ಸ್ವಚತೆ ಕಾಪಾಡುವುದು ಒಬ್ಬರ ಕೆಲಸವಾಗಬಾರದು, ಅದು ನಮ್ಮೆಲ್ಲರ‌ ಸಾಮಾಜಿಕ ಜವಾಬ್ದಾರಿ – ಬಿ.ಬಿ ನಿಕ್ಕಂ

0
806

Click Here

Click Here

ಕುಂದಾಪುರ ರೈಲು ನಿಲ್ದಾಣ ಪರಿಸರದಲ್ಲಿ ಬೃಹತ್ ಸ್ವಚ್ಚತಾ ಅಭಿಯಾನ

ಕುಂದಾಪುರ ಮಿರರ್ ಸುದ್ದಿ…
ಕುಂದಾಪುರ: ರೈಲ್ವೆ ಪ್ರಯಾಣಿಕರ ಹಿತರಕ್ಷಣಾ ಸಮಿತಿ ಕುಂದಾಪುರ, ಕ್ಲೀನ್ ಕುಂದಾಪುರ ಪ್ರಾಜೆಕ್ಟ್ , ಕೊಂಕಣ ರೈಲ್ವೆ ಕಾರ್ಪೊರೇಷನ್,  ಗ್ರಾಮಪಂಚಾಯತ್ ಕಂದಾವರ, ಎಂಐಟಿ ಕಾಲೇಜು ಕುಂದಾಪುರ (ಎನ್ಎಸ್ಎಸ್) ,ಲಯನ್ಸ್ ಕ್ಲಬ್ ಕುಂದಾಪುರ ಅಮೃತಧಾರ ಮತ್ತು ಚಂದನ ಯುವಕ ಮಂಡಲ ಬೀಜಾಡಿ-ಗೋಪಾಡಿ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವಿಪತ್ತು ನಿರ್ವಹಣೆ, ರಾಷ್ಟ್ರ ಸೇವಿಕಾ ಕುಂದಾಪುರ, ಅರಣ್ಯ ಇಲಾಖೆ ಕುಂದಾಪುರ ಇವರ ಸಂಯುಕ್ತ ಆಶ್ರಯದಲ್ಲಿ ಕುಂದಾಪುರ ರೈಲು ನಿಲ್ದಾಣ ಪರಿಸರದಲ್ಲಿ ಬೃಹತ್ ಸ್ವಚ್ಛತಾ ಅಭಿಯಾನ ಭಾನುವಾರ ಬೆಳಿಗ್ಗೆ ನಡೆಯಿತು.

ಕುಂದಾಪುರ ರೈಲು ಪ್ರಯಾಣಿಕರ ಹಿತರಕ್ಷಣಾ ಸಮಿತಿ ಅಧ್ಯಕ್ಷ ಗಣೇಶ್ ಪುತ್ರನ್ ಮಾತನಾಡಿ, ರೈಲು ನಿಲ್ದಾಣದ ಸ್ಬಚ್ಚತೆ, ರೈಲು ನಿಲುಗಡೆ, ಸೇವೆಗಳ ಬಗ್ಗೆ ಹಲವು ವರ್ಷಗಳಿಂದ ಹೋರಾಟ ಮಾಡಲಾಗುತ್ತಿದೆ. ಅದರ ಭಾಗವಾಗಿ ವಿವಿಧ ಸಂಘಸಂಸ್ಥೆಗಳ ಒಗ್ಗೂಡುವಿಕೆಯಲ್ಲಿ ರೈಲು ನಿಲ್ದಾಣದ ಪರಿಸರವನ್ನು ಸ್ವಚ್ಛಗೊಳಿಸುವ ಹಾಗೂ ಪರಿಸರದಲ್ಲಿ ಗಿಡ ನೆಡುವ ಕಾರ್ಯಕೈಗೊಳ್ಳಲಾಗಿದೆ. ಇಲ್ಲಿನ‌ ಶುಚಿತ್ವ ಕಾಪಾಡುವ ನಿಟ್ಟಿನಲ್ಲಿ ನಿರಂತರವಾಗಿ ಇಂತಹ ಕಾರ್ಯಕ್ರಮ ನಡೆಸಲಾಗುತ್ತದೆ ಎಂದರು.

