ಕುಂದಾಪುರ ಮಿರರ್ ಸುದ್ದಿ…
ಕುಂದಾಪುರ: ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಕದಳಿಯಲ್ಲಿ ಬುನಾದಿ ಸಾಕ್ಷರತೆ ಮತ್ತು ಸಂಖ್ಯಾಜ್ಞಾನ (ಎಫ್.ಎಲ್.ಎನ್) ಕೆರಾಡಿ ಕ್ಲಸ್ಟರ್ ಮಟ್ಟದ ಕಲಿಕಾ ಹಬ್ಬ ಡಿ.15 ಸೋಮವಾರ ಉದ್ಘಾಟನೆಗೊಂಡಿತು.
ಕಲಿಕಾ ಹಬ್ಬವನ್ನು ಕೊಲ್ಲೂರು ಮೂಕಾಂಬಿಕಾ ದೇವಸ್ಥಾನದ ಮಾಜಿ ಧರ್ಮದರ್ಶಿ, ಧಾರ್ಮಿಕ ಮುಂದಾಳು ವಂಡಬಳ್ಳಿ ಜಯರಾಮ ಶೆಟ್ಟಿ ಉದ್ಘಾಟಿಸಿ, ಶುಭ ಹಾರೈಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲೆಯ ಎಸ್.ಡಿ.ಎಮ್.ಸಿ ಅಧ್ಯಕ್ಷರಾದ ಶ್ರೀಧರ್ ಆಚಾರ್ಯ ವಹಿಸಿದ್ದರು.
ಪ್ರಾರ್ಥನೆಯನ್ನು ಶಾಲಾ ವಿದ್ಯಾರ್ಥಿನಿಯರು ನೆರವೇರಿಸಿದರು.
ಕಾರ್ಯಕ್ರಮದಲ್ಲಿ ಇಡೂರು ಕುಂಜ್ಞಾಡಿ ಗ್ರಾಮ ಪಂಚಾಯಿತಿ ಸದಸ್ಯರಾದ ಅಶೋಕ್ ಶೆಟ್ಟಿ ದೇವಲ್ಕುಂದ, ರಾಘವೇಂದ್ರ ಪೂಜಾರಿ, ಸಿಂಗಾರಿ ನಾಯಕ್, ಜಗನ್ನಾಥ್ ಶೆಟ್ಟಿ ಹರ, ಚಂದ್ರಯ್ಯ ಅಚಾರ್ಯ, ನಾರಾಯಣ ಶೆಟ್ಟಿ ಹುಣ್ಸೆಡಿ, ರತ್ನಾಕರ ಆಚಾರ್ಯ, ಸುಧೀಂದ್ರ ಉಡುಪ, ದೀಕ್ಷಿತ್ ಶೆಟ್ಟಿ, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷರಾದ ರಜನಿ, ಕ್ಷೇತ್ರ ಸಂಪನ್ಮೂಲ ವ್ಯಕ್ತಿಗಳಾದ ರಾಜೇಶ್, ರಾಧಿಕಾ, ಸಮೂಹ ಸಂಪನ್ಮೂಲ ವ್ಯಕ್ತಿ ರವಿಚಂದ್ರ, ಕಲಿಕಾ ಹಬ್ಬದ ಸಂಪನ್ಮೂಲ ವ್ಯಕ್ತಿಗಳಾದ ಗಣೇಶ್, ಸವಿತಾ, ರಶ್ಮಿ, ರೂಬಿ ಉಪಸ್ಥಿತರಿದ್ದರು.
ಶಿಕ್ಷಣ ಸಂಯೋಜಕರಾದ ವೆಂಕ ಉಪ್ಪಾರ್ ಪ್ರಸ್ತಾವಿಕ ಮಾತುಗಳನ್ನಾಡಿದರು. ಕೆರಾಡಿ ಸಮೂಹ ಸಂಪನ್ಮೂಲ ವ್ಯಕ್ತಿಯಾದ ಎಂ ನಾಗರಾಜ ಶೆಟ್ಟಿ ಸ್ವಾಗತಿಸಿದರು. ಸುಮಾರು 10 ಶಾಲೆಯ 110 ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದರು. ರಾಧಿಕಾ ಕಾರ್ಯಕ್ರಮ ನಿರೂಪಿಸಿ, ಸುಲೇಖಾ ವಂದಿಸಿದರು.











