ಕುಂದಾಪುರ :ವಾಣಿಜ್ಯ ಬ್ಯಾಂಕುಗಳನ್ನು ಮೀರಿ ಕೃಷಿಪತ್ತಿನ ಸಹಕಾರ ಸಂಘಗಳು ಬೆಳೆಯುತ್ತಿವೆ – ಕಿರಣ್ ಕುಮಾರ್ ಕೊಡ್ಗಿ

0
16

Click Here

Click Here

ಮಾನಂಜೆ ವ್ಯವಸಾಯ ಸೇವಾ ಸಹಕಾರ ಸಂಘದ ಅಮೃತ ಮಹೋತ್ಸವ – ಪ್ರಧಾನ ಕಛೇರಿಯ ಲಿಫ್ಟ್, ಬಸ್ ಪ್ರಯಾಣಿಕರ ತಂಗುದಾಣ, ಹಳ್ಳಿಹೊಳೆ ಶಾಖೆಯಲ್ಲಿ ಮಾಸ್ ಅಡಿಕೆ ಖರೀದಿ ಗೋದಾಮ ಉದ್ಘಾಟನೆ

ಕುಂದಾಪುರ ಮಿರರ್ ಸುದ್ದಿ…

ಕುಂದಾಪುರ :ಇವತ್ತು ವಾಣಿಜ್ಯ ಬ್ಯಾಂಕುಗಳನ್ನು ಮೀರಿ ಕೃಷಿಪತ್ತಿನ ಸಹಕಾರ ಸಂಘಗಳು ಬೆಳೆಯುತ್ತಿವೆ. ಮಾನಂಜೆ ವ್ಯವಸಾಯ ಸೇವಾ ಸಹಕಾರಿ ಸಂಘದ ಬೆಳವಣಿಗೆ, ಇವರು ಸದಸ್ಯರಿಗೆ ನೀಡುತ್ತಿರುವ ಸೌಲಭ್ಯಗಳು ಕೂಡಾ ಅದ್ಬುತ. ರೈತರು, ಉದ್ಯಮಿಗಳಿಗೆ ಅವರ ಅವಶ್ಯಕತೆಗೆ ತಕ್ಕಂತೆ ಆರ್ಥಿಕ ಸಹಕಾರವನ್ನು ನೀಡುತ್ತಾ, ಅವರ ಆರ್ಥಿಕ ಬೆಳವಣಿಗೆಗೆ ಕಾರಣವಾಗುವುದರೊಂದಿಗೆ ಸಂಘವು ಪ್ರಗತಿ ಸಾಧಿಸಿದೆ. ಈ ಸಂಘ ಶತಮಾನೋತ್ಸವ ಆಚರಿಸಿಕೊಳ್ಳಲಿ ಕುಂದಾಪುರ ವಿಧಾನಸಭಾ ಕ್ಷೇತ್ರದ ಶಾಸಕ ಎ.ಕಿರಣ ಕುಮಾರ್ ಕೊಡ್ಗಿ ಹೇಳಿದರು.

ಮಾನಂಜೆ ವ್ಯವಸಾಯ ಸೇವಾ ಸಹಕಾರ ಸಂಘ ನಿ., ಕಮಲಶಿಲೆ ಇದರ ಅಮೃತ ಮಹೋತ್ಸವ ಅಮೃತಯಾನ ಕಾರ್ಯಕ್ರಮದಲ್ಲಿ ಪ್ರಧಾನ ಕಛೇರಿಯ ಲಿಫ್ಟ್ ಉದ್ಘಾಟಿಸಿ, ವೇದಿಕೆಯಲ್ಲಿ ಸಾಂಸ್ಕೃತಿಕ ಕಾರ್ಯಕ್ರಮವನ್ನು ಚಂಡೆ ಭಾರಿಸುವ ಮೂಲಕ ಚಾಲನೆ ನೀಡಿ ಮಾತನಾಡಿದರು.

