ಆನೆಗುಡ್ಡೆ ಶ್ರೀ ವಿನಾಯಕ ದೇವಸ್ಥಾನಕ್ಕೆ ಪುತ್ತಿಗೆಮಠದ ಶ್ರೀ ಶ್ರೀ ಸುಗುಣೇಂದ್ರ ತೀರ್ಥ ಶ್ರೀ ಪಾದಂಗಳ ಭೇಟಿ

0
609

Click Here

Click Here

ಕುಂದಾಪುರ ಮಿರರ್ ಸುದ್ದಿ…

ಕುಂದಾಪುರ: ಉಡುಪಿ ಕೃಷ್ಣ ಮಠದಲ್ಲಿ ಎರಡು ವರ್ಷದ ಯಶಸ್ವಿ ಪರ್ಯಾಯವನ್ನು ಪೂರೈಸಿದ ಪುತ್ತಿಗೆಮಠದ ಶ್ರೀ ಶ್ರೀ ಸುಗುಣೇಂದ್ರ ತೀರ್ಥ ಶ್ರೀ ಪಾದಂಗಳವರು ಜ.21 ಬುಧವಾರದಂದು ಆನೆಗುಡ್ಡೆ ಶ್ರೀ ವಿನಾಯಕ ದೇವಸ್ಥಾನವನ್ನು ಸಂದರ್ಶಿಸಿ ಈ ದೇವರಿಗೆ ವಿಶೇಷ ಮಂಗಳಾರತಿಯನ್ನು ನೆರವೇರಿಸಿದರು.

Click Here

ಈ ಸಂದರ್ಭದಲ್ಲಿ ಪೂರ್ಣಕುಂಭ ಹಾಗೂ ವಾದ್ಯಗೋಷ್ಠಿಗಳೊಂದಿಗೆ ವಿಶ್ರಾಂತ ಆಡಳಿತ ಧರ್ಮದರ್ಶಿಗಳಾದ ಕೆ. ಸೂರ್ಯನಾರಾಯಣ ಉಪಾಧ್ಯಾಯ ಸ್ವಾಮೀಜಿಗಳನ್ನು ಆದರ ಪೂರ್ವಕವಾಗಿ ಬರಮಾಡಿಕೊಂಡು ಪಾದಪೂಜೆ, ಮಾಲಿಕೆ ಮಂಗಳಾರತಿಯನ್ನು ಮಾಡಿ ಪಾದ ಕಾಣಿಕೆಯನ್ನು ಸಮರ್ಪಿಸಿದರು. ಆಡಳಿತ ಧರ್ಮದರ್ಶಿಗಳಾದ ಕೆ ಶ್ರೀ ರಮಣ ಉಪಾಧ್ಯಾಯರು ಉಪಸ್ಥಿತರಿದ್ದು, ಪರ್ಯಾಯ ಅರ್ಚಕರಾದ ಕೆ. ವ್ಯಾಸ ಉಪಾಧ್ಯಾಯ ಸಹೋದರರು ಸ್ವಾಮಿಗಳಿಗೆ ದೇವರ ವಿಶೇಷ ಪ್ರಸಾದವನ್ನು ನೀಡಿದರು.
ಈ ಸಂದರ್ಭದಲ್ಲಿ ಭಕ್ತಾದಿಗಳು, ಆಡಳಿತ ಹಾಗೂ ಅರ್ಚಕ ಸಿಬ್ಬಂದಿಯವರಿಗೆ ಶ್ರೀಗಳು ಫಲ ಮಂತ್ರಾಕ್ಷತೆಯನ್ನು ಕೊಟ್ಟು ಅನುಗ್ರಹಿಸಿದರು.

Click Here

LEAVE A REPLY

Please enter your comment!
Please enter your name here