ಕೋಟೇಶ್ವರ ಬ್ರಹ್ಮಕಲಶೋತ್ಸವ ಆಹ್ವಾನ ಪತ್ರಿಕೆ ಬಿಡುಗಡೆ

0
1713

Click Here

Click Here

ಕುಂದಾಪುರ ಮಿರರ್ ಸುದ್ದಿ…
ಕುಂದಾಪುರ :
ಯಾವುದೇ ಕ್ಷೇತ್ರದಲ್ಲಿ ಧ್ವಜಮರ, ವಿಗ್ರಹಗಳು ಭಿನ್ನವಾದರೆ ಅದು ಊರಿಗೇ ಶಾಪವಾಗಿ ಕಾಡುತ್ತದೆ. ಅವನ್ನು ಎಲ್ಲ ಭಗವದ್ಭಕ್ತರು ಸೇರಿ ಸರಿಪಡಿಸಬೇಕು. ಪುರಾಣ ಪ್ರಸಿದ್ಧವಾದ ಕೋಟೇಶ್ವರ ಕ್ಷೇತ್ರದಲ್ಲಿ ಹೀಗೆ 70 ವರ್ಷಗಳ ನಂತರ ನೂತನ ಧ್ವಜ ಸ್ಥ0ಭ ಪ್ರತಿಷ್ಠಾಪಿಸುವ ಯೋಗ ನಮ್ಮೆಲ್ಲರಿಗೆ ಒದಗಿಬಂದಿದೆ. ಎಲ್ಲರೂ ಒಂದಾಗಿ ಕೋಟಿಲಿಂಗೇಶ್ವರನ ಈ ಸೇವೆಯಲ್ಲಿ ತೊಡಗಿಸಿಕೊಂಡು ಕೃತಾರ್ಥರಾಗಬೇಕು ಎಂದು ಉದ್ಯಮಿ ಮಲ್ಯಾಡಿ ಶಿವರಾಮ ಶೆಟ್ಟಿ ಮನವಿ ಮಾಡಿದರು.


ಕೋಟೇಶ್ವರದ ಶ್ರೀ ಕೋಟಿಲಿಂಗೇಶ್ವರ ಸನ್ನಿಧಿಯಲ್ಲಿ ಇದೇ ಫೆ.7 ರಿಂದ 17 ರವರೆಗೆ ನಡೆಯಲಿರುವ ನೂತನ ಧ್ವಜ ಸ್ಥ0ಭ ಪ್ರತಿಷ್ಠಾಪನೆ, ಬ್ರಹ್ಮಕಲಶೋತ್ಸವ ಮತ್ತು ಶ್ರೀಮನ್ಮಹಾರಥೋತ್ಸವ ಆಹ್ವಾನ ಪತ್ರಿಕೆಗಳನ್ನು ಬಿಡುಗಡೆಗೊಳಿಸಿ ಅವರು ಮಾತನಾಡಿದರು.

ಕೋಟೇಶ್ವರದಿಂದ ನಾಲ್ಕೈದು ಕಿ ಮೀ ದೂರದ ಊರಿನವರು ತಾವಾದರೂ ಅನಾದಿ ಕಾಲದಿಂದಲೂ ಓಕುಳಿ ಕಾರ್ಯಕ್ರಮದಲ್ಲಿ ತೆಕ್ಕಟ್ಟೆಯ ತಮ್ಮ ಬಂಟ ಕುಟುಂಬ ಪಾಲ್ಗೊಳ್ಳುವುದು ಕ್ಷೇತ್ರದ ಸಂಪ್ರದಾಯ ಎಂದು ಸ್ಮರಿಸಿದ ಅವರು, ಕೋಟಿಲಿಂಗೇಶ್ವರನ ಸೇವೆಗೆ ಇದು ತಮಗೊದಗಿದ ಭಾಗ್ಯ ಎಂದು ಬಣ್ಣಿಸಿದರು.

Click Here

ಬ್ರಹ್ಮಕಲಶೋತ್ಸವ ಸಮಿತಿಯ ಅಧ್ಯಕ್ಷ ಗೋಪಾಡಿ ಶ್ರೀನಿವಾಸ ರಾವ್ ಮಾತನಾಡಿ, ಎಲ್ಲಾ 32 ಉಪಸಮಿತಿಯವರೂ, ದೇವಳ ಆಡಳಿತ ಮತ್ತು ಜೀರ್ಣೋದ್ಧಾರ ಸಮಿತಿಯವರೊಂದಿಗೆ ಸೇರಿ ಕಾರ್ಯಾಚರಿಸಿ, ಯೋಜಿತ ಕಾರ್ಯಕ್ರಮಗಳನ್ನು ಯಶಸ್ವಿಗೊಳಿಸಬೇಕು ಎಂದು ಮನವಿ ಮಾಡಿದರು.

ದೇವಳ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಎಂ. ಪ್ರಭಾಕರ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಕಾರ್ಯನಿರ್ವಹಣಾಧಿಕಾರಿ ಗಣೇಶ್ ಗೌಡ, ತಂತ್ರಿ ಪ್ರಸನ್ನ ಕುಮಾರ ಐತಾಳ, ಸ್ವಾಗತ ಸಮಿತಿ ಗೌರವಾಧ್ಯಕ್ಷ ಮಾರ್ಕೊಡು ಗೋಪಾಲಕೃಷ್ಣ ಶೆಟ್ಟಿ, ಕಾರ್ಯದರ್ಶಿ ಸುರೇಶ್ ಬೆಟ್ಟಿನ್, ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಕೋಣಿ ಕೃಷ್ಣದೇವ ಕಾರಂತ ಉಪಸ್ಥಿತರಿದ್ದರು.

ಜೀರ್ಣೋದ್ಧಾರ ಸಮಿತಿ ಕಾರ್ಯದರ್ಶಿ ಪ್ರಭಾಕರ ಕುಂಭಾಸಿ ಸ್ವಾಗತಿಸಿ, ಕಾರ್ಯನಿರ್ವಹಣಾಧಿಕಾರಿ ಗಣೇಶ್ ಗೌಡ ವಂದಿಸಿದರು.

Click Here

LEAVE A REPLY

Please enter your comment!
Please enter your name here