ಸುಜ್ಞಾನ ಪಿಯು ಕಾಲೇಜಿನಿಂದ 100% ಫಲಿತಾಂಶ

0
254

Click Here

Click Here

ಕುಂದಾಪುರ ಮಿರರ್ ಸುದ್ದಿ…

ಕುಂದಾಪುರ: 2025-2026ನೇ ಸಾಲಿನ ಶೈಕ್ಷಣಿಕ ವರ್ಷದ ವಾರ್ಷಿಕ ಪರೀಕ್ಷೆಯ ಫಲಿತಾಂಶದಲ್ಲಿ ಕುಂದಾಪುರದ ‘ಸುಜ್ಞಾನ’ಪಿಯು ಕಾಲೇಜು ತನ್ನ ಮೊದಲ ವರ್ಷದ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲೇ ಶೇ. 100ರಷ್ಟು ಫಲಿತಾಂಶ ದಾಖಲಿಸುವ ಮೂಲಕ ಶೈಕ್ಷಣಿಕ ಕ್ಷೇತ್ರದಲ್ಲಿ ಹೊಸ ಮೈಲಿಗಲ್ಲು ಸ್ಥಾಪಿಸಿದೆ. ಎಸ್‌ ಎಸ್‌ ಎಲ್‌ ಸಿಯಲ್ಲಿ ಶೇಕಡಾ 95ಕ್ಕಿಂತ ಅಧಿಕ ಫಲಿತಾಂಶ ಪಡೆದ ಕೇವಲ 9 ವಿದ್ಯಾರ್ಥಿಗಳನ್ನೊಳಗೊಂಡ ಒಟ್ಟು 125 ವಿದ್ಯಾರ್ಥಿಗಳಿರುವ ಸುಜ್ಞಾನ ಪಿಯು ಕಾಲೇಜಿನ ಪ್ರಥಮ ಬ್ಯಾಚ್‌ ನ ಫಲಿತಾಂಶದಲ್ಲಿ 22 ವಿದ್ಯಾರ್ಥಿಗಳು ಶೇಕಡಾ 95ಕ್ಕಿಂತ ಅಧಿಕ ಅಂಕ ಪಡೆದು ಸಂಸ್ಥೆಯ ಕೀರ್ತಿಯನ್ನು ಹೆಚ್ಚಿಸಿದ್ದಾರೆ. ವಿಶಿಷ್ಟ ಶ್ರೇಣಿಯಲ್ಲಿ ವಿಜ್ಞಾನ ವಿಭಾಗದಲ್ಲಿ 84 ವಿದ್ಯಾರ್ಥಿಗಳು, ವಾಣಿಜ್ಯ ವಿಭಾಗದಲ್ಲಿ 5 ಹಾಗೇ ಪ್ರಥಮ ಶ್ರೇಣಿಯಲ್ಲಿ ವಿಜ್ಞಾನ ವಿಭಾಗದಲ್ಲಿ 33, ವಾಣಿಜ್ಯ ವಿಭಾಗದಲ್ಲಿ 2 ವಿದ್ಯಾರ್ಥಿಗಳು ಸಾಧನೆ ಮಾಡಿದ್ದಾರೆ. ವಿದ್ಯಾರ್ಥಿಗಳಿರುವ

