ಪಡುಕೇರಿ ಯುವ ಮಿತ್ರ ವೃಂದದ 31ನೇ ವರ್ಷದ ವಾರ್ಷಿಕ ಸಂಭ್ರಮ

0
106

ಕುಂದಾಪುರ ಮಿರರ್ ಸುದ್ದಿ…

ಕುಂದಾಪುರ :ಯುವ ಮಿತ್ರ ವೃಂದ ಪಡುಕೇರಿ ಇದರ 31 ನೇ ವರ್ಷದ ವಾರ್ಷಿಕ ಸಂಭ್ರಮವು ಶ್ರೀ ಚಿಕ್ಕಮ್ಮ ದೇವಿ ದೇವಸ್ಥಾನ ಒಂಭತ್ತುದಂಡಿಗೆ ಪಡುಕೇರಿಯ ವಸುಪ್ರದಾಯಿನಿ ರಂಗಮಂಟಪದಲ್ಲಿ ಜರುಗಿತು.

ದೇವಳದ ಆಡಳಿತ ಮಂಡಳಿಯ ಅಧ್ಯಕ್ಷರಾದ ನಾಗರಾಜ್ ಕಾಮಧೇನು ಅಧ್ಯಕ್ಷೀಯ ನುಡಿಗಳನ್ನಾಡಿದರು.

ಮುಖ್ಯ ಅತಿಥಿ ಗೋಪಾಲಕೃಷ್ಣ ಶೆಟ್ಟಿ ಶಿರಿಯಾರ ಇವರು ಕಾರ್ಯಕ್ರಮವನ್ನು ಉದ್ದೇಶಿಸಿ “ದೈವತ್ವದ ಅದ್ಭುತತೆಯನ್ನು ಕೆಲವು ಕಥೆಗಳ ಸಮೇತ ಸಾಕ್ಷ್ಯ ಚಿತ್ರವನ್ನು ನೀಡಿ ಮಾತನಾಡಿದರು.

ಯುವ ಮಿತ್ರವಂದದ ಗೌರವ ಅಧ್ಯಕ್ಷರಾದ ಅಮರ್ ಕುಮಾರ್ ಪ್ರಾಸ್ತಾವಿಕ ನುಡಿಗಳನ್ನಾಡಿದರು.

ಕಾರ್ಯಕ್ರಮದಲ್ಲಿ ಸಮಾಜ ಸೇವಕ ವಾಸುದೇವ ಹಂದೆ ಇವರನ್ನು ಸನ್ಮಾನಿಸಲಾಯಿತು ಹಾಗೂ ರಾಷ್ಟ್ರಮಟ್ಟದ ಪವರ್ ಲಿಫ್ಟರ್ ಲಕ್ಷ್ಮೀಶ ಗಾಣಿಗ ಇವರನ್ನು ಗುರುತಿಸಿ ಸನ್ಮಾನಿಸಲಾಯಿತು.

ಕಾರ್ಯಕ್ರಮದಲ್ಲಿ ಮಹಿಳಾ ಮಂಡಳಿಯ ಅಧ್ಯಕ್ಷೆ ರಾಜೀವ್ ಪ್ರಭಾಕರ್ ಉಪಸ್ಥಿತರಿದ್ದರು.

ರಾಜೇಶ್ ರಾವ್ ಪಡುಕೇರಿ ಇವರು ಬಹುಮಾನ ವಿತರಣೆ ಕಾರ್ಯಕ್ರಮವನ್ನು ನಡೆಸಿಕೊಟ್ಟರು. ಯುವ ಮಿತ್ರವಂದದ ಅಧ್ಯಕ್ಷರಾದ ಶ್ರೀನಿವಾಸ ಬೀರಿ ಸರ್ವರನ್ನು ಸ್ವಾಗತಿಸಿದರು. ಕಾರ್ಯದರ್ಶಿ ಮಹೇಶ್ ನಾಯಕ್ ವಂದನಾರ್ಪಣೆಗೈದರು. ಭಂಡಾರ್ಕಾರ್ಸ್ ಕಾಲೇಜಿನ ಪ್ರಾಧ್ಯಾಪಕಿ ರೇಣುಕಾ ಪ್ರಸಾದ್ ಕಾರ್ಯಕ್ರಮ ನಿರೂಪಣೆ ಮಾಡಿದರು.

Click Here

LEAVE A REPLY

Please enter your comment!
Please enter your name here