Click Here

ಕಮಲಶಿಲೆ ಶ್ರೀ ಬ್ರಾಹ್ಮೀ ದುರ್ಗಾಪರಮೇಶ್ವರಿ ದೇವಸ್ಥಾನದ ಅನುವಂಶಿಕ ಆಡಳಿತ ಮೊಕ್ತೇಸರರಾದ ಎಸ್.ಸಚ್ಚಿದಾನಂದ ಚಾತ್ರ ಸಭಾ ಕಾರ್ಯಕ್ರಮ ಉದ್ಘಾಟಿಸಿ ನಾರಾಯಣ ರಾಯರು ಮತ್ತು ಅಂದಿನ ಕಾರ್ಯದರ್ಶಿ ಸತ್ಯನಾರಾಯಣ ರಾವ್ ಲಾಟೀನು ಹಿಡಿದುಕೊಂಡು ಮನೆಮನೆಗೆ ತೆರಳಿ ಸಹಕಾರ ತತ್ವವನ್ನು ತಿಳಿಸಿ ಈ ಸಂಸ್ಥೆಯನ್ನು ಕಟ್ಟಿದರು. ಇವತ್ತು ಮಾನಂಜೆ ವ್ಯವಸಾಯ ಸೇವಾ ಸಹಕಾರ ಸಂಘ ಪ್ರಬಲವಾಗಿ ಬೆಳೆದು ಅಮೃತಮನಹೋತ್ಸವವನ್ನು ಆಚರಿಸಿಕೊಳ್ಳುತ್ತಿದೆ. ಈ ಸಂಸ್ಥೆ ಇನ್ನೂ ಎತ್ತರಕ್ಕೆ ಬೆಳೆಯಲಿ, ದಾನಧರ್ಮ ಪ್ರಕ್ರಿಯೆಗಳಿಗೆ ಒತ್ತು ನೀಡಲಿ ಎಂದು ಹೇಳಿದರು.

ಸಂಘದ ಕೇಂದ್ರ ಕಛೇರಿಯ ಎದುರುಗಡೆ ನಿರ್ಮಾಣ ಮಾಡಲಾದ ಬಸ್ಸು ಪ್ರಯಾಣಿಕರ ತಂಗುದಾಣವನ್ನು ಬೈಂದೂರು ಕ್ಷೇತ್ರದ ಶಾಸಕರಾದ ಗುರುರಾಜ ಗಂಟಿಹೊಳೆ ಅವರು ಉದ್ಘಾಟಿಸಿ, ಮಾನಂಜೆ ವ್ಯವಸಾಯ ಸೇವಾ ಸಹಕಾರಿ ಸಂಘ ಅಮೃತ ಮಹೋತ್ಸವ ಇದು ಅವಿಭಜಿತ ಸಹಕಾರ ಕ್ಷೇತ್ರದ ಪಯಣ. ಸಹಕಾರಿಗಳ ಬೆಳವಣಿಗೆಯಲ್ಲಿ ಮುನ್ನಡೆಸಿದೆ. ಆರ್ಥಿಕ ಅಭಿವೃದ್ಧಿಗೆ ಈ ಸಹಕಾರ ಸಂಘ ಕಾರಣ ಎಂದರು.

