ಕುಂದಾಪುರ ಮಿರರ್ ಸುದ್ದಿ…
ಕುಂದಾಪುರ: ಹೊಸಾಡು ಗ್ರಾಮದ ಅರಾಟೆ ಲಕ್ಷ್ ರಾಜೇಶ್ ಜ.24-2026ರಂದು ತಮಿಳುನಾಡಿನ ಪುದುಚೇರಿಯಲ್ಲಿ ಜರುಗಿದ ರಾಷ್ಟ್ರ ಮಟ್ಟದ 2ನೇ “”WEKIE CHAMP” ” ಮೆಂಟಲ್ ಅರಿತಮೆಟಿಕ್ ಚಾಂಪಿಯನ್ ಶಿಪ್ ನಲ್ಲಿ ಚಿನ್ನದ ಬಹುಮಾನದೊಂದಿಗೆ ಪ್ರಶಸ್ತಿ ಪಡೆದಿದ್ದಾರೆ. ಮಾತ್ರವಲ್ಲದೆ ಪುದುಚೇರಿಯಲ್ಲಿ ಜ.25 ನಡೆದ 21ನೇ ರಾಷ್ಟ್ರ ಮಟ್ಟದ ಅಬಕಾಸ್ ಮೆಂಟಲ್ ಅರ್ಥ್‍ಮೆಟಿಕ್ ಚಾಂಪಿಯನ್ ಶಿಫ್ ನಲ್ಲಿ ಕುಂದಾಪುರ ಸೆಂಟರ್‍ನಿಂದ ಭಾಗವಹಿಸಿದ 85 ವಿದ್ಯಾರ್ಥಿಗಳಲ್ಲಿ ಲಕ್ಷ್ ರಾಜೇಶ್ ಸೂಪರ್ ಚಾಂಪಿಯನ್ ಪ್ರಶಸ್ತಿಯನ್ನು ಪಡೆದಿದ್ದಾರೆ. ಈ ಸ್ಪರ್ಧೆಯಲ್ಲಿ ರಾಷ್ಟ್ರದ ವಿವಿಧ ಭಾಗಗಳಿಂದ 2200 ವಿದ್ಯಾರ್ಥಿಗಳು ಭಾಗವಹಿಸಿದ್ದರು.
ಐಪಿಎ ಕುಂದಾಪುರ ಸೆಂಟರಿನ ಪ್ರಸನ್ನ ಕೆ.ಬಿ., ಮಹಾಲಕ್ಷ್ಮಿ, ಮತ್ತು ದೀಪಾ ಇವರುಗಳು ತರಬೇತಿ ನೀಡಿದ್ದಾರೆ. ಪ್ರಸ್ತುತ ಕುಂದಾಪುರದ ಓಕ್‍ವುಡ್ ಇಂಡಿಯನ್ ಸ್ಕೂಲಿನಲ್ಲಿ 5ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ. ಲಕ್ಸ್ ರಾಜೇಶ್ ಅರಾಟೆ ರೇಷ್ಮಾ ರಾಜೇಶ್ ದಂಪತಿ ಪುತ್ರ.











