ಜನತಾ ನ್ಯೂ ಇಂಗ್ಲಿಷ್ ಮೀಡಿಯಂ ಸ್ಕೂಲ್ ಕಿರಿಮಂಜೇಶ್ವರದಲ್ಲಿ ಸಂಪನ್ನಗೊಂಡ ಎನ್ ಎಂ ಎಂ ಎಸ್ ತರಬೇತಿ ತರಗತಿಗಳ ಸಮಾರೋಪ ಸಮಾರಂಭ

0
141

Click Here

Click Here

ಕುಂದಾಪುರ ಮಿರರ್ ಸುದ್ದಿ…

ಕಿರಿಮಂಜೇಶ್ವರ: ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ ಮತ್ತು ಕ್ಷೇತ್ರ ಸಂಪನ್ಮೂಲ ಕೇಂದ್ರ ಬೈಂದೂರು ಹಾಗೂ ಜನತಾ ನ್ಯೂ ಇಂಗ್ಲಿಷ್ ಮೀಡಿಯಂ ಸ್ಕೂಲ್, ಕಿರಿಮಂಜೇಶ್ವರ ಇವರ ಸಂಯುಕ್ತ ಆಶ್ರಯದಲ್ಲಿ ಜನವರಿ 25 ರಂದು ಎನ್.ಎಂ.ಎಂ.ಎಸ್ ತರಬೇತಿ ತರಗತಿಗಳ ಸಮರೋಪ ಸಮಾರಂಭವು ಬಹಳ ಅದ್ದೂರಿಯಾಗಿ ನಡೆಯಿತು. ಕಾರ್ಯಕ್ರಮವನ್ನು ಬೈಂದೂರು ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ನಾಗೇಶ್ ನಾಯ್ಕ್ ಅವರು ಉದ್ಘಾಟನೆ ಮಾಡಿ ಮಕ್ಕಳಲ್ಲಿ ಸ್ಪರ್ಧಾತ್ಮಕ ಮನೋಭಾವನೆಯನ್ನು ಮೂಡಿಸುವಲ್ಲಿ ಈ ತರಬೇತಿ ತರಗತಿಗಳು ವಿದ್ಯಾರ್ಥಿಗಳಿಗೆ ಸಹಕಾರಿಯಾಗಲಿದೆ ಮುಂದಿನ ಜೀವನಕ್ಕೂ ಕೂಡ ಇದು ಉಪಯುಕ್ತ ಎಂದು ಹೇಳಿದರು.

ಎನ್ಎಂಎಂಎಸ್ ತರಗತಿಗಳ ನೋಡಲ್ ಯೋಗಿಶ್ ಕೆ ಇವರು ತಮ್ಮ ಪ್ರಾಸ್ತಾವಿಕ ಮಾತಿನಲ್ಲಿ ಎನ್ಎಂಎಂಎಸ್ ತರಬೇತಿ ಹಾಗೂ ಅದರ ಸಾಧನೆ ವಿದ್ಯಾರ್ಥಿಗಳಿಗೆ ಎಷ್ಟು ಮುಖ್ಯವಾದದ್ದು ಹಾಗೆಯೇ ಅನುದಾನ ರಹಿತ ಶಾಲೆಯೊಂದು ಇಂತಹ ಸರಕಾರಿ ಶಾಲೆಯ ವಿದ್ಯಾರ್ಥಿಗಳಿಗೆ ತರಬೇತಿ ಕಾರ್ಯಕ್ರಮಗಳಿಗೆ ಅವಕಾಶವನ್ನು ನೀಡುತ್ತಿರುವುದನ್ನ ಶ್ಲಾಘಿಸಿದರು.

Click Here

ಕಾರ್ಯಕ್ರಮಕ್ಕೆ ಜನತಾ ಸಮೂಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷರಾದಂತಹ ಗಣೇಶ ಮೊಗವೀರರವರು ಶುಭಹಾರೈಸಿದರು.

ಕಾರ್ಯಕ್ರಮದಲ್ಲಿ ಬೈಂದೂರು ತಾಲೂಕು ಟಿಪಿಓ ವಿಜಯ್ ಕುಮಾರ್ ಶೆಟ್ಟಿ, ಕಿರಿಮಂಜೇಶ್ವರ ವಲಯದ ಸಿ ಆರ್ ಪಿ ಗಣೇಶ್ ಪೂಜಾರಿ, ಜನತಾ ನ್ಯೂ ಇಂಗ್ಲಿಷ್ ಮೀಡಿಯಂ ಶಾಲೆಯ ಸಂಯೋಜಕರಾದಂತಹ ಸುಬ್ರಹ್ಮಣ್ಯ ಮರಾಠಿ, ಎನ್ ಎಂ ಎಂ ಎಸ್ ತರಗತಿಗಳ ಸಂಪನ್ಮೂಲ ಶಿಕ್ಷಕರುಗಳು, ಪೋಷಕರುಗಳು, ವಿದ್ಯಾರ್ಥಿಗಳು ಭಾಗವಹಿಸಿದರು. ಸಂಪನ್ಮೂಲ ಶಿಕ್ಷಕರುಗಳು ಹಾಗೂ ತರಬೇತಿ ಹೊಂದಿದ ವಿದ್ಯಾರ್ಥಿಗಳು ತಮ್ಮ ಅನಿಸಿಕೆಗಳನ್ನ ಹಂಚಿಕೊಳ್ಳುವುದರ ಮೂಲಕ ಸಂಸ್ಥೆಯ ಅಧ್ಯಕ್ಷರು ಹಾಗೂ ಸಂಸ್ಥೆಯಲ್ಲಿ ನೀಡಿದಂತಹ ಆದರಾತಿಥ್ಯಗಳನ್ನ ನೆನೆದು ಸಂತಸವನ್ನು ವ್ಯಕ್ತಪಡಿಸಿದರು.

ಕಾರ್ಯಕ್ರಮವನ್ನು ಯೋಗ ಶಿಕ್ಷಕರಾದಂತಹ ಮಂಜುನಾಥ್ ಇವರು ನಿರೂಪಿಸಿ, ಸಂಯೋಜಕ ಸುಬ್ರಮಣ್ಯ ಮರಾಠಿ ಸ್ವಾಗತಿಸಿ, ಶಿಕ್ಷಕಿ ಅನಿತಾ ವಂದಿಸಿದರು.

Click Here

LEAVE A REPLY

Please enter your comment!
Please enter your name here