Click Here

ಇದೇ ಸಂದರ್ಭ ಕುಂದಾಪುರ ರೈಲು ನಿಲ್ದಾಣದ ಎದುರು ಸಸಿಗಳನ್ನು ನೆಡುವ ಕಾರ್ಯಕ್ಕೂ ಚಾಲನೆ ನೀಡಲಾಯಿತು. ಸ್ವಚ್ಛತಾ ಕಾರ್ಯದಲ್ಲಿ ಕೊಂಕಣ ರೈಲ್ವೆಯ ವಿಭಾಗೀಯ‌ ಮುಖ್ಯಸ್ಥ ಬಿ.ಬಿ ನಿಕ್ಕಂ, ಇಂಜಿನಿಯರ್ ವೆಂಕಟೇಶ್, ಸಹಾಯಕ ಇಂಜಿನಿಯರ್ ಸುಬೋದ್ ಕುಮಾರ್, ಸ್ಟೇಶನ್ ಮಾಸ್ಟರ್ ಪ್ರಸನ್ನ ಕುಮಾರ್ ಶೆಟ್ಟಿ, ಕುಂದಾಪುರ ರೈಲು ಪ್ರಯಾಣಿಕರ ಹಿತರಕ್ಷಣಾ ಸಮಿತಿ ಅಧ್ಯಕ್ಷ ಗಣೇಶ್ ಪುತ್ರನ್, ರಾಜೇಶ್ ಕಾವೇರಿ, ವಿವೇಕ್ ನಾಯಕ್, ರಾಘವೇಂದ್ರ ಶೇಟ್,‌ನಾಗರಾಜ ಆಚಾರ್, ಉದಯ ಭಂಡಾರ್ಕಾರ್, ಜಾಯ್ ಕರವೆಲ್ಲೋ, ಕಂದಾವರ ಗ್ರಾ.ಪಂ‌ ಸದಸ್ಯ ಅಭಿಜಿತ್ ಕೊಠಾರಿ, ಮಾಜಿ ಸದಸ್ಯ ಸಂತೋಷ್ ಮೂಡ್ಲಕಟ್ಟೆ, ಕ್ಲೀನ್ ಕುಂದಾಪುರ ಪ್ರಾಜೆಕ್ಟ್‌ನ ಭರತ ಬಂಗೇರ, ಅನಿಕೇತ್ ಶೆಣೈ, ಸಂತೋಷ್, ಸುಮಂತ್, ಅರುಣ್, ಶಶಿಧರ್, ವಿವಿಧ ಸಂಘಟನೆಯ ಪ್ರಮುಖರಾದ ಸರಸ್ವತಿ ಜಿ. ಪುತ್ರನ್, ಕಲ್ಪನಾ ಭಾಸ್ಕರ್, ಪ್ರೇಮಾ‌ ಪಡಿಯಾರ್, ಮಾಲತಿ ಬಂಗೇರ, ಗಿರೀಶ್ ಉಪಾಧ್ಯಾಯ, ಮಾಧವ ಆಚಾರ್, ಗೋಪಾಲ ಮಡಿವಾಳ, ಎಂಐಟಿ ಕಾಲೇಜು ಉಪನ್ಯಾಸಕ ಕಿಶೋರ್, ಸ್ಥಳೀಯ ಆಟೋ ರಿಕ್ಷಾ ಚಾಲಕ ಮತ್ತು ಮಾಲಕ ಸಂಘದವರು ಇದ್ದರು‌.

ಸ್ವಚತೆ ಕಾಪಾಡುವುದು ಒಬ್ಬರ ಕೆಲಸವಾಗಬಾರದು. ಅದು ನಮ್ಮೆಲ್ಲರ‌ ಸಾಮಾಜಿಕ ಜವಾಬ್ದಾರಿಯಾಗಬೇಕು. ನಮ್ಮ ಮನೆಯಲ್ಲಿ ಸ್ವಚ್ಛತೆ ಕಾಪಾಡುವಂತೆಯೇ ಸಾರ್ವಜನಿಕ ಸ್ಥಳಗಳಲ್ಲಿ ಸ್ವಚ್ಛತೆ ಕಾಪಾಡುವುದು‌ ನಾಗರಿಕರ ಕರ್ತವ್ಯ.
– ಬಿ.ಬಿ ನಿಕ್ಕಂ, ಕೊಂಕಣ ರೈಲ್ವೆಯ ವಿಭಾಗೀಯ‌ ಮುಖ್ಯಸ್ಥರು

Click Here

LEAVE A REPLY

Please enter your comment!
Please enter your name here