ಹೆಮ್ಮಾಡಿ ಮೀನುಗಾರರ ಪ್ರಾಥಮಿಕ ಸಹಕಾರಿ ಸಂಘದ ರಜತ ಮಹೋತ್ಸವದ ಸಂಭ್ರಮ
ಕುಂದಾಪುರ ಮಿರರ್ ಸುದ್ದಿ…

ಕುಂದಾಪುರ :ಮೀನುಗಾರರ ಆರ್ಥಿಕ ಸಬಲೀಕರಣ, ಸ್ವಸಹಾಯ ಗುಂಪುಗಳ ಮೂಲಕ ಮಹಿಳಾ ಮೀನುಗಾರಲ್ಲಿ ಉಳಿತಾಯ ಮನೋಭಾವನೆ, ಆರ್ಥಿಕ ಪ್ರಗತಿಯ ದಿಸೆಯಲ್ಲಿ ಹುಟ್ಟಿಕೊಂಡ ಹೆಮ್ಮಾಡಿ ಮೀನುಗಾರರ ಪ್ರಾಥಮಿಕ ಸಹಕಾರಿ ಸಂಘ ಸದೃಢವಾಗಿ ಬೆಳೆದು ನಿಂತಿದೆ. ಸಂಘದ ಮೂಲಕ ಸದಸ್ಯರಲ್ಲಿ ಮಹತ್ತರ ಪ್ರಗತಿಯಾಗಿದೆ ಎಂದು ಜಿ.ಶಂಕರ್ ಫ್ಯಾಮಿಲಿ ಟ್ರಸ್ಟ್ ಪ್ರವರ್ತಕರಾದ ನಾಡೋಜ ಡಾ.ಜಿ.ಶಂಕರ್ ಹೇಳಿದರು.
ಅವರು ಡಿ.21ರಂದು ಹೆಮ್ಮಾಡಿ ಜಯಶ್ರೀ ಸಭಾಭವನದ ಬಳಿ ನಡೆದ ಹೆಮ್ಮಾಡಿ ಮೀನುಗಾರರ ಪ್ರಾಥಮಿಕ ಸಹಕಾರಿ ಸಂಘದ ರಜತ ಸಂಭ್ರಮ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಡಾ.ಎಂ.ಎನ್ ರಾಜೇಂದ್ರ ಕುಮಾರ್ ಕೂಡಾ ಸಾಕಷ್ಟು ಸಹಕಾರ ಈ ಸಂಘಕ್ಕೆ ನೀಡಿದ್ದಾರೆ. ಪ್ರಾರಂಭದಲ್ಲಿ 850 ಸ್ವಸಹಾಯ ಗುಂಪುಗಳ ರಚನೆಗೆ ಅವಕಾಶ ನೀಡಿ ಮಹಿಳೆಯರ ಸಬಲೀಕರಣಕ್ಕೆ ಸಹಕಾರ ನೀಡಿದ್ದಾರೆ. ಈ ಸಂಘದ ಬೆಳವಣಿಗೆಯಲ್ಲಿ ಅವರ ಪಾತ್ರವೂ ಮಹತ್ವದ್ದಾಗಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ದ.ಕ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಅಧ್ಯಕ್ಷರಾದ ಡಾ.ಎಂ.ಎನ್.ರಾಜೇಂದ್ರ ಕುಮಾರ್ ಮಾತನಾಡಿ. ನಾವೆಲ್ಲಾ ಭೂಮಿಯ ಮೇಲೆ ದುಡಿದರೆ ಮೀನುಗಾರರು ನೀರಿನ ಮೇಲೆ ಸಾಹಸ ದುಡಿಮೆ ಮಾಡುತ್ತಾರೆ. ಅದಕ್ಕೆ ಪೂರಕವಾಗಿ ಮಹಿಳೆಯರು ಕೂಡಾ ಶ್ರಮವಹಿಸಿ ದುಡಿಯುತ್ತಾರೆ. ಸಹಕಾರ ತತ್ವ ಮೂಲಕ ಮೀನುಗಾರರು ಕೂಡಾ ಸಬಲತೆಯನ್ನು ಕಂಡುಕೊಂಡಿದ್ದಾರೆ. 26 ಸಾವಿರ ಸದಸ್ಯರನ್ನು ಹೊಂದಿರುವ ಈ ಸಂಘ ಒಂದು ಕೋಟಿಯ ತನಕ ವಾರ್ಷಿಕ ಲಾಭ ಗಳಿಸುತ್ತಿದೆ. ಮುಂದಿನ ವರ್ಷ ನೂರು ಕೋಟಿ ಠೇವಣಾತಿಯ ಗುರಿಯನ್ನು ಹೊಂದಬೇಕು. ಈ ಕಾಲಮಿತಿಯಲ್ಲಿ ನೂರು ಕೋಟಿ ಠೇವಣಾತಿ ಸಂಗ್ರಹಿಸಿದರೆ ಬಂಗಾರ ನೀಡಿ ಸನ್ಮಾನ ಮಾಡುತ್ತೇನೆ ಎಂದರು.
