ಕುಂದಾಪುರ ಮಿರರ್ ಸುದ್ದಿ…
ಕೋಟ: ಕೋಟ ಶ್ರೀ ಅಮೃತೇಶ್ವರಿ ಹಲವು ಮಕ್ಕಳ ತಾಯಿ ದೇವಳಕ್ಕೆ ಕನ್ನಡ ಚಿತ್ರರಂಗದ ಶ್ರೇಷ್ಠ ನಟಿ ತಾರಾ ಭೇಟಿ ನೀಡಿ ಶ್ರೀ ದೇವಿಯ ದರ್ಶನ ಪಡೆದು ಪೂಜೆ ಸಲ್ಲಿಸಿದರು.
ಈ ಸಂದರ್ಭದಲ್ಲಿ ಶ್ರೀ ದೇವಳದ ಅಧ್ಯಕ್ಷ ಆನಂದ್ ಸಿ ಕುಂದರ್ ನಟಿ ತಾರಾ ಪತಿ ವೇಣುಗೋಪಾಲ್ ಪುತ್ರ ಶ್ರೀಕೃಷ್ಣ ಇವರುಗಳ ಶಾಲು ಹೊದಿಸಿ ಪ್ರಸಾದ ವಿತರಿಸಿ ಗೌರವಿಸಿದರು.
ದೇವಳದ ವ್ಯವಸ್ಥಾಪನಾ ಸಮಿತಿ ಸದಸ್ಯರಾದ ಚಂದ್ರ ಪೂಜಾರಿ, ಎಂ.ಸುಬ್ರಾಯ ಆಚಾರ್ಯ, ಸುಶೀಲ ಸೋಮಶೇಖರ್, ವ್ಯವಸ್ಥಾಪನಾ ಸಮಿತಿ ಮಾಜಿ ಸದಸ್ಯ ಚಂದ್ರ ಆಚಾರ್ಯ, ಜೀರ್ಣೋದ್ಧಾರ ಸಮಿತಿ ಮಾಜಿ ಸದಸ್ಯ ಭುಜಂಗ ಗುರಿಕಾರ, ಜಿ.ಎಸ್ ಆನಂದ್ ದೇವಾಡಿಗ, ಅರ್ಚಕರಾದ ಸತೀಶ್ ಜೋಗಿ, ದಿನೇಶ್ ಜೋಗಿ, ಸಚಿನ್ ಜೋಗಿ, ದೇವಳದ ಸಿಬ್ಬಂದಿಗಳಾದ ಗಣೇಶ್ ಹೊಳ್ಳ,ಕಿರಣ್ ಪೂಜಾರಿ ಕದ್ರಿಕಟ್ಟು, ಮಂಜು ಮರಕಾಲ ಮತ್ತಿತರರು ಉಪಸ್ಥಿತರಿದ್ದರು.










