
ಕುಂದಾಪುರ ಮಿರರ್ ಸುದ್ದಿ…
ಕುಂದಾಪುರ :ಮಾನಂಜೆ ವ್ಯವಸಾಯ ಸೇವಾ ಸಹಕಾರಿ ಸಂಘ ನಿ., ಮಾನಂಜೆ ಮತ್ತು ಅವಿಭಜಿತ ಕುಂದಾಪುರ ತಾಲೂಕು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳು ಹಾಗೂ ಅವಿಭಜಿತ ಕುಂದಾಪುರ ತಾಲೂಕು ಪ್ರಾಥಮಿಕ ಕೃಷಿಪತ್ತಿನ ಸಹಕಾರ ಸಂಘಗಳ ನೌಕರರ ಒಕ್ಕೂಟದ ಪ್ರಾಯೋಜಕತ್ವದಲ್ಲಿ ಆಡಳಿತ ಮಂಡಳಿಯ ಮತ್ತು ಸಿಬ್ಬಂದಿಗಳ ಕ್ರೀಡಾಕೂಟ ‘ಕ್ರೀಡಾಮೃತ 2026’ ಜನವರಿ 4 ಆದಿತ್ಯವಾರ ಬೆಳಿಗ್ಗೆ 8.30ರಿಂದ ಸಂಜೆ 5 ಗಂಟೆಯ ತನಕ ಕುಂದಾಪುರ ಗಾಂಧಿ ಮೈದಾನದಲ್ಲಿ ನಡೆಯಲಿದೆ ಎಂದು ದ,ಕ ಜಿಲ್ಲಾ ಕೇಂದ್ರ ಬ್ಯಾಂಕ್ ನಿರ್ದೇಶಕ ಎಂ.ಮಹೇಶ ಹೆಗ್ಡೆ ಹೇಳಿದರು.
ಅವರು ಕುಂದಾಪುರ ಪ್ರೆಸ್ ಕ್ಲಬ್‍ನಲ್ಲಿ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿ, 35 ವರ್ಷದ ವರೆಗೆ ಪುರುಷರ ವಿಭಾಗದಲ್ಲಿ 100 ಮೀಟರ್ ಓಟ, 200 ಮೀಟರ್ ಓಟ, ಲಾಂಗ್ ಜಂಪ್, ಗುಂಡೆಸೆತ, ರಿಂಗ್ ಇನ್ ದ ವಿಕೇಟ್, ಮಹಿಳೆಯವರಿಗೆ 100 ಮೀಟರ್ ಓಟ, 200 ಮೀಟರ್ ಓಟ, ಗುಂಡೆಸೆತ, ಸಂಗೀತ ಕುರ್ಚಿ, ರಿಂಗ್ ಇನ್ ದ ವಿಕೇಟ್ ಸ್ಪರ್ಧೆಗಳು ನಡೆಯಲಿದೆ.
35ರಿಂದ 50 ವರ್ಷದ ವರೆಗೆ ಪುರುಷರಿಗೆ 100 ಮೀಟರ್ ಓಟ, ಗುಂಡೆಸೆತ, ಚಕ್ರ ಎಸೆತ, ಸಹಕಾರಿ ಕ್ವೀಜ್, ರಿಂಗ್ ಇನ್ ದ ವಿಕೇಟ್, ಮಹಿಳೆಯರಿಗೆ 100 ಮೀಟರ್ ಓಟ, ಗುಂಡೆಸೆತ, ಸಂಗೀತ ಕುರ್ಚಿ, ಸಹಕಾರಿ ಕ್ವೀಜ್, ರಿಂಗ್ ಇನ್ ದ ವಿಕೇಟ್ ಸ್ಪರ್ಧೆಗಳು ನಡೆಯಲಿದೆ.
50 ವರ್ಷದಿಂದ 60 ವರ್ಷದ ವರೆಗೆ 400 ಮೀಟರ್ ವೇಗದ ನಡಿಗೆ, ಗುಂಡೆಸೆತ, ಬಾಲ್ ತ್ರೋ, ರಿಂಗ್ ಇನ್ ದ ವಿಕೇಟ್, ಸಹಕಾರಿ ಕ್ವೀಜ್, ಮಹಿಳೆಯರಿಗೆ 400 ಮೀಟರ್ ವೇಗದ ನಡಿಗೆ, ಗುಂಡೆಸೆತ, ಸಂಗೀತ ಕುರ್ಚಿ, ರಿಂಗ್ ಇನ್ ದ ವಿಕೇಟ್, ಸಹಕಾರಿ ಕ್ವೀಜ್ ಸ್ಪರ್ಧೆಗಳು ನಡೆಯಲಿದೆ.
ನಿರ್ದೇಶಕ ಮಂಡಳಿಗೆ 50 ವರ್ಷದ ವಯೋಮಾನದವರೆಗೆ 100 ಮೀಟರ್ ಓಟ, ಗುಂಡೆಸೆತ, ಚಕ್ರ ಎಸೆತ, ರಿಂಗ್ ಇನ್ ದ ವಿಕೇಟ್, ಬಾಲ್ ತ್ರೋ, ಮಹಿಳೆಯರಿಗೆ 100 ಮೀಟರ್ ಓಟ, ಗುಂಡೆಸೆತ, ಚಕ್ರ ಎಸೆತ, ಸಂಗೀತ ಕುರ್ಚಿ, ರಿಂಗ್ ಇನ್ ದ ವಿಕೇಟ್ ಸ್ಪರ್ಧೆಗಳು ನಡೆಯಲಿವೆ.