ಮಾನಂಜೆ ವ್ಯವಸಾಯ ಸೇವಾ ಸಹಕಾರ ಸಂಘದ ಅಧ್ಯಕ್ಷರಾದ ಬಿ.ಪ್ರದೀಪ ಯಡಿಯಾಳ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ, ಮಾನಂಜೆಯಂತಹ ಹಿಂದುಳಿದ ಈ ಗ್ರಾಮೀಣ ಪರಿಸರದಲ್ಲಿ ಈ ಸಂಘವು ಕೀರ್ತಿಶೇಷ ಮಾನಂಜೆ ನಾರಾಯಣ ರಾಯರ ಅಧ್ಯಕ್ಷತೆಯಲ್ಲಿ 15-05-1950ರಲ್ಲಿ ನೋಂದಾಯಿಸಿ, 07-06-1950 ರಂದು ಕೇವಲ 39 ಜನ ಸದಸ್ಯರಿಂದ ‘ಕಮಲಶಿಲೆ ವಿವಿಧೋದ್ದೇಶ ಸಹಕಾರ ಸಂಘ’ ಎಂಬ ನಾಮಾಂಕಿತದೊಂದಿಗೆ ಪ್ರಾರಂಭಗೊಂಡಿತು. ನಂತರ ಅಂದಿನಿಂದ ಇಂದಿನವರೆಗೆ ಕೆಲವು ಹೆಸರುಗಳನ್ನು ಪರಿವರ್ತಿಸಿಕೊಂಡು ಪ್ರಸ್ತುತ ಮಾನಂಜೆ ವ್ಯವಸಾಯ ಸೇವಾ ಸಹಕಾರ ಸಂಘ ನಿಯಮಿತ, ಕಮಲಶಿಲೆ ಎಂಬ ಹೆಸರಿನಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಸಹಕಾರ ರಂಗದಲ್ಲಿ ‘ಮಾನಂಜೆ ಸೊಸೈಟಿ’ ಅಂತಲೇ ಪ್ರಖ್ಯಾತಿಯನ್ನು ಹೊಂದಿದೆ. ಆಜ್ರಿ, ಕಮಲಶಿಲೆ, ಹಳ್ಳಿಹೊಳೆ ಮತ್ತು ಯಡಮೊಗೆ ಗ್ರಾಮಗಳ ಕೃಷಿಕರ, ಕೃಷಿ ಕಾರ್ಮಿಕರ ಕಲ್ಯಾಣಕ್ಕೆ ನೆರವು ನೀಡುತ್ತಾ ಬಂದಿದ್ದು. ಸದಸ್ಯರ ಸಹಕಾರದಿಂದ ಸಂಘವು ಪ್ರಗತಿಯ ಅನೇಕ ಮಜಲುಗಳನ್ನು ದಾಟ, ಜಿಲ್ಲೆಯ ಕೃಷಿ ಪತ್ತಿನ ಸಹಕಾರ ಸಂಘಗಳಲ್ಲಿ ತನ್ನದೇ ಆದ ವಿಶಿಷ್ಟತೆಯನ್ನು ಕಾಯ್ದುಕೊಂಡಿದೆ ಎಂದರು.

ಹಳ್ಳಿಹೊಳೆ ಶಾಖೆಯಲ್ಲಿ ಗೋದಾಮನ್ನು ದ.ಕ ಜಿಲ್ಲಾ ಕೇಂದ್ರ ಬ್ಯಾಂಕ್ ನಿರ್ದೇಶಕ ಎಂ.ಮಹೇಶ್ ಹೆಗ್ಡೆ ಉದ್ಘಾಟಿಸಿದರು. ಹಳ್ಳಿಹೊಳೆ ಶಾಖೆಯಲ್ಲಿ ಮಾಸ್ ಅಡಿಕೆ ಖರೀದಿ ಗೋದಾಮನ್ನು ಮಾಸ್ ಕೇಂದ್ರದ ಸ್ಥಾಪಕ ನಿರ್ದೇಶಕ, ಸಂಘದ ಮಾಜಿ ಅಧ್ಯಕ್ಷ ರಾಘವೇಂದ್ರ ರಾವ್ ಉದ್ಘಾಟಿಸಿದರು. ಮಳಿಗೆಗಳನ್ನು ಕ್ಯಾಂಪ್ಕೋ ಉಪಾಧ್ಯಕ್ಷ ಪದ್ಮರಾಜ್ ಪಟ್ಟಾಜೆ ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಅಮೃತಮಹೋತ್ಸವದ ಸ್ಮರಣಸಂಚಿಕೆ ಬಿಡುಗಡೆ ಮಾಡಲಾಯಿತು. ಮಾಜಿ ಅಧ್ಯಕ್ಷರಾದ ರಾಘವೇಂದ್ರ ರಾವ್ ಹಿನ್ನೋಟ ನೀಡಿದರು.

ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಉಡುಪಿ ಜಿಲ್ಲಾ ಸಹಕಾರ ಯೂನಿಯನ್ ಅಧ್ಯಕ್ಷರಾದ ಬಿ.ಜಯಕರ ಶೆಟ್ಟಿ ಇಂದ್ರಾಳಿ, ಮಾಸ್ ಕೇಂದ್ರದ ನಿರ್ದೇಶಕ ನಿತ್ಯಾನಂದ ಮುಡ್ಡೊಡಿ, ಸಹಕಾರ ಸಂಘಗಳ ಉಪ ನಿಬಂಧಕರಾದ ಲಾವಣ್ಯ ಕೆ.ಆರ್., ಕುಂದಾಪುರ ತಾಲೂಕು ಸಹಕಾರ ಸಂಘಗಳ ಸಹಾಯಕ ನಿಬಂಧÀಕರಾದ ಸುಧೀರ್ ಕುಮಾರ್ ಜೆ., ದ.ಕ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟದ ರವಿರಾಜ ಹೆಗ್ಡೆ, ಆಜ್ರಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಮುಕಾಂಬು ಶೆಡ್ತಿ, ಹಳ್ಳಿಹೊಳೆ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಮಂಜುನಾಥ ಶೆಟ್ಟಿ, ಯಡಮೊಗೆ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಸುಮತಿ ಗಾಣಿಗ, ಸಂಘದ ಮಾಜಿ ಅಧ್ಯಕ್ಷರಾದ ಎಂ.ರಾಘವೇಂದ್ರ ರಾವ್ ಮಾನಂಜೆ, ಶಂಕರನಾರಾಯಣ ಯಡಿಯಾಳ, ರಾಮಕೃಷ್ಣ ರಾವ್ ಬರೆಗುಂಡಿ, ಜಗದೀಶ ಯಡಿಯಾಳ, ಜಯರಾಮ ಯಡಿಯಾಳ, ಎಸ್.ವಾಸುದೇವ ಯಡಿಯಾಳ, ಎ. ಬಾಲಚಂದ್ರ ಭಟ್ ಅಗ್ರಹಾರ ಆಗಮಿಸಿದ್ದರು.
ಸಂಘದ ನಿರ್ದೇಶಕರಾದ ವಿ.ಮಾಧವ ಶೆಣೈ, ಎಸ್.ಶಂಕರನಾರಾಯಣ ಯಡಿಯಾಳ, ಎಂ.ದೇವದಾಸ ಶೆಟ್ಟಿ, ಬಿ.ಮಂಜುನಾಥ ರಾವ್ , ಎಂ.ಎಸ್.ವಿಷ್ಣುಮೂರ್ತಿ, ಅನಿತಾ, ರೋಹಿಣಿ, ನರಸಿಂಹ ಪೂಜಾರಿ, ಜಯಂತ ಶೆಟ್ಟಿ, ರವೀಂದ್ರ, ಗುರುರಾಜ ನಾಯ್ಕ, ವಿನೋದ (ಸಹಮತ ನಿರ್ದೇಶಕಿ), ಜಿಲ್ಲಾ ಬ್ಯಾಂಕ್ ವಲಯ ಮೇಲ್ವಿಚಾರಕ ಚಂದ್ರಶೇಖರ ಶೆಟ್ಟಿ ಉಪಸ್ಥಿತರಿದ್ದರು.

ವಿದ್ಯಾರ್ಥಿಗಳು ಪ್ರಾರ್ಥನೆ ಮಾಡಿದರು. ಸಂಘದ ಉಪಾಧ್ಯಕ್ಷ ಸುದೀಪ ಶೆಟ್ಟಿ ಸ್ವಾಗತಿಸಿದರು. ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಬಿ.ಮಂಜುನಾಥ ನಾಯ್ಕ ವಂದಿಸಿದರು. ಪತ್ರಕರ್ತ ಸುಬ್ರºಣ್ಯ ಪಡುಕೋಣೆ ಕಾರ್ಯಕ್ರಮ ನಿರ್ವಸಿದರು.

Click Here

LEAVE A REPLY

Please enter your comment!
Please enter your name here