ಸಾಲಿಗ್ರಾಮದಲ್ಲಿ ನಾದ ಲಹರಿ 25 ವೀಣೆಗಳ ವಿಣಾವಾದನ

0
312

Click Here

Click Here

ಕುಂದಾಪುರ ಮಿರರ್ ಸುದ್ದಿ…

ಕುಂದಾಪುರ: ಕೂಟ ಮಹಾ ಜಗತ್ತು ಸಾಲಿಗ್ರಾಮ ಅಂಗ ಸಂಸ್ಥೆ ಇದರ ಮಹಿಳಾ ವೇದಿಕೆಯ ರಜತ ಸಿರಿ ಸಂಭ್ರಮ – 2025 ಇದರ ಕಾರ್ಯಕ್ರಮದ ಅಂಗವಾಗಿ ನಾದಲಹರಿ ಎನ್ನುವ 25 ವೀಣಾ ವಾದಕರ ಸಮೂಹ ವೀಣಾ ವಾದನದ ಸಾಲಿಗ್ರಾಮದ ಪರಿಸರದಲ್ಲಿ ಪ್ರಥಮ ಬಾರಿಗೆ ವಿಶೇಷ ಕಾರ್ಯಕ್ರಮ ನಡೆಯಿತು.

ಪಾರಂಪಳ್ಳಿಯ ಸಂಗೀತ ವಿದ್ವಾನ್ ವೀಣಾ ಗುರು ದಿ. ರಾಮಚಂದ್ರ ಐತಾಳ ಇವರಿಂದ ಸ್ಥಾಪಿತವಾದ ಕಲಾ ಶ್ರೀ ಸಂಗೀತ ಶಾಲೆಯ ವೀಣಾ ಗುರು ಸುಮಂಗಲಿ ಸುಧಾಕರ ನಾಡ ಇವರ ಸಾರಥ್ಯದಲ್ಲಿ ರಾಗತಾಳ ಕಲಾ ಶಾಲೆ ಬ್ರಹ್ಮಾವರ ಇದರ ವೀಣಾ ಗುರು ಸುಷ್ಮಾ ಐತಾಳ್ ಮತ್ತು ರಮಾ ಎಸ್. ಎನ್. ಉಪಾಧ್ಯ ಇವರ ಸಹಕಾರದಲ್ಲಿ ಈ ಎರಡು ಸಂಗೀತ ಶಾಲೆಯ ವಿದ್ಯಾರ್ಥಿಗಳೊಂದಿಗೆ 25 ಜನರಿಂದ ವೀಣಾ ಮಾದನ ಕಾರ್ಯಕ್ರಮ ಸಂಪನ್ನಗೊಂಡಿತು.

Click Here

ಹಿಮ್ಮೇಳನದಲ್ಲಿ ವಿದ್ವಾನ್ ಬಾಲಚಂದ್ರ ಭಾಗವತ್ ಇವರು ಮೃದಂಗದಲ್ಲಿ ಹಾಗೂ ಕೀಬೋರ್ಡ್‍ನಲ್ಲಿ ವಿಶ್ವಂಬರ ಆಲ್ಸೆ ಮತ್ತು ವಿವರಣೆಯಲ್ಲಿ ಶುಭ ಭಾಗವತ್ ಸಹಕರಿಸಿದರು.

ಮಹಿಳಾ ವೇದಿಕೆಯ ಅಧ್ಯಕ್ಷೆ ಯಸೋದ .ಸಿ. ಹೊಳ್ಳ ಎಲ್ಲಾ ಕಲಾವದರನ್ನು ಗೌರವಿಸಿದರು.

ಈ ಸಂದರ್ಭದಲ್ಲಿ ಕಾರ್ಯಕ್ರಮದ ಉದ್ಘಾಟಕರಾಗಿ ಎನ್.ಐ.ಟಿ.ಕೆ .ಸುರತ್ಕಲ್ ಎಸೋಸಿಯೇಟ್ ಪ್ರೋಫೆಸರ್ ಸುಪ್ರಭಾ ಕೆ.ಆರ್, ಡಾ. ಶೃತಿ ಬಲ್ಲಾಳ ಉಡುಪಿ, ವೀಣಾ ವಿಧುಸಷಿ ಪವನ. ಬಿ. ಆಚಾರ್ಯ ಮಣಿಪಾಲ , ಶ್ರೀ ಗುರುನರಸಿಂಹ ದೇವಸ್ಥಾನದ ಆಡಳಿತ ಮಂಡಳಿ ಅಧ್ಯಕ್ಷ ಡಾ. ಕೆ .ಎಸ್. ಕಾರಂತ, ಕೂಟಮಹಾ ಜಗತ್ತು ಕೇಂದ್ರ ಅಧ್ಯಕ್ಷ ಹೆಚ್ ಸತೀಶ್ ಹಂದೆ , ಅಂಗ ಸಂಸ್ಥೆಯ ಅಧ್ಯಕ್ಷ ಪಿ.ಸಿ .ಹೊಳ್ಳ ಹಾಗೂ ಅನೇಕ ಗಣ್ಯರು ಉಪಸ್ಥಿತರಿದ್ದರು.

Click Here

LEAVE A REPLY

Please enter your comment!
Please enter your name here