ಕುಂದಾಪುರ ಮಿರರ್ ಸುದ್ದಿ…

ಕುಂದಾಪುರ :ಮಹಿಳಾ ಮತ್ತು ಮಕ್ಕಳ ಶ್ರಯೋಭಿವೃದ್ದಿ ಸಮಿತಿ ಕುಂದಾಪುರ ವತಿಯಿಂದ ವಿಶ್ವ ಮಹಿಳಾ ದಿನಾಚರಣೆಯನ್ನು ಕುಂದಾಪುರದ ಬಾಲಭವನದಲ್ಲಿ ಆಚರಿಸಲಾಯಿತು.
ಕುಂದಾಪುರ ಮಹಿಳಾ ಮತ್ತು ಮಕ್ಕಳ ಶ್ರಯೋಭಿವೃದ್ದಿ ಸಮಿತಿಯ ಅಧ್ಯಕ್ಷೆ ಗುಣರತ್ನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ಮಹಿಳೆಯ ಹಕ್ಕು ಮತ್ತು ಸಮಾನತೆಗಾಗಿ ಹೋರಾಟದ ನೆನಪಿನಲ್ಲಿ 1907ರಲ್ಲಿ ಆರಂಭವಾದ ವಿಶ್ವ ಮಹಿಳಾ ದಿನಾಚರಣೆ 1910ರಲ್ಲಿ ವಿಶ್ವದಾದ್ಯಂತ ಆಚರಿಸಲ್ಪಡುತ್ತಿದೆ. ಮಹಿಳೆಯ ಮಹತ್ವಿಕೆ, ಸಾಧನೆ, ಸಮಾನತೆಯ ವಿಚಾರವನ್ನು ಪ್ರಚುರ ಪಡಿಸುವುದು, ಸ್ವಾವಲಂಬಿಯಾಗಿ ಮಹಿಳೆ ಎಲ್ಲಾ ಕ್ಷೇತ್ರಗಳಲ್ಲಿಯೂ ಗುರುತಿಸಿಕೊಳ್ಳುವಂತಾಗಬೇಕು ಎನ್ನುವುದು ಈ ಅಚರಣೆಯ ಉದ್ದೇಶವಾಗಿದೆ. ಮಹಿಳಾ ಮತ್ತು ಮಕ್ಕಳ ಶ್ರಯೋಭಿವೃದ್ದಿ ಸಮಿತಿ ಕುಂದಾಪುರ ಪ್ರತಿ ವರ್ಷ ವಿಶ್ವ ಮಹಿಳಾ ದಿನಾಚರಣೆಯನ್ನು ಅರ್ಥಪೂರ್ಣವಾಗಿ ಆಚರಿಸಿಕೊಂಡು ಬರುತ್ತಿದೆ. ಸಮಾಜದಲ್ಲಿ ಮಹಿಳೆಯನ್ನು ಗೌರವಿಸವುದು ಎಲ್ಲರ ಕರ್ತವ್ಯ ಎಂದು ಅವರು ಹೇಳಿ ಎಲ್ಲರಿಗೂ ವಿಶ್ವ ಮಹಿಳಾ ದಿನಾಚರಣೆಯ ಶುಭಾಶಯ ಹೇಳಿದರು.
ಶಿಶು ಅಭಿವೃದ್ಧಿಯ ಯೋಜನಾಧಿಕಾರಿ ಉಮೇಶ್ ಟಿ.ಎಲ್. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಸಂಸಾರದಲ್ಲಿ ಹೆಣ್ಣು ಸಂತೋಷವಾಗಿದ್ದರೆ ಸಂಸಾರ ಸುಂದರವಾಗಿರುತ್ತದೆ. ವರ್ಷಂಪ್ರತಿ ಮಹಿಳಾ ದಿನಾಚರಣೆಯನ್ನು ಅರ್ಥಪೂರ್ಣವಾಗಿ ಆಚಾರಿಸುತ್ತಾ ಬಂದಿರುವ ಗುಣರತ್ನ ಅವರಿಗೆ ಇಲಾಖೆವತಿಯಿಂದ ಅಭಿನಂದನೆ ಸಲ್ಲಿಸಿದರು.
ಉತ್ತಮವಾಗಿ ಚುನಾವಣಾ ಕರ್ತವ್ಯ ನಿರ್ವಹಿಸಿದ ಅಂಗನವಾಡಿ ಕಾರ್ಯಕರ್ತೆ ಉಷಾ ಇವರನ್ನು ಅಭಿನಂದಿಸಲಾಯಿತು.
ಈ ಸಂದರ್ಭದಲ್ಲಿ ಶಿಶು ಅಭಿವೃದ್ಧಿಯ ಯೋಜನೆಯ ಮೇಲ್ವಿಚಾರಕಿ ನಿವೇದಿತಾ,ಪುರಸಭಾ ವ್ಯಾಪ್ತಿಯ ಅಂಗನವಾಡಿ ಕಾರ್ಯಕರ್ತೆಯರು, ಸಹಾಯಕಿಯರು ಉಪಸ್ಥಿತರಿದ್ದರು.
ಉಷಾ ಸ್ವಾಗತಿಸಿ, ಲಲಿತಾ ಪ್ರಾಸ್ತವಿಕ ಮಾತನಾಡಿದರು. ವಿದ್ಯಾ ಪ್ರಾರ್ಥನೆಗೈದರು. ಪ್ರಭಾವತಿ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.












