ಕುಂದಾಪುರ ಮಿರರ್ ಸುದ್ದಿ…

ಕುಂದಾಪುರ: ಬಿಹಾರದಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಸರಕಾರದ ಎನ್ ಡಿ.ಎ(NDA) ನೇತೃತ್ವದ ಅಭ್ಯರ್ಥಿಗಳು 200ಕ್ಕೂ ಮಿಕ್ಕಿ ಭರ್ಜರಿ ಅಂತರದ ಜಯಗೊಳಿಸಿರುವ ಹಿನ್ನೆಲೆ ಭಾರತೀಯ ಜನತಾ ಪಾರ್ಟಿ ಕುಂದಾಪುರದ ಬಿಜೆಪಿ ಕ್ಷೇತ್ರಧ್ಯಕ್ಷರಾದ ಸುರೇಶ್ ಶೆಟ್ಟಿ ಗೋಪಾಡಿ ನೇತೃತ್ವದಲ್ಲಿ ಕುಂದಾಪುರ ಶಾಸ್ತ್ರಿ ಸಕ೯ಲ್ ಬಳಿ ಪಟಾಕಿ ಸಿಡಿಸುವ ಮುಖೇನ ಸಂಭ್ರಮದ ವಿಜಯೋತ್ಸವವನ್ನು ಆಚರಿಸಲಾಯಿತು.
ವಿಜಯೋತ್ಸವದಲ್ಲಿ ಬಿಜೆಪಿ ನಿಕಟಪೂರ್ವ ಅಧ್ಯಕ್ಷ ಶಂಕರ್ ಅಂಕದಕಟ್ಟೆ, ಕುಂದಾಪುರ ಬಿಜೆಪಿ ಮಂಡಲ ಪ್ರಧಾನ ಕಾರ್ಯದರ್ಶಿಗಳಾದ ಸತೀಶ್ ಪೂಜಾರಿ ವಕ್ವಾಡಿ, ಸುಧೀರ್.ಕೆ. ಎಸ್, ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಕಾಡೂರು ಸುರೇಶ್ ಶೆಟ್ಟಿ, ಜಿಲ್ಲಾ ಕಾರ್ಯದರ್ಶಿ ಸದಾನಂದ ಬಳ್ಕೂರು, ಜಿಲ್ಲಾ ಓಬಿಸಿ ಪ್ರಭಾರಿ ಅರುಣ್ ಬಾಣ, ಜಿಲ್ಲಾ ಯುವ ಮೋರ್ಚಾ ಉಪಾಧ್ಯಕ್ಷ ವಿನೋದ್ ದೇವಾಡಿಗ, ಕುಂದಾಪುರ ಮಂಡಲ ಒಬಿಸಿ ಅಧ್ಯಕ್ಷ ಸುರೇಂದ್ರ ಕಾಂಚನ್ ಸಂಗಮ್, ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ಕಿರಣ್ ಪೂಜಾರಿ ತೆಕ್ಕಟ್ಟೆ, ರೈತ ಮೋರ್ಚಾ ಅಧ್ಯಕ್ಷ ಜಯಶೀಲ ಶೆಟ್ಟಿ, ಯುವ ಮೋರ್ಚ ಉಪಾಧ್ಯಕ್ಷ ಸುನಿಲ್ ಖಾರ್ವಿ, ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿ ಚೇತನ್ ಖಾರ್ವಿ, ಕುಂದಾಪುರ ಮಹಾಶಕ್ತಿ ಕೇಂದ್ರ ಅಧ್ಯಕ್ಷ ರಾಜೇಶ್ ಕಡ್ಗಿ, ಕುಂದಾಪುರ ಪುರಸಭಾ ಅಧ್ಯಕ್ಷ ಮೋಹನ್ ದಾಸ್ ಶೆಣೈ, ಮಾಜಿ ಉಪಾಧ್ಯಕ್ಷ ರಾಜೇಶ್ ಕಾವೇರಿ, ಪುರಸಭಾ ಸದಸ್ಯರಾದ ಸಂತೋಷ್ ಶೆಟ್ಟಿ, ರಾಘವೇಂದ್ರ ಖಾರ್ವಿ, ಪ್ರಭಾಕರ ವಿ. ಮಾಜಿ ಸದಸ್ಯರಾದ ದಿವಾಕರ ಕಢ್ಗಿ, ಸತೀಶ್ ಶೆಟ್ಟಿ, ತಾಲೂಕು ಪಂಚಾಯತ್ ಮಾಜಿ ಅಧ್ಯಕ್ಷ ಭಾಸ್ಕರ್ ಬಿಲ್ಲವ ಹೇರಿಕುದ್ರು, ರತ್ನಾಕರ ಶೇರಿಗಾರ್, ಬಿಜೆಪಿ ಒಬಿಸಿ ಕಾರ್ಯದರ್ಶಿ ಪ್ರಶಾಂತ್ ಕುಂದಾಪುರ, ಸಾಲಿಗ್ರಾಮ ಪಟ್ಟಣ ಪಂಚಾಯಿತಿನ ಮಾಜಿ ಸದಸ್ಯ ಸಂಜೀವ ದೇವಾಡಿಗ, ಕೋಟೇಶ್ವರ ಗ್ರಾಮ ಪಂಚಾಯತ್ ಸದಸ್ಯ ನಾಗರಾಜ್ ಕಾಂಚನ್ ಹಾಗೂ ಸಂತೋಷ್ ಮೆಂಡನ್ , ನವೀನ್ ಪೂಜಾರಿ ಮತ್ತು ಇನ್ನಿತರರು ಪ್ರಮುಖರು ಉಪಸ್ಥಿತರಿದ್ದರು.











