ಕುಂದಾಪುರ ಮಿರರ್ ಸುದ್ದಿ…
ಕುಂದಾಪುರ: ಹಿಂದೂ ಸಂಗಮ ಆಯೋಜನಾ ಸಮಿತಿ ಸಾಲಿಗ್ರಾಮ ತಾಲೂಕಿನ ಸಾಸ್ತಾನ ಮಂಡಲದ ಆಶ್ರಯದಲ್ಲಿ ಬೃಹತ್ ಹಿಂದೂ ಸಂಗಮ ಹಾಗೂ ಶೋಭಯಾತ್ರೆ ಜ.25ರ ಸಂಜೆ 4.30ಕ್ಕೆ ಜರಗಲಿದೆ.
ಈ ಪ್ರಯುಕ್ತ ಅಪರಾಹ್ನ 3.30ರಿಂದ ಸಾಸ್ತಾನದ ಶಿವಕೃಪಾ ಸಭಾಂಗಣದಿಂದ ಸಮಾವೇಶ ನಡೆಯುವ ಕಾರ್ತಿಕೇಯ ಎಸ್ಟೇಟ್ ನಲ್ಲಿ ಬೃಹತ್ ಹಿಂದೂ ಸಂಗಮ ಜರಗಲಿದೆ.
ಕೇಮಾರಿನ ಸಾಂದೀಪನಿಸಾಧನಾಶ್ರಮದ ಶ್ರೀ ಶ್ರೀ ಈಶ ವಿಠಲದಾಸ ಶ್ರೀಪಾದಂಗಳ ಆಶ್ರೀವಚನ ನೀಡಲಿದ್ದು,ಗೌರವ ಉಪಸ್ಥಿತಿಯಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ದಕ್ಷಿಣ ಪ್ರಾಂತ ಕಾರ್ಯವಾಹ ಪ್ರಕಾಶ್ ಎಸ್ ಪಿ ದಿಕ್ಸೂಚಿ ಭಾಷಣಗೈಯಲಿದ್ದಾರೆ.
ಕೋಟ ಅಮೃತೇಶ್ವರೀ ದೇಗುಲದ ಅಧ್ಯಕ್ಷರಾದ ಆನಂದ್ ಸಿ ಕುಂದರ್ ಸೇರಿದಂತೆ ಅನೇಕ ಗಣ್ಯರ ಸಮ್ಮುಖದಲ್ಲಿ ಈ ಸಮಾವೇಶ ನಡೆಯಲಿದೆ ಎಂದು ಸಂಘಟಕರು ತಿಳಿಸಿದ್ದಾರೆ.