51 ವರ್ಷ ಮೇಲ್ಪಟ್ಟು ವಯೋಮಾನದವರೆಗೆ ಪುರುಷರಿಗೆ 400 ಮೀಟರ್ ವೇಗದ ನಡಿಗೆ, ಗುಂಡೆಸೆತ, ರಿಂಗ್ ಇನ್ ದ ವಿಕೇಟ್, ಬಾಲ್ ತ್ರೋ, ಮಹಿಳೆಯರಿಗೆ 400 ಮೀಟರ್ ವೇಗದ ನಡಿಗೆ, ಗುಂಡೆಸೆತ, ಸಂಗೀತ ಕುರ್ಚಿ, ಬಾಲ್ ತ್ರೋ ಸ್ಪರ್ಧೆಗಳು ನಡೆಯಲಿವೆ.
ಅಲ್ಲದೆ 400 ಮೀಟರ್ ರಿಲೇ, ಹಗ್ಗ ಜಗ್ಗಾಟ, ವಾಲಿಬಾಲ್, ಶೆಟಲ್ ಬ್ಯಾಡ್ಮಿಂಟನ್ (ಡಬ್ಬಲ್ಸ್ ಮಾತ್ರ) ಗುಂಪು ಆಟಗಳು ನಡೆಯಲಿವೆ.
ಕ್ರೀಡಾಕೂಟ ಆರಂಭದಲ್ಲಿ ಆಕರ್ಷಕ ಪಥಸಂಚಲನ ನಡೆಯಲಿದೆ. ಕಾರ್ಯವ್ಯಾಪ್ತಿಯ 23 ಪ್ರಾಥಮಿಕ ಕೃಷಿ ಪತ್ತಿ ಸಹಕಾರ ಸಂಘಗಳ ಆಡಳಿತ ಮಂಡಳಿಯ ಸದಸ್ಯರು ಮತ್ತು ಸಿಬ್ಬಂದಿ ವರ್ಗ ಸಮವಸ್ತ್ರದಾರಿಗಳಾಗಿ ಈ ಪಥ ಸಂಚÀಲನದಲ್ಲಿ ಪಾಲ್ಗೊಳ್ಳಲಿದ್ದಾರೆ. ಪಥ ಸಂಚಲನದಲ್ಲಿ ವಿಜೇತರಾದ ತಂಡಕ್ಕೆ ಪ್ರಥಮ, ದ್ವಿತೀಯ, ತೃತೀಯ ತಂಡಕ್ಕೆ ಶಾಶ್ವತ ಫಲಕ ನೀಡಲಾಗುವುದು ಎಂದರು.
ಇದು ಅವಿಭಜಿತ ಕುಂದಾಪುರ ತಾಲೂಕಿನ 23 ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ಆಡಳಿತ ಮಂಡಳಿ ಮತ್ತು ಸಿಬ್ಬಂದಿಗಳೊಳಗೆ ನೆಡೆಯಲಿದೆ. ಸುಮಾರು 700ಕ್ಕೂ ಮಿಕ್ಕಿ ಮಂಡಳಿಯ ಸದಸ್ಯರು ಮತ್ತು ನೌಕರರು ಪಾಲ್ಗೊಳ್ಳಲಿದ್ದಾರೆ.
ಕಾರ್ಯಕ್ರಮದ ಉದ್ಘಾಟನೆಯನ್ನು ದ.ಕ ಜಿಲ್ಲಾ ಕೇಂದ್ರ ಬ್ಯಾಂಕ್ ಅಧ್ಯಕ್ಷರಾದ ಡಾ.ಎಂ.ಎನ್ ರಾಜೇಂದ್ರ ಕುಮಾರ್ ನೆರವೇರಿಸಲಿದ್ದು, ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಾನಂಜೆ ವ್ಯವಸಾಯ ಸೇವಾ ಸಹಕಾರಿ ಸಂಘದ ಅಧ್ಯಕ್ಷರಾದ ಪ್ರದೀಪ್ ಯಡಿಯಾಳ ವಹಿಸಲಿದ್ದು, ಕ್ರೀಡಾ ಜ್ಯೋತಿ ಪ್ರಜ್ವಲನೆಯನ್ನು ದ.ಕ. ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನ ನಿರ್ದೇಶಕರಾದ ಎಂ. ಮಹೇಶ್ ಹೆಗ್ಡೆ ನೆರವೇರಿಸಲಿದ್ದಾರೆ ಎಂದರು.
ಪತ್ರಿಕಾಗೋಷ್ಟಿಯಲ್ಲಿ ಖಂಬದಕೋಣೆ ರೈತರ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಕೆ.ಎಂ.ಎಫ್ ನಿರ್ದೇಶಕ ಎಸ್.ಪ್ರಕಾಶ್ಚಂದ್ರ ಶೆಟ್ಟಿ, ವಂಡ್ಸೆ ವ್ಯವಸಾಯ ಸೇವಾ ಸಂಘದ ಅಧ್ಯಕ್ಷ ಎನ್.ಮಂಜಯ್ಯ ಶೆಟ್ಟಿ ಸಬ್ಲಾಡಿ, ಕೋಟೇಶ್ವರ ವ್ಯವಸಾಯ ಸೇವಾ ಸಹಕಾರಿ ಸಂಘದ ಮುಖ್ಯಕಾರ್ಯನಿರ್ವಹಣಾಧಿಕಾರಿ ವಿಶ್ವೇಶ್ವರ ಐತಾಳ್ ಉಪಸ್ಥಿತರಿದ್ದರು.










