ಗಂಗೊಳ್ಳಿ ಟೌನ್ ಸೌಹಾರ್ದ ಸಹಕಾರಿಯ ಸಂಸ್ಥಾಪಕರ ಸ್ಮರಣೀಯ ದಿನೋತ್ಸವ

0
717

Click Here

Click Here

ಕುಂದಾಪುರ ಮಿರರ್ ‌ಸುದ್ದಿ…
ಗಂಗೊಳ್ಳಿ :
ಒಂದು ಕಾಲದಲ್ಲಿ ಬಂದರಿನ ಪಟ್ಟಣವಾಗಿ, ಬೇರೆ ದೇಶಗಳೊಂದಿಗೆ ವ್ಯವಹಾರ ನಡೆಸುತ್ತಿದ್ದ ಗಂಗೊಳ್ಳಿಯಲ್ಲಿ ಫಲಾಪೇಕ್ಷೆ ಇಲ್ಲದೆ ಆರಂಭಿಸಿದ್ದ ಗಂಗೊಳ್ಳಿ ಟೌನ್ ಸೌಹಾರ್ದ ಸಹಕಾರಿಯು ಇಂದು ಅವರ ಕನಸಿನಂತೆ ಪರಿಸರದ ಜನರ ಆರ್ಥಿಕತೆಯ ಜೀವಸೆಲೆಯಾಗಿ ಎದ್ದುನಿಂತಿದೆ. ಗ್ರಾಹಕರ ಸೇವೆಗೆ ಪ್ರಥಮ ಆದ್ಯತೆ ಎಂಬ ನೆಲೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಸಹಕಾರಿಯು ಸದೃಢವಾಗಿ ಬೆಳೆದು ನಿಂತಿದೆ ಎಂದು ಸಹಕಾರಿಯ ಅಧ್ಯಕ್ಷ ಎಚ್.ಗಣೇಶ ಕಾಮತ್ ಹೇಳಿದರು.

ಗಂಗೊಳ್ಳಿಯ ಗಂಗೊಳ್ಳಿ ಟೌನ್ ಸೌಹಾರ್ದ ಸಹಕಾರಿಯ ಪ್ರಧಾನ ಕಛೇರಿಯಲ್ಲಿ ಬುಧವಾರ ಜರಗಿದ ಸಹಕಾರಿಯ ಸಂಸ್ಥಾಪಕರ ಸ್ಮರಣೀಯ ದಿನೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಪುಷ್ಪನಮನ ಸಲ್ಲಿಸಿ ಅವರು ಮಾತನಾಡಿದರು.

Click Here

ಸಹಕಾರಿಯ ಉಪಾಧ್ಯಕ್ಷ ಜಿ.ವಿಶ್ವನಾಥ ಆಚಾರ್ಯ, ನಿರ್ದೇಶಕರಾದ ಮಾಧವ ಕಿಣಿ, ಬಿ.ರಾಘವೇಂದ್ರ ಪೈ, ಜಿ.ವೆಂಕಟೇಶ ಶೆಣೈ, ಕೆ.ರಾಮನಾಥ ನಾಯಕ್, ಎಂ.ನಾಗಪ್ರಸಾದ್ ಪೈ, ಕೆ.ಗೋಪಾಲಕೃಷ್ಣ ನಾಯಕ್, ಕಿರಣ್ ಪಿಂಟೊ, ಜಿ.ವೆಂಕಟೇಶ ನಾಯಕ್, ಯು.ವಿಷ್ಣು ಪಡಿಯಾರ್, ಮಾಲಾ ಕೆ.ನಾಯಕ್, ಪಿಗ್ಮಿ ಸಂಗ್ರಾಹಕರು, ಸಿಬ್ಬಂದಿಗಳು ಉಪಸ್ಥಿತರಿದ್ದರು.

ಮುಖ್ಯ ಕಾರ್ಯನಿರ್ವಾಹಕ ಗಣೇಶ ನಾಯಕ್ ಸ್ವಾಗತಿಸಿ ಕಾರ್ಯಕ್ರಮ ನಿರ್ವಹಿಸಿದರು.

Click Here

LEAVE A REPLY

Please enter your comment!
Please enter your name here