ಮೀನುಗಾರ ಸಮುದಾಯ ಇನ್ನೂ ಕೂಡಾ ಹಿಂದುಳಿದಿದ್ದಾರೆ. ಅವರೆಲ್ಲರ ಅಭಿವೃದ್ಧಿ ಆಗಬೇಕು ಎಂದು ಹೇಳಿದ ಅವರು ಹೆಮ್ಮಾಡಿ ಮೀನುಗಾರರ ಪ್ರಾಥಮಿಕ ಸಹಕಾರ ಸಂಘದ ವ್ಯಾಪ್ತಿಯನ್ನು ಜಿಲ್ಲಾ ಮಟ್ಟಕ್ಕೆ ವಿಸ್ತರಿಸಿಕೊಂಡು ಜಿಲ್ಲೆಯ ಎಲ್ಲ ಕಡೆಯೂ ಸೇವೆ ನೀಡುವಂತಾಗಬೇಕು ಎಂದರು.
ರಜತಮಹೋತ್ಸವ ಕಾರ್ಯಕ್ರಮಕ್ಕೆ ರೂ.5 ಲಕ್ಷ ನೀಡುವುದಾಗಿ ಘೋಷಣೆ ಮಾಡಿದರು.
ಈ ಸಂದರ್ಭದಲ್ಲಿ ನಾಡೋಜ ಡಾ.ಜಿ.ಶಂಕರ್ ಅವರಿಗೆ ಮತ್ಸ್ಯಜ್ಯೋತಿ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಡಾ.ಎಂ.ಎನ್.ರಾಜೇಂದ್ರ ಕುಮಾರ್ ಅವರನ್ನು ಸನ್ಮಾನಿಸಲಾಯಿತು.
ಗೀತಾನಂದ ಫೌಂಡೇಶನ್ ಅಧ್ಯಕ್ಷರಾದ ಆನಂದ್ ಸಿ.ಕುಂದರ್ ಅವರು ಸ್ಮರಣ ಸಂಚಿಕೆ ಬಿಡುಗಡೆ ಮಾಡಿದರು. ದ.ಕ ಮೊಗವೀರ ಮಹಾಜನ ಸೇವಾ ಸಂಘ ಉಚ್ಚಿಲ ಇದರ ಅಧ್ಯಕ್ಷರಾದ ಜಯ ಸಿ.ಕೋಟ್ಯಾನ್ ವಿದ್ಯಾರ್ಥಿ ವೇತನ ವಿತರಿಸಿದರು. ಮೊಗವೀರ ಮಹಾಜನ ಸೇವಾ ಸಂಘದ ಬಗ್ವಾಡಿ ಹೋಬಳಿ ಮುಂಬೈ ಇದರ ಅಧ್ಯಕ್ಷರಾದ ಸಂತೋಷ ಪುತ್ರನ್ ವಿಶೇಷಚೇತನರಿಗೆ ಸಹಾಯಧನ ವಿತರಿಸಿದರು.
