ಡಿ.13 ರಂದು ಕೋಟದಲ್ಲಿ ಅಪರೂಪದ ಪ್ರಚಂಡ ಜೋಡಾಟ ಸ್ಪರ್ಧೆ

0
518

Click Here

Click Here

ಕುಂದಾಪುರ ಮಿರರ್ ಸುದ್ದಿ…

ಕೋಟ: ಡೈಲಿ ವಾರ್ತೆ ಪ್ರಸ್ತುತಿಯಲ್ಲಿ ಶ್ರೀ ಸಿದ್ದಿ ವಿನಾಯಕ ಯಕ್ಷಗಾನ ಮಂಡಳಿ ಶ್ರೀ ಕ್ಷೇತ್ರ ಹಟ್ಟಿಯಂಗಡಿ ಮೇಳ ಹಾಗೂ ಶ್ರೀ ಪಂಜುರ್ಲಿ ಕೃಪಾಪೋಷಿತ ಯಕ್ಷಗಾನ ಮಂಡಳಿ ಶ್ರೀ ಕ್ಷೇತ್ರ ಗೋಳಿಗರಡಿ ಮೇಳಗಳ ನಡುವೆ ಪ್ರಚಂಡ ಸ್ಪರ್ಧೆಯ ಜೋಡಾಟವು ಡಿ. 13 ರಂದು ಶನಿವಾರ ಸಂಜೆ 7 ರಿಂದ ಕಾಲ ಮಿತಿಯಲ್ಲಿ ಮೂರು ಪ್ರಸಂಗಳ ಪ್ರದರ್ಶನ ಕೋಟದ ಶಾಂಭವಿ ಶಾಲಾ ಮೈದಾನದಲ್ಲಿ ನಡೆಯಲಿದೆ.

Click Here

“ಮಾಯಾಪುರಿ ವೀರಮಣಿ”, “ವೀರ ಅಭಿಮನ್ಯು” ಹಾಗೂ “ಕದಂಬ ಕೌಶಿಕೆ” ಎನ್ನುವ ಮೂರು ಪ್ರಸಂಗಗಳು ಕೂಡ ಜೋಡಾಟ ಸ್ಪರ್ಧೆ ನಡೆಯಲಿದೆ. ಎರಡು ಮೇಳಗಳ ಕಲಾವಿದರ ಜೊತೆಗೆ ತಲಾ ಐದು ಜನ ಪ್ರಸಿದ್ಧ ಯಕ್ಷಗಾನ ಕಲಾವಿದರು ಸಹ ಜೋಡಾಟದಲ್ಲಿ ಸ್ಪರ್ಧೆ ನೀಡಲಿದ್ದಾರೆ. ಸಂಜೆ ಸರಿಯಾಗಿ 6:30ಕ್ಕೆ ಗಣಪತಿ ಪುಜೆ ಆರಂಭವಾಗಲಿದೆ. 7:00 ಗಂಟೆಗೆ ಮಾಯಾಪುರಿ ವೀರಮಣಿ ಪ್ರಸಂಗ ಪ್ರದರ್ಶನ ನಡೆಯಲಿದೆ.

9:30ಕ್ಕೆ ಸಭಾ ಕಾರ್ಯಕ್ರಮ ಮತ್ತು ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಯಕ್ಷಗಾನ ಕಲಾವಿದ ಕೋಟ ಸುರೇಶ್ ಹಾಗೂ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಪತ್ರಕರ್ತ ಪ್ರಭಾಕರ್ ಆಚಾರ್ಯ ಇವರಿಗೆ ಸನ್ಮಾನ ಕಾರ್ಯಕ್ರಮ ಗಣ್ಯರ ಸಮುಖ ನಡೆಯಲಿದೆ.

ನಂತರ 10 ಗಂಟೆಗೆ ವೀರ ಅಭಿಮನ್ಯು ಯಕ್ಷಗಾನ ಪ್ರಸಂಗದ ಜೋಡಾಟ ಸ್ಪರ್ಧೆ ನಡೆಯಲಿದೆ ಎಂದು ಕಾರ್ಯಕ್ರಮದ ವ್ಯವಸ್ಥಾಪಕರಾದ ರಮೇಶ್ ಮೆಂಡನ್ ಸಾಲಿಗ್ರಾಮ ಪ್ರಕಟಣೆ ತಿಳಿಸಿದ್ದಾರೆ.

Click Here

LEAVE A REPLY

Please enter your comment!
Please enter your name here