ಕುಂದಾಪುರ ಮಿರರ್ ಸುದ್ದಿ…

ಕುಂದಾಪುರ: ಸೋಲು ಗೆಲುವು ಶಾಶ್ವತವಲ್ಲ , ಕಾರ್ಯಕರ್ತರು ಪಕ್ಷಕ್ಕಾಗಿ ದುಡಿದರೆ , ಮುಂದಿನ ಚುನಾವಣೆಯಲ್ಲಿ ಜಯ ನಿಶ್ಚಿತ. ಚುನಾವಣೆಗಳನ್ನು ಸವಾಲಾಗಿ ಸ್ವೀಕರಿಸಬೇಕು. ಪಕ್ಷಕ್ಕಾಗಿ ದುಡಿದವರಿಗೆ ಮನ್ನಣೆ ನೀಡಬೇಕು ಎಂದು ವಿಧಾನ ಪರಿಷತ್ ಸದಸ್ಯ ಉಡುಪಿ ಜಿಲ್ಲೆಯ ಉಸ್ತುವಾರಿ ಐವನ್ ಡಿಸೋಜ ಹೇಳಿದರು.
ತೆಕ್ಕಟ್ಟೆಯ ದುರ್ಗಾಪರಮೇಶ್ವರಿ ಸಭಾಂಗಣದಲ್ಲಿ ನಡೆದ ಕುಂದಾಪುರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಕಾರ್ಯಕರ್ತರ ಸಭೆಯನ್ನು ಉದ್ದೇಶಿಸಿ ಮಾತನಾಡಿದರು.
ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳು ಬಡವರ ಬದುಕಿಗೆ ಆಧಾರವಾಗಿದೆ. ಇದನ್ನು ಮನೆ ಮನೆಗೆ ತಿಳಿಸುವ ಕೆಲಸ ನಡೆಯಬೇಕು ಎಂದು ಮಾಜಿ ಸಂಸದರಾದ ಜಯಪ್ರಕಾಶ್ ಹೆಗ್ಡೆ ತಿಳಿಸಿದರು.
ಸಂವಿಧಾನಾತ್ಮಕವಾಗಿ, ದೇಶದ ಪ್ರಜೆಗಳಿಗೆ ನೀಡಿದ ಮತದ ಹಕ್ಕನ್ನು ಕದಿಯುವುದು, ಪ್ರಜಾಪ್ರಭುತ್ವ ವ್ಯವಸ್ಥೆಗೆ ಮಾರಕ. ವೋಟ್ ಚೊರಿ ಅಂತ ಕಾರ್ಯಗಳನ್ನು , ಕೇಂದ್ರ ಸರ್ಕಾರ ನಿರ್ಭೀತಿಯಿಂದ ನಡೆಸುತ್ತಿದೆ. ಜಿಲ್ಲಾ ಮಟ್ಟದಲ್ಲಿ ಡಿಸೆಂಬರ್ 13 ರಂದು ಸಹಿ ಅಭಿಯಾನದ ಪ್ರದರ್ಶನವನ್ನು , ಮಾನವ ಸರಪಳಿಯ ಮೂಲಕ ಪ್ರದರ್ಶಿಸಲಿದ್ದೇವೆ ಎಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ ಅಶೋಕ್ ಕೊಡವೂರು ತಿಳಿಸಿದರು.
ಮೂರು ಬಾರಿ ಕುಂಭಾಶಿ ಗ್ರಾಮ ಪಂಚಾಯತ್ ಸದಸ್ಯರಾದ , ಮಂಜುನಾಥ್ ಹತ್ವಾರ್ ರವರು, ಗ್ರಾಮೀಣ ಕಾಂಗ್ರೆಸ್ ಅಧ್ಯಕ್ಷರಾದ ಅಣ್ಣಯ್ಯ ಪುತ್ರನ್ ರವರ ನೇತೃತ್ವದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡರು.
ಸಭೆಯಲ್ಲಿ ಜಿಲ್ಲಾ ಕಾರ್ಯಧ್ಯಕ್ಷರಾದ ಕಿಶನ್ ಹೆಗ್ಡೆ, ಮೊಳಹಳ್ಳಿ ದಿನೇಶ ಹೆಗ್ಡೆ, ಜಿಲ್ಲಾ ಪ್ರಚಾರ ಸಮಿತಿ ಅಧ್ಯಕ್ಷ ಹರೀಶ್ ಕಿಣಿ , ಹರಿಪ್ರಸಾದ್ ರೈ , ರಾಜು ಪೂಜಾರಿ , ಮಲ್ಯಾಡಿ ಶಿವರಾಮ ಶೆಟ್ಟಿ , ಬಿ. ಹಿರಿಯಣ್ಣ ರೋಶನಿ ಒಲಿವೇರ, ಕಿರಣ ಹೆಗ್ಡೆ , ಇಚ್ಚಿತಾರ್ಥ ಶೆಟ್ಟಿ , ಕೆದೂರು ಸದಾನಂದ ಶೆಟ್ಟಿ , ಕೃಷ್ಣದೇವ ಕಾರಂತ , ಅಶೋಕ್ ಪೂಜಾರಿ , ವಿಕಾಸ್ ಹೆಗ್ಡೆ , ಅಭಿಜಿತ್ ಪೂಜಾರಿ ,ಅಜಿತ್ ಕುಮಾರ್ ಶೆಟ್ಟಿ, ದೇವಕಿ ಸಣ್ಣಯ್ಯ , ರೇಖಾ ಪಿ ಸುವರ್ಣ ಇನ್ನಿತರ ನಾಯಕರು ವೇದಿಕೆಯಲ್ಲಿ ಉಪಸ್ಥಿತರಿದ್ದರು .
ಕೋಟ ಬ್ಲಾಕ್ ಅಧ್ಯಕ್ಷರಾದ ಶಂಕರ್ ಕುಂದರ್ ಸ್ವಾಗತಿಸಿ , ಹರಿಪ್ರಸಾದ್ ಶೆಟ್ಟಿ ವಂದಿಸಿ , ವಿನೋದ್ ಕ್ರಾಸ್ಟೋ ನಿರೂಪಿಸಿದರು.











