ಕುಂದಾಪುರ ಮಿರರ್ ಸುದ್ದಿ…
ಕುಂದಾಪುರ :ಉಡುಪಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಪತ್ರಕರ್ತ ಲಕ್ಷ್ಮೀ ಮಚ್ಚಿನ ಅವರನ್ನು ಸೀನಿಯರ್ ಚೇಂಬರ್ ಕುಂದಾಪುರದ ಮೂಡ್ಲಕಟ್ಟೆ ತಾಂತ್ರಿಕ ವಿದ್ಯಾಲಯದ ಯೂತ್ ವಿಂಗ್ ನ ವತಿಯಿಂದ ಗುರುವಾರ ಇಲ್ಲಿನ ಮುತ್ತು ಮಹಲ್ ಕಾಂಪ್ಲೆಕ್ಸ್ ನ ಎನ್. ಎನ್. ಒ. ಮಿನಿ ಹಾಲ್ ನಡೆದ ಸೈಲೆಂಟ್ ಸ್ಟಾರ್ ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಲಕ್ಷ್ಮೀ ಮಚ್ಚಿನ ಅವರು, ಸಮಾಜ ಸೇವೆ ಮಾಡುವಾಗ ಹತ್ತಾರು ಜನರ ಕೊಂಕು ಮಾತುಗಳು, ವಿರೋಧ ಬರುವುದು ಸಹಜ. ಆದರೆ ಅದು ಯಾವುದರ ಬಗ್ಗೆಯೂ ತಲೆಕೆಡಿಸಿಕೊಳ್ಳದೇ, ನೀವು ಮಾಡುತ್ತಿರುವ ಉತ್ತಮ ಕಾರ್ಯವನ್ನು ಮುಂದುವರಿಸಿ. ಸಮಾಜಕ್ಕೆ ಒಳ್ಳೆಯ ಕಾರ್ಯಗಳನ್ನು ಮಾಡಿ ಎಂದರು.
ಇದೇ ವೇಳೆ ಅವರೊಂದಿಗೆ ಮೂಡ್ಲಕಟ್ಟೆ ಕಾಲೇಜಿನ ಯೂತ್ ವಿಂಗ್ ನ ಸದಸ್ಯರು ಪತ್ರಿಕೋದ್ಯಮದ ಬಗ್ಗೆ ಸಂವಾದ ನಡೆಸಿದರು.
ಅಧ್ಯಕ್ಷತೆ ವಹಿಸಿದ್ದ ಸೀನಿಯರ್ ಚೇಂಬರ್ ಅಧ್ಯಕ್ಷ ರಾಘವೇಂದ್ರ ಚರಣ್ ನಾವಡ ಮಾತನಾಡಿ, ಅರ್ಹರಿಗೆ ಪ್ರಶಸ್ತಿ ಸಿಕ್ಕಾಗ ಅದರ ಮೌಲ್ಯ ಇನ್ನಷ್ಟು ಹೆಚ್ಚುತ್ತದೆ. ಈ ಬಾರಿಯ ರಾಜ್ಯೋತ್ಸವ ಪ್ರಶಸ್ತಿಯೂ ಸಹ ಲಕ್ಷ್ಮೀ ಮಚ್ಚಿನರಿಗೆ ಅರ್ಹವಾಗಿಯೇ ದೊರಕಿದ್ದು, ನಮಗೆಲ್ಲರಿಗೂ ಖುಷಿ ತಂದಿದೆ ಎಂದರು.
ಜೆಸಿಐ ಕುಂದಾಪುರ ಸಿಟಿ ಸ್ಥಾಪಕ ಅಧ್ಯಕ್ಷ, ಎಸ್ ಸಿಐ ತರಬೇತಿ ವಿಭಾಗದ ರಾಷ್ಟ್ರೀಯ ನಿರ್ದೇಶಕ ಹುಸೇನ್ ಹೈಕಾಡಿ ಶುಭಹಾರೈಸಿದರು.
ವಿವೇಕ ಕೋಚಿಂಗ್ ಸೆಂಟರ್ ನ ನಿರ್ದೇಶಕ ಕಿರಣ್ ದೇವಾಡಿಗ, ಕಾಲೇಜಿನ ಯೂತ್ ವಿಂಗ್ ನ ಸಂಯೋಜಕರಾದ ಸುಷ್ಮಾ ಅಡಿಗ, ಆಶಾ ಕುಮಾರಿ, ಯೂತ್ ವಿಂಗ್ ಅಧ್ಯಕ್ಷ ಅನೀಶ ಪೂಜಾರಿ, ಆಸ್ತಿಕ ಗೌಡ, ಕೋಶಾಧಿಕಾರಿ ಲಾವಣ್ಯ ಯು. ಮೊದಲಾದವರು ಉಪಸ್ಥಿತರಿದ್ದರು.
ಯೂಥ್ ವಿಂಗ್ ನ ಉಪಾಧ್ಯಕ್ಷೆ ಕರುಣಾ ಕಾರ್ಯಕ್ರಮ ನಿರೂಪಿಸಿದರು.











