ಕುಂದಾಪುರ ಮಿರರ್ ಸುದ್ದಿ…
ಕೋಟ : ಕೋಟದ ಸಾಲಿಗ್ರಾಮ ಮಕ್ಕಳ ಮೇಳವು ಆಯೋಜಿಸಿದ ಉಡುಪ ಸಂಸ್ಮರಣೆ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಉಡುಪಿಯ ಸಂಗೀತ ವಿದ್ವಾಂಸ ಕಲಾಶ್ರೀ, ಕಲಾದೀಪ್ತಿ ಮಧೂರು ಪಿ. ಬಾಲಸುಬ್ರಹ್ಮಣ್ಯಂ ಅವರಿಗೆ ಗುರುವಂದನೆ ಸಲ್ಲಿಸಲಾಯಿತು.
ಸುಮಾ ಬಾಲಸುಬ್ರಹ್ಮಣ್ಯಂ, ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಶಿಕ್ಷಕ ಎಚ್. ಶ್ರೀಧರ ಹಂದೆ, ಸುಜಯಿಂದ್ರ ಹಂದೆ, ವಿನಿತ, ಕಾವ್ಯ ಉಪಸ್ಥಿತರಿದ್ದರು. ಮಾಧುರಿ ಶ್ರೀರಾಮ್ ಕಾರ್ಯಕ್ರಮ ನಿರ್ವಹಿಸಿದರು.
ಬಳಿಕ ನಡೆದ ಭಾವ ರಸ ಗಾನ ಸುಧಾ ಕಾರ್ಯಕ್ರಮ ದಲ್ಲಿ ಸಂಗೀತ ಗುರುಗಳಾದ ಪಿ. ಬಾಲಸುಬ್ರಹ್ಮಣ್ಯಂ ಮತ್ತು ಶೃಂಗೇರಿಯ ಎಚ್. ಎನ್. ನಟರಾಜ್ ಇವರಿಂದ ಕರ್ನಾಟಕ ಸಂಗೀತ ಕಛೇರಿ ನಡೆಯಿತು. ಪಕ್ಕವಾದ್ಯದಲ್ಲಿ ವಾಯಲಿನ್‍ನಲ್ಲಿ ಧನಶ್ರೀ ಶಬರಾಯ, ಮೃದಂಗದಲ್ಲಿ ಪನ್ನಗ ಶರ್ಮಾನ್, ಖಂಜೀರದಲ್ಲಿ ಸುಧನ್ವ ಸಹಕರಿಸಿದು.
ಸುಮಾ ಬಾಲಸುಬ್ರಹ್ಮಣ್ಯಂ , ರಾಷ್ಟ್ರ ಪ್ರಶಸ್ತಿ ಪುರಸ್ಕøತಶಿಕ್ಷಕ ಎಚ್. ಶ್ರೀಧರ ಹಂದೆ, ಸುಜಯಿಂದ್ರ ಹಂದೆ ಮತ್ತಿತರರು ಉಪಸ್ಥಿತರಿದ್ದರು.











