ಮಣೂರು : ಹುಟ್ಟೂರ ಸನ್ಮಾನ ಎಲ್ಲವುಕ್ಕಿಂತ ಶ್ರೇಷ್ಠತೆಯನ್ನು ಹೊಂದಿದೆ – ಮಧುಸೂದನ ಬಾಯರಿ

0
712

Click Here

Click Here

ಕುಂದಾಪುರ ‌ಮಿರರ್ ಸುದ್ದಿ…

ಕೋಟ: ಹುಟ್ಟೂರ ಸನ್ಮಾನಗಳು ಎಲ್ಲವುದಕ್ಕಿಂತ ಭಿನ್ನವಾಗಿರುತ್ತದೆ ಅಲ್ಲದೆ ಶ್ರೇಷ್ಠತೆಯನ್ನು ಹೊಂದಿರುತ್ತದೆ ಎಂದು ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕ್ರತ ವೇ.ಮು ಮಧುಸೂದನ ಬಾಯರಿ ಹೇಳಿದ್ದಾರೆ.

ಮಣೂರು ಚಿತ್ತಾರಿ ನಾಗ ಬ್ರಹ್ಮ ಸಪರಿವಾರ ದೇವಸ್ಥಾನದ ಐದನೇ ವರ್ಷದ ವಾರ್ಷಿಕ ವರ್ಧಂತ್ಯೋತ್ಸವ ಪ್ರಯುಕ್ತ ಹಮ್ಮಿಕೊಂಡ ಸಾಸ್ತಾನದ ಗೋಳಿಗರಡಿ ಪಂಜುರ್ಲಿ ಕೃಪಾಪೋಷಿತ ಯಕ್ಷಗಾನ ಮಂಡಳಿಯ ವೇದಿಕೆಯಲ್ಲಿ ಹುಟ್ಟೂರ ಸನ್ಮಾನ ಸ್ವೀಕರಿಸಿ ಮಾತನಾಡಿ ತಂದೆ ಹಾಕಿಕೊಟ್ಟ ಕೃಷಿ,ಧಾರ್ಮಿಕ ವಿಧಿವಿಧಾನಗಳ ಪೌರೋಹಿತ್ಯಗಳ ಮೂಲಕ ಜನಸಾಮಾನ್ಯರಿಗೆ ಹತ್ತಿರವಾಗಿದ್ದೇನೆ ಅದು ಸನ್ಮಾನ ಪ್ರಶಸ್ತಿಗಳ ಮೂಲ ಇಳಿ ವಯಸ್ಸನ್ನು ಹುಡುಕಿಕೊಂಡು ಬಂದಿದೆ.ಜೀವನದಲ್ಲಿ ಪ್ರಶಸ್ತಿ ಸನ್ಮಾನಗಳು ಅಂತಿಮವಲ್ಲ ಬದಲಾಗಿ ತನ್ನ ಜೀವನದ್ದುದಕ್ಕೂ ಹಮ್ಮಿಕೊಂಡ ಸೇವಾ ಫಲವಾಗಿ ಹೆಸರನ್ನು ಚಿರಸ್ಥಾಯಿಯಾಗಿಸುವ ಕಾರ್ಯ ಇದೆಯಲ್ಲ ಅದು ದೊಡ್ಡದಾಗಿರುತ್ತದೆ ಎಂದು ಅಭಿಪ್ರಾಯಪಟ್ಟರು.

Click Here

ಅಧ್ಯಕ್ಷತೆಯನ್ನು ದೇವಳದ ಅಧ್ಯಕ್ಷ ಕೆ.ರಮೇಶ್ ಪ್ರಭು ವಹಿಸಿದ್ದರು. ದೇವಳದ ಗೌರವಾಧ್ಯಕ್ಷ ಗೋಪಾಲ್ ಪೈ,ಕಾರ್ಯದರ್ಶಿ ರಂಗನಾಥ್ ಪೈ,ಸಾಸ್ತಾನ ಗೋಳಿಗರಡಿ ದೈವಸ್ಥಾನದ ಅಧ್ಯಕ್ಷ ವಿಠ್ಠಲ್ ಪೂಜಾರಿ ಪಾಂಡೇಶ್ವರ, ನಿತ್ಯಾನಂದ ಪ್ರಭು,ನಾಗಪ್ಪಯ್ಯ ಪ್ರಭು,ಮಣೂರು ಫ್ರೆಂಡ್ಸ್ ಅಧ್ಯಕ್ಷ ದಿನೇಶ್ ಆಚಾರ್ಯ, ಜನಾರ್ಧನ ಆಚಾರ್ಯ,ನಾರಾಯಣ ಆಚಾರ್ಯ, ಶಂಕರ ಆಚಾರ್ಯ, ಸುರೇಶ್ ಆಚಾರ್ಯ ಮತ್ತಿತರರು ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಕೆ.ಉಮೇಶ್ ಪ್ರಭು ಸ್ವಾಗತಿಸಿ ನಿರೂಪಿಸಿ ವಂದಿಸಿದರು.ಗಣಪತಿ ಪ್ರಭು ಸಹಕರಿಸಿದರು.

ಶ್ರೀ ದೇವಳದಲ್ಲಿ ನಡೆದ ಧಾರ್ಮಿಕ ಕಾರ್ಯಕ್ರಮವನ್ನು ವೇ.ಮೂ. ಮಧುಸೂದನ ಬಾಯರಿ ನೆರವರಿಸಿದರು.ಆ ಪ್ರಯುಕ್ತ ಪ್ರಸಾದ ವಿತರಣೆ ,ಅನ್ನಸಂತರ್ಪಣೆ,ಭಜನಾ ಕಾರ್ಯಕ್ರಮ ನೆರವರಿತು.

ನಂತರ ಸರ್ಪಶಪತ ಯಕ್ಷಗಾನ ಪ್ರದರ್ಶನ ಜರಗಿತು.

Click Here

LEAVE A REPLY

Please enter your comment!
Please enter your name here