ಕುಂದಾಪುರ ಮಿರರ್ ಸುದ್ದಿ…
ಕುಂದಾಪುರ :ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಮಾರಣಕಟ್ಟೆಯಲ್ಲಿ ವಂಡ್ಸೆ ಕ್ಲಸ್ಟರ್ ಮಟ್ಟದ ಎಫ್.ಎಲ್.ಎನ್ (ಬುನಾದಿ ಸಾಕ್ಷರತೆ ಮತ್ತು ಸಂಖ್ಯಾಜ್ಞಾನ) ಕಲಿಕಾ ಹಬ್ಬ ಡಿ.17ರಂದು ಉದ್ಘಾಟನೆಗೊಂಡಿತು.
ಕಲಿಕಾ ಹಬ್ಬವನ್ನು ಚಿತ್ತೂರು ಗ್ರಾಮ ಪಂಚಾಯತ್ ಅಧ್ಯಕ್ಷ ದಿವಾಕರ ಆಚಾರ್ಯ ಉದ್ಘಾಟಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲೆಯ ಎಸ್.ಡಿ.ಎಮ್.ಸಿ ಉಪಾಧ್ಯಕ್ಷೆ ಜ್ಯೋತಿ ಪೂಜಾರಿ ವಹಿಸಿದ್ದರು.
ಪ್ರಾರ್ಥನೆಯನ್ನು ಶಾಲಾ ವಿದ್ಯಾರ್ಥಿನಿಯರು ನೆರವೇರಿಸಿದರು. ಸಮೂಹ ಸಂಪನ್ಮೂಲ ವ್ಯಕ್ತಿ ಎಂ. ನಾಗರಾಜ ಶೆಟ್ಟಿ ಪ್ರಾಸ್ತಾವಿಕ ಮಾತುಗಳ್ನಾಡಿದರು. ಶಾಲೆಯ ಮುಖ್ಯಶಿಕ್ಷಕ ರವೀಂದ್ರ ಶೆಟ್ಟಿ ವೈ ಸ್ವಾಗತಿಸಿದರು.
ಕೊಲ್ಲೂರು ಮೂಕಾಂಬಿಕ ದೇವಸ್ಥಾನದ ಮಾಜಿ ಧರ್ಮದರ್ಶಿ ಡಾ.ಅತುಲ್ ಕುಮಾರ್ ಶೆಟ್ಟಿ, ಗ್ರಾಮ ಪಂಚಾಯತಿ ಉಪಾಧ್ಯಕ್ಷರಾದ ಸುಬ್ಬು, ಚಿತ್ತೂರು ಗ್ರಾಮ ಪಂಚಾಯಿತಿ ಸದಸ್ಯರಾದ ಚಂದ್ರಶೇಖರ ಶೆಟ್ಟಿ, ಮಂಜುನಾಥ ದೇವಾಡಿಗ, ಮಾಜಿ ಎಸ್.ಡಿ.ಎಂ.ಸಿ ಅಧ್ಯಕ್ಷರಾದ ಸೀತಾರಾಮ್ ಮಡಿವಾಳ, ಚಿತ್ತೂರು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಸುಶೀಲಾ, ವಂಡ್ಸೆ ವಲಯದ ಶಿಕ್ಷಣ ಸಂಯೋಜಕ ವೆಂಕ ಉಪ್ಪಾರ, ಸಮೂಹ ಸಂಪನ್ಮೂಲ ವ್ಯಕ್ತಿ ರವಿಚಂದ್ರ, ಶೈಲಜಾ, ಕಲಿಕಾ ಹಬ್ಬದ ಸಂಪನ್ಮೂಲ ವ್ಯಕ್ತಿಗಳಾದ ವಿಶ್ವನಾಥ, ದಿನೇಶ, ರಾಧಿಕಾ, ಸುಮಿತ್ರಾ ಉಪಸ್ಥಿತರಿದ್ದರು.
ಭಾಗವಹಿಸಿದ ಎಲ್ಲ ವಿದ್ಯಾರ್ಥಿಗಳಿಗೆ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ದಿವಾಕರ ಆಚಾರ್ಯ ಪ್ರೋತ್ಸಾಹಕವಾಗಿ ಊಟದ ತಟ್ಟೆಯನ್ನು ವಿತರಿಸಿದರು. ಸುಮಾರು 12 ಶಾಲೆಯ 150 ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದರು. ಅತಿಥಿ ಶಿಕ್ಷಕಿ ಶ್ವೇತಾ ಮತ್ತು ಕಾರ್ಯಕ್ರಮ ನಿರೂಪಿಸಿ, ಶಾಲಾ ಸಹ ಶಿಕ್ಷಕರಾದ ರವೀಂದ್ರ ಶೆಟ್ಟಿ ವಂದಿಸಿದರು.











