ಕೋಟ ಮೂರ್ತೆದಾರರ ಸಹಕಾರಿ ಸಂಘದಿಂದ ರೂ.25,000 ವೈದ್ಯಕೀಯ ನೆರವು

0
786

Click Here

Click Here

ಕುಂದಾಪುರ ಮಿರರ್ ಸುದ್ದಿ…
ಕೋಟ:
ಕೋಟ ಮೂರ್ತೆದಾರರ ಸಹಕಾರಿ ಸಂಘದ ವತಿಯಿಂದ ಸಂಘದ ಸದಸ್ಯರಾದ ಸಾಸ್ತಾನ ಗುಂಡ್ಮಿಯ ಗುಲಾಬಿ ಪೂಜಾರ್ತಿರವರ ಮಗ ಸಾಸ್ತಾನದಲ್ಲಿ ಭೀಕರ ರಸ್ತೆ ಅಪಘಾತದಲ್ಲಿ ಕೈಕಾಲು ಮೂಳೆ ಮುರಿತಕ್ಕೊಳಗಾಗಿ ಚಿಕಿತ್ಸೆ ಪಡೆಯುತ್ತಿರುವ 8ನೇ ತರಗತಿ ವ್ಯಾಸಂಗ ಮಾಡುತ್ತಿರುವ ಪ್ರತಿಭಾನ್ವಿತ ವಿಧ್ಯಾರ್ಥಿ ಕಿಶನ್‍ರವರಿಗೆ ಸಂಘದ ಸದಸ್ಯರ ಸಹಾಯಕ ನಿಧಿಯಿಂದ ಚಿಕಿತ್ಸೆಗಾಗಿ ರೂ. 25000 ಮೊತ್ತದ ಚೆಕ್‍ನ್ನು ಸಂಘದ ಅಧ್ಯಕ್ಷ ಕೆ. ಕೊರಗ ಪೂಜಾರಿ ಗುಂಡ್ಮಿಯ ಸಂತ್ರಸ್ತ ಬಾಲಕನ ಮೆನೆಗೆ ತೆರಳಿ ವಿತರಿಸಿದರು.

Click Here

ಈ ಸಂದರ್ಭದಲ್ಲಿ ಸಂಘದ ನಿರ್ದೇಶಕರಾದ ಕೊರಗಪ್ಪ ಸುವರ್ಣ, ಜಿ. ಸಂಜೀವ ಪೂಜಾರಿ, ಸಂಘದ ಪ್ರಧಾನ ವ್ಯವಸ್ಥಾಪಕ ಜಗದೀಶ್ ಕೆಮ್ಮಣ್ಣು, ಸಾಸ್ತಾನ ಶಾಖೆಯ ವ್ಯವಸ್ಥಾಪಕರಾದ ರಮೇಶ್ ಪೂಜಾರಿ ಬಾರ್ಕೂರು ಉಪಸ್ಥಿತರಿದ್ದರು.

Click Here

LEAVE A REPLY

Please enter your comment!
Please enter your name here