ಕುಂದಾಪುರ ಮಿರರ್ ಸುದ್ದಿ…
ಕುಂದಾಪುರ :ಕೂಟ ಮಹಾಜಗತ್ತು ಸಾಲಿಗ್ರಾಮ (ಬೆಂಗಳೂರು ಅಂಗ ಸಂಸ್ಥೆ) ವತಿಯಿಂದ ಬಸವನಗುಡಿ ರಸ್ತೆಯಲ್ಲಿರುವ ಗುರುನರಸಿಂಹ ಕಲ್ಯಾಣ ಮಂಟಪದಲ್ಲಿ ಭಾನುವಾರ ಹಮ್ಮಿ ಕೊಂಡಿದ್ದ ನರಸಿಂಹ ಪ್ರಶಸ್ತಿ ಪ್ರದಾನ ಮತ್ತು ಪ್ರತಿಭಾ ಪುರಸ್ಕಾರ ಸಮಾರಂಭದಲ್ಲಿ ಕರ್ನಲ್ ಬಿ. ಚಿನ್ಮಯ್, ಲೆಫ್ಟಿನೆಂಟ್ ಕರ್ನಲ್ ಪುಷ್ಪ ಕಫ್ರಿ, ಉದ್ಯಮಿ ಜಿ. ಪ್ರಕಾಶ್ ಮಯ್ಯ, ಡಾ. ಎ.ಎಸ್.ಕೃಷ್ಣಮೂರ್ತಿ ಕಾರಂತ, ಸಮಾಜಸೇವಕ ಕೆ. ತಾರಾನಾಥ ಹೊಳ್ಳ, ಕಲಾವಿದ ಸುದರ್ಶನ ಉರಾಳ ಅವರಿಗೆ ನರಸಿಂಹ ಪ್ರಶಸ್ತಿ ಪ್ರದಾನ ಮಾಡಲಾಯಿತು.
ನ್ಯಾಯಮೂರ್ತಿ ವಿ. ಶ್ರೀಶಾನಂದ, ಕೂಟ ಮಹಾ ಜಗತ್ತು ಸಾಲಿಗ್ರಾಮ ಅಧ್ಯಕ್ಷ ಡಾ.ಪಿ.ಎಂ. ಗಿರಿಧರ ಉಪಾಧ್ಯಾಯ, ಗುರುನರಸಿಂಹ ಬಿಲಿಯನ್ ಫೌಂಡೇಶನ್ ಟ್ರಸ್ಟ್‌ನ ಅಧ್ಯಕ್ಷ ಇ. ಗೋಪಾಲಕೃಷ್ಣ ಹೇರ್ಳೆ ಉಪಸ್ಥಿತರಿದ್ದರು.
ಹೆಚ್ ಗೋಪಾಲಕೃಷ್ಣ ಐತಾಳ ಸ್ವಾಗತಿಸಿ, ಕುಲದೀಪ ಸೋಮಯಾಜಿ ವಂದಿಸಿದರು. ಶಶಿಧರ ಉಪಾಧ್ಯ ನಿರೂಪಿಸಿದರು.











