ಬಸ್ರೂರಿನಲ್ಲಿ ತುಳುವೇಶ್ವರ ಸನ್ನಿಧಿಯಲ್ಲಿ ಬಿಸು ಸಂಕ್ರಮಣ ದೀಪಾ ಆರಾಧನೆ ಹಾಗೂ ಬುಲೆ ಸಮರ್ಪಣ ಕಾರ್ಯಕ್ರಮ

0
351

Click Here

Click Here

ಕುಂದಾಪುರ ಮಿರರ್ ಸುದ್ದಿ…

ಬಸ್ರೂರು: ಶ್ರೀ ತುಳುವೇಶ್ವರ ದೇವಸ್ಥಾನ, ಬಸ್ರೂರಿನಲ್ಲಿ ಬಿಸು ಸಂಕ್ರಮಣದ ಅಂಗವಾಗಿ ಭಕ್ತಿಪೂರ್ವಕವಾಗಿ ದೀಪಾ ಆರಾಧನೆ ಹಾಗೂ ಬುಲೆ ಸಮರ್ಪಣ ಕಾರ್ಯಕ್ರಮ ವಿಜೃಂಭಣೆಯಿಂದ ನಡೆಯಿತು.

ಸಂಜೆ ವೇಳೆ ನಡೆದ ಈ ಕಾರ್ಯಕ್ರಮದಲ್ಲಿ ಭಕ್ತರು ದೀಪಗಳನ್ನು ಬೆಳಗಿಸಿ, ಶ್ರೀ ತುಳುವೇಶ್ವರ ಹಾಗೂ ಪರಿವಾರ ದೈವಗಳಿಗೆ ವಿಶೇಷ ಪ್ರಾರ್ಥನೆ ಸಲ್ಲಿಸಿದರು. ಬಳಿಕ ಬುಲೆ ಸಮರ್ಪಣೆ ಮೂಲಕ ದೇವರ ಅನುಗ್ರಹವನ್ನು ಕೋರಲಾಯಿತು.
ಈ ಸಂದರ್ಭದಲ್ಲಿ ತುಳುವ ಮಹಾಸಭೆ ಮೂಲ್ಕಿ ತಾಲೂಕು ಸಮಿತಿಯಿಂದ ಬುಲೆ ಕಾಣಿಕೆ ಸಮರ್ಪಣೆ