ಮಹಾಜನ ಸೇವಾ ಸಂಘದ ಬಗ್ವಾಡಿ ಹೋಬಳಿ ಮುಂಬೈ ಇದರ ಮಾಜಿ ಅಧ್ಯಕ್ಷರಾದ ಗೋಪಾಲ ಎಸ್.ಪುತ್ರನ್, ಚಿನ್ಮಯಿ ಆಸ್ಪತ್ರೆಯ ಆಡಳಿತ ನಿರ್ದೇಶಕ ಡಾ.ಉಮೇಶ ಪುತ್ರನ್, ದ.ಕ ಜಿಲ್ಲಾ ಕೇಂದ್ರ ಬ್ಯಾಂಕ್ ನಿರ್ದೇಶಕ ಮಹೇಶ್ ಹೆಗ್ಡೆ, ಸಹಕಾರ ಸಂಘಗಳ ಉಪನಿಬಂಧಕರಾದ ಶ್ರೀಮತಿ ಕೆ.ಆರ್.ಲಾವಣ್ಯ, ಮೀನುಗಾರಿಕ ಇಲಾಖೆಯ ಪ್ರಭಾರ ಜಂಟಿ ನಿರ್ದೇಶಕ ಕುಮಾರಸ್ವಾಮಿ ಬಿ.ಎ., ಕನಕ ಗ್ರೂಫ್ ಆಫ್ ಹೋಟೆಲ್ಸ್ ಹೆಮ್ಮಾಡಿ ಇದರ ಮಾಲಕರಾದ ಜಗದೀಶ ಶೆಟ್ಟಿ, ಮೊಗವೀರ ಸಂಘ ಬೆಂಗಳೂರು ಇದರ ಅಧ್ಯಕ್ಷರಾದ ಶಂಕರ ಕುಂದರ್, ಹೋಟೆಲ್ ಉದ್ಯಮಿ ನಾರಾಯಣ ರಾವ್ ಹೊಲಾಡು, ಕಟ್ ಬೇಲ್ತೂರು ಶ್ರೀ ಭದ್ರಮಹಾಕಾಳಿ ದೈವಸ್ಥಾನದ ಅಧ್ಯಕ್ಷರಾದ ಕೆ.ಆನಂದ ಶೆಟ್ಟಿ, ಹೆಮ್ಮಾಡಿ ಮೀನುಗಾರ ಪ್ರಾಥಮಿಕ ಸಹಕಾರ ಸಂಘದ ಸ್ಥಾಪಕ ಅಧ್ಯಕ್ಷರಾದ ಸುರೇಶ್ ಆರ್.ಪುತ್ರನ್, ಪಂಚಗಂಗಾ ರೈತರ ಸೇವಾ ಸಹಕಾರಿ ಬ್ಯಾಂಕ್ ಅಧ್ಯಕ್ಷರಾದ ಸಂತೋಷ್ ಕುಮಾರ್ ಶೆಟ್ಟಿ, ಮೊಗವೀರ ಯುವ ಸಂಘಟನೆ ಜಿಲ್ಲಾಧ್ಯಕ್ಷ ಜಯಂತ ಅಮೀನ್ ಕೋಡಿ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಮಾಜಿ ಅಧ್ಯಕ್ಷರು, ಮಾಜಿ ನಿರ್ದೇಶಕರು, ಹಾಲಿ ಆಡಳಿತ ಮಂಡಳಿ ಉಪಾಧ್ಯಕ್ಷರು, ನಿರ್ದೇಶಕರು, ಹಿರಿಯ ಸದಸ್ಯರನ್ನು, ಸಿಬ್ಬಂದಿಗಳನ್ನು ಗೌರವಿಸಲಾಯಿತು. ಹಾಲಿ ಅಧ್ಯಕ್ಷರಾದ ರಾಜೀವ ಎನ್.ಶ್ರೀಯಾನ್, ಮುಖ್ಯಕಾರ್ಯನಿರ್ವಹಣಾಧಿಕಾರಿ ಉದಯಕುಮಾರ್ ಹಟ್ಟಿಯಂಗಡಿ ಅವರನ್ನು ಸನ್ಮಾನಿಸಲಾಯಿತು.
ಸಂಘದ ಉಪಾಧ್ಯಕ್ಷೆ ಸುಮತಿ ಬಿ.ಮೊಗವೀರ, ನಿರ್ದೇಶಕರಾದ ರವೀಂದ್ರ ಜಿ.ಮೆಂಡನ್, ಶ್ರೀಮತಿ ಶ್ಯಾಮಲ ಜಿ.ಚಂದನ್, ರಾಮ ಮೊಗವೀರ ಕೊಡ್ಲಾಡಿ, ರಾಮ ಮೊಗವೀರ ಬೈಂದೂರು, ಶ್ರೀಮತಿ ಸುಶೀಲ ಕೆ.ಮೊಗವೀರ, ಶ್ರೀಮತಿ ವನಿತಾ ಎಸ್.ಮೊಗವೀರ, ಲೋಹಿತಾಶ್ವ ಆರ್.ಕುಂದರ್, ಶ್ರೀಮತಿ ಬಾಬಿ ಹಕ್ಲಾಡಿ, ಅಶೋಕ್ ಆರ್ ಸುವರ್ಣ ಉಪಸ್ಥಿತರಿದ್ದರು.
ಭಾಸ್ಕರ ಬಟ್ಟೆಕುದ್ರು ಪ್ರಾರ್ಥನೆ ಮಾಡಿದರು. ಅಧ್ಯಕ್ಷರಾದ ರಾಜೀವ ಎನ್. ಶ್ರೀಯಾನ್ ಸ್ವಾಗತಿಸಿದರು, ಮುಖ್ಯಕಾರ್ಯನಿರ್ವಹಣಾಧಿಕಾರಿ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಪತ್ರಕರ್ತ ಸುಬ್ರಹ್ಮಣ್ಯ ಪಡುಕೋಣೆ ಕಾರ್ಯಕ್ರಮ ನಿರ್ವಹಿಸಿದರು.











