲ್ಲದ ಸ್ವಚ್ಛ ಸೇವೆಯನ್ನು ಸ್ಮರಿಸಿ, ನಿವೃತ್ತಿ ಜೀವನಕ್ಕೆ ಶುಭ ಹಾರೈಸಿದರು.
ಪುರಸಭೆ ಅಧ್ಯಕರಾದ ಮೋಹನ್ ದಾಸ್ ಶೆಣೈ ಮಾತನಾಡಿ, ಸರಿಸುಮಾರು 250ರಜಾದಿನಗಳನ್ನು ಬಳಸದೆ ಹಾಗೇ ಇರಿಸಿರುವ ಅಶೋಕ್ ಅವರ ಸೇವಾ ಮನೋಭಾವನೆಯನ್ನು ಮುಕ್ತ ಕಂಠ ದಿಂದ ಶ್ಲಾಘಿಸಿದರು. ಪ್ರಸ್ತುತ ಟಪಾಲು ವಿಭಾಗದಲ್ಲಿ ಅವರ ತ್ವರಿತ ಸೇವೆಯನ್ನು ಮುಖ್ಯಧಿಕಾರಿ ಆನಂದ ಜೆ. ಸ್ಮರಿಸಿದರು.
ಪುರಸಭೆಯ ಉಪಾಧ್ಯಕ್ಷೆ ವನಿತಾ ಬಿಲ್ಲವ,ಸ್ಥಾಯಿ ಸಮಿತಿಯ ಅಧ್ಯಕ್ಷ ವಿ.ಪ್ರಭಾಕರ, ಸದಸ್ಯರಾದ ದೇವಕಿ ಸಣ್ಣಯ್ಯ, ಚಂದ್ರ ಶೇಖರ್ ಖಾರ್ವಿ, ಗಿರೀಶ್ ದೇವಾಡಿಗ, ಅಬು ಮಹ್ಮದ್, ಪ್ರಭಾವತಿ ಶೆಟ್ಟಿ,ವೀಣಾ ಮೆಂಡನ್, ಸಂತೋಷ ಶೆಟ್ಟಿ ಇಂಜಿನಿಯರ್ ಗುರುಪ್ರಸಾದ್ ಎಮ್. ಸಾರ್ವಜನಿಕರ ಅಹವಾಲುಗಳಿಗೆ ತಕ್ಷಣ ಸ್ಪಂದಿಸುತ್ತಿದ್ದ ಅಶೋಕ್ ಅವರ ನಿಸ್ವಾರ್ಥ ಸೇವೆಯನ್ನು ಹೊಗಳಿ ಶುಭಹಾರೈಸಿದರು.
ಗಣೇಶ್ ಜನ್ನಾಡಿ ಕಾರ್ಯ ಕ್ರಮ ನಿರೂಪಿಸಿದರು. ಪುರಸಭೆ ಯ ಸರ್ವ ಸಿಬಂದಿಗಳು ಉಪಸ್ಥಿತರಿದ್ದರು.











