ಕುಂದಾಪುರ ಮಿರರ್ ಸುದ್ದಿ…
ಕುಂದಾಪುರ: ಮಹಿಳಾ ಸದಸ್ಯರನ್ನೊಳಗೊಂಡ ಈ ಅಮೃತಧಾರಾ ಕ್ಲಬ್ ಸಾಮಾಜಿಕ ಹಾಗೂ ಪರಿಸರ ಸಂರಕ್ಷಣೆಯ ಬಗ್ಗೆ ವಿಶೇಷ ಕಾಳಜಿಯಿಂದ ಸೇವೆ ನೀಡುತ್ತಿರುವುದು ಲಯನ್ಸ್ ಜಿಲ್ಲೆಗೆ ಮಾದರಿಯಾಗಿದೆ ಎಂದು ಪ್ರಾಂತ್ಯಾಧ್ಯಕ್ಷ ಲಯನ್ ಶೇಖರ್ ಶೆಟ್ಟಿ ಕೆ ಹೇಳಿದರು.
ಅವರು ಲಯನ್ಸ್ ಜಿಲ್ಲೆ 317ಸಿ ಇದರ ಪ್ರಾಂತ್ಯ 5ರ ಪ್ರಾಂತ್ಯಾಧ್ಯಕ್ಷರ ಅಧಿಕೃತ ಭೇಟಿ ನೀಡುವ ಕಾರ್ಯಕ್ರಮದ ಅಂಗವಾಗಿ ಕುಂಭಾಶಿ ಆನೆಗುಡ್ಡೆ ಶ್ರೀ ವಿನಾಯಕ ಸಭಾಗೃಹದಲ್ಲಿ ಜರುಗಿದ ಕಾರ್ಯಕ್ರಮದಲ್ಲಿ ಲಯನ್ಸ್ ಕ್ಲಬ್ ಕುಂದಾಪುರ ಅಮೃತಧಾರಾ ಸಂಸ್ಥೆಗೆ ಭೇಟಿ ಮಾತನಾಡಿದರು.
ವಲಯಾಧ್ಯಕ್ಷ ವಕೀಲ ಬನ್ನಾಡಿ ಸೋಮನಾಥ ಹೆಗ್ಡೆ, ಪ್ರಾಂತ್ಯ ಕಾರ್ಯದರ್ಶಿ ಬಾಲಕೃಷ್ಣ ಶೆಟ್ಟಿ, ಲಯನ್ಸ್ ಜಿಲ್ಲೆಯ ಕೋರ್ ಕ್ಯಾಬಿನೆಟ್ ಸದಸ್ಯರುಗಳಾದ ರಾಜೀವ ಕೋಟ್ಯಾನ್, ಮೊಹಮ್ಮದ್ ಹನೀಫ್, ಅರುಣ್ ಕುಮಾರ್ ಹೆಗಡೆ, ರೀಜನ್ ಜಿಎಸ್‍ಟಿ ಆನಂದ ಗಾಣಿಗ, ಎಮ್‍ಜಿಎಫ್ ಏಕನಾಥ ಬೋಳಾರ್, ವಲಯ 5ರ ಕಾರ್ಯದರ್ಶಿ ಬಾಲಕೃಷ್ಣ ಹೆಗ್ಡೆ, ಲಯನ್ಸ್ ಕ್ಲಬ್ ಅಧ್ಯಕ್ಷರುಗಳಾದ ಉದಯ ಕುಮಾರ್ ಶೆಟ್ಟಿ, ದೀನಪಾಲ್ ಶೆಟ್ಟಿ, ಸುಖಾನಂದ ಹೆಗ್ಡೆ, ರಮ್ಯಾ ಪೈ, ರಮಾ ಬೋಳಾರ್, ರೈಲ್ವೆ ಹಿತರಕ್ಷಣಾ ಸಮಿತಿ ಅಧ್ಯಕ್ಷ ಗಣೇಶ ಪುತ್ರನ್, ಕ್ಲೀನ್ ಕುಂದಾಪುರ ಪ್ರಾಜೆಕ್ಟ್‍ನ ಮುಖ್ಯಸ್ಥ ಭರತ್ ಬಂಗೇರ, ಸೀತಾರಾಮ ಧನ್ಯ, ಭಾಸ್ಕರ್ ಪೂಜಾರಿ, ರೆಡ್ ಕ್ರಾಸ್‍ನ ಖಜಾಂಜಿ ಶಿವರಾಮ ಶೆಟ್ಟಿ, ಅಮೃತಧಾರದ ಸದಸ್ಯರಾದ ಡಾ.ಮೈತ್ರಿ, ಆಶಾ ಶೆಟ್ಟಿ, ಕಲ್ಪನಾ ಭಾಸ್ಕರ್, ಸುಮ ಶ್ರೀಧನ್ಯ ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ಸುಮಾರು 300ಕ್ಕೂ ಹೆಚ್ವಿನ ಬಾಣಂತಿ ಮತ್ತು ಮಗುವಿನ ಹಾರೈಕೆ ಸೇವಾ ಮನೋಭಾವ ಮಾಡಿ ಸಂತೃಪ್ತಿ ಪಡೆಯುತ್ತಿರುವ ರಾಜೀವಿ ಶೆಟ್ಟಿಗಾರ್ ಇವರನ್ನು ಸಂಸ್ಥೆಯ ವತಿಯಿಂದ ಗೌರವಿಸಲಾಯಿತು. ವಿಕಲಚೇತನ ಪ್ರಸಾದ್ ನಾಯಕ್ ಇವರ ವೈದ್ಯಕೀಯ ಚಿಕಿತ್ಸೆಗಾಗಿ ಆರ್ಥಿಕ ನೆರವು ವಿತರಿಸಲಾಯಿತು.
ಕಾರ್ಯದರ್ಶಿ ಜಯಶೀಲ ಕಾಮತ್ ವರದಿ ವಾಚಿಸಿದರು. ಚಂದ್ರಿಕಾ ಧನ್ಯ ಕಾರ್ಯಕ್ರಮ ನಿರೂಪಿಸಿದರು. ಖಜಾಂಜಿ ಮೇಘಾ ಭರತ್ ವಂದಿಸಿದರು.











