ಕಟ್ ಬೆಲ್ತೂರು ಗ್ರಾಮೋತ್ಸವ

0
22
filter: 0; fileterIntensity: 0.0; filterMask: 0; captureOrientation: 0;?algolist: 0;?multi-frame: 1;?brp_mask:8;?brp_del_th:0.0170,0.0001;?brp_del_sen:0.1300,0.1300;?motionR: 0;?delta:null;?module: photo;hw-remosaic: false;touch: (-1.0, -1.0);sceneMode: 7864320;cct_value: 0;AI_Scene: (-1, -1);aec_lux: 185.95107;aec_lux_index: 0;albedo: ;confidence: ;motionLevel: 0;weatherinfo: null;temperature: 34;

Click Here

Click Here

ಕುಂದಾಪುರ ಮಿರರ್ ಸುದ್ದಿ…

ಬೈಂದೂರು : ಬೈಂದೂರು ಶಾಸಕ ಗುರುರಾಜ್ ಶೆಟ್ಟಿ ಗಂಟಿಹೊಳೆ ಅವರ ಪರಿಕಲ್ಪನೆ ಯ ಬೈಂದೂರು ಉತ್ಸವ 2026 ಕಾರ್ಮಕ್ರಮದ ಪ್ರಯುಕ್ತ ಕಟ್ ಬೆಲ್ತೂರು ಮತ್ತು ದೇವಲ್ಕುಂದ ಗ್ರಾಮಗಳ ಹಾಗೂ ಸರ್ಕಾರಿ ವಿವಿಧ ಇಲಾಖೆಗಳ ಸಹಭಾಗಿತ್ವದಲ್ಲಿ ಗ್ರಾಮೋತ್ಸವ ಕಾರ್ಯಕ್ರಮ ಆದಿತ್ಯವಾರ ಗ್ರಾಮ ಪಂಚಾಯತ್ ಕಟ್ ಬೆಲ್ತೂರು ವಠಾರದಲ್ಲಿ ನಡೆಯಿತು.

ಕೊರಗ ಸಮುದಾಯದ ಹಿರಿಯರಾದ ಬೋಳ ಕೊರಗ ಅವರು ಕಟ್ ಬೆಲ್ತೂರು ಮತ್ತು ದೇವಲ್ಕುಂದ ಗ್ರಾಮಗಳ ಗ್ರಾಮೋತ್ಸವ ಕಾರ್ಯಕ್ರಮ ಉದ್ಘಾಟಿಸಿದರು.

ಕಟ್ ಬೆಲ್ತೂರು ಗ್ರಾಮ ಪಂಚಾಯತ್ ವೈಶಾಲಿ ಗ್ರಾಮೋತ್ಸವದ ಅಧ್ಯಕ್ಷತೆ ವಹಿಸಿದ್ದರು.

Click Here

ಕಟ್ ಬೆಲ್ತೂರು ಗ್ರಾಮ ಪಂಚಾಯತ್ ಉಪಾಧ್ಯಕ್ಷ  ರಾಮ ಕೆ ಶೆಟ್ಟಿ, ಸದಸ್ಯರಾದ ವಿಮಲ, ಶ್ವೇತಾ ದೇವಾಡಿಗ, ಶಾಲಿನಿ ಶೆಟ್ಟಿ, ಅಶೋಕ್ ಬಳೆಗಾರ್, ಶರತ್ ಕುಮಾರ್ ಶೆಟ್ಟಿ, ಜ್ಯೋತಿ, ಸವಿತಾ ರಾಘವೇಂದ್ರ, ಸಂಜೀವಿನಿ ಒಕ್ಕೂಟದ ಅಧ್ಯಕ್ಷೆ ಅನುಸೂಯ ಆಚಾರ್, ವೇದಿಕೆಯಲ್ಲಿ ಇದ್ದರು.

ಬೈಂದೂರು ಉತ್ಸವ ಸಮಿತಿ ಉಪಾಧ್ಯಕ್ಷೆ ಅನಿತಾ ಆರ್. ಕೆ ಮರವಂತೆ, ಸಮಿತಿ ಸಂಚಾಲಕ ಶ್ರೀಗಣೇಶ್ ಗಾಣಿಗ ಉಪ್ಪುಂದ ಕ್ರೀಡಾಕೂಟದ ವಿಜೇತರಿಗೆ ಬಹುಮಾನ ವಿತರಿಸಿದರು.

ಕಟ್ ಬೆಲ್ತೂರು ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ರೇಖಾ ಸ್ವಾಗತಿಸಿದರು. ಹೆಮ್ಮಾಡಿ ಜನತಾ ಪ್ರೌಢಶಾಲಾ ಶಿಕ್ಷಕ ಜಗದೀಶ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ಕಟ್ ಬೆಲ್ತೂರು ಗ್ರಾಮೋತ್ಸವ ಸಂಚಾಲಕ ಸದಾಶಿವ ಶೆಟ್ಟಿ ವಂದಿಸಿದರು.

Click Here

LEAVE A REPLY

Please enter your comment!
Please enter your name here