Click Here

ವಿಜ್ಞಾನ ವಿಭಾಗದ ಸಾಧಕರು:
ಸಮ್ಮೆದ ಪಾರೀಸ ಭೋಜ:587 ಅಂಕಗಳು
ಸಿಂಚನಾ: 586 ಅಂಕಗಳು
ಪ್ರತೀಕ್ಷಾ ಎಚ್‌. ಶೆಟ್ಟಿ: 586 ಅಂಕಗಳು
ಎನ್‌. ರಕ್ಷಾ: 584 ಅಂಕಗಳು
ಅನಘಾ ವಿ. ಶೆಟ್ಟಿ: 583 ಅಂಕಗಳು
ಶ್ರೀಶಾಂತ್‌: 582 ಅಂಕಗಳು
ಶಿವರಾಜ್‌ ಬಿ. ಶೆಟ್ಟಿ: 581 ಅಂಕಗಳು
ಕೌಶಿಕ್‌ ಶೆಟ್ಟಿ: 580 ಅಂಕಗಳು
ಪವನ್‌ ಎ ಕುಲಾಲ್:‌ 579 ಅಂಕಗಳು
ಪ್ರಿಯಾಂಕಾ ಶೆಟ್ಟಿ-577 ಅಂಕಗಳು
ಸೃಷ್ಠಿ ಶಿವಾಜಿ ನೆಲವಾಡೆ-577 ಅಂಕಗಳು
ಜಯರಾಜ್‌ ಜೆ.ಎಸ್-575‌ ಅಂಕಗಳು
ಸುಶ್ಮಿತಾ ಪ್ರವೀಣ್‌ ಕುಮಾರ್ ಸುಕಾಲಿ-575‌ ಅಂಕಗಳು
ಭೂಮಿಕಾ ಎಸ್.‌ ಆಚಾರ್ಯ-575 ಅಂಕಗಳು
ಪಂಚಮಿ ಚಂದ್ರ ಕುಲಾಲ್-574‌ ಅಂಕಗಳು
ಶ್ರೀಜನ್‌ ಶ್ರೀಧರ್‌ ಶೆಟ್ಟಿ-573 ಅಂಕಗಳು
ದೇಶಿಕ್‌ ಕೆ-572 ಅಂಕಗಳು
ಸುಜನ್‌ ಬಿ ಶೆಟ್ಟಿ-572 ಅಂಕಗಳು
ನವ್ಯಾ-571 ಅಂಕಗಳು
ತನುಷಾ ಎಸ್‌ ಶೆಟ್ಟಿ-571 ಅಂಕಗಳು
ಪೃಥ್ವಿಕ್‌ -570 ಅಂಕಗಳು

ವಾಣಿಜ್ಯ ವಿಭಾಗದ ಸಾಧನೆ:
ವಾಣಿಜ್ಯ ವಿಭಾಗದಲ್ಲಿ ಸ್ಪಂದನಾ ಆರ್‌ ಶೆಟ್ಟಿ 592 ಅಂಕಗಳನ್ನು ಗಳಿಸಿದ್ದಾರೆ.

ಸುಜ್ಞಾನ ಎಜುಕೇಶನಲ್‌ ಟ್ರಸ್ಟ್‌ನ ಅಧ್ಯಕ್ಷರಾದ ಡಾ.ರಮೇಶ್‌ ಶೆಟ್ಟಿ, ಕಾರ್ಯದರ್ಶಿ ಪ್ರತಾಪ್‌ ಚಂದ್ರ ಶೆಟ್ಟಿ, ಖಜಾಂಚಿ ಭರತ್‌ ಶೆಟ್ಟಿ ಹಾಗೂ ಸಂಸ್ಥೆಯ ಪ್ರಾಂಶುಪಾಲರಾದ ರಂಜನ್‌ ಬಿ.ಶೆಟ್ಟಿ ವಿದ್ಯಾರ್ಥಿಗಳನ್ನು ಅಭಿನಂದಿಸಿದ್ದಾರೆ. ಹಾಗೇ ಬೋಧಕ ವರ್ಗದವರು ವಿದ್ಯಾರ್ಥಿಗಳ ಸಾಧನೆಗೆ ಸಂತಸ ವ್ಯಕ್ತಪಡಿಸಿದ್ದಾರೆ. ವಿದ್ಯಾರ್ಥಿಗಳ ನಿರಂತರ ಶ್ರಮ, ಪೋಷಕರ ಸಹಕಾರ ಮತ್ತು ಕಾಲೇಜಿನ ಗುಣಮಟ್ಟದ ಶಿಕ್ಷಣವೇ ಈ 100% ಫಲಿತಾಂಶಕ್ಕೆ ಕಾರಣ ಎಂದು ಆಡಳಿತ ಮಂಡಳಿ ತಿಳಿಸಿದೆ.

Click Here

LEAVE A REPLY

Please enter your comment!
Please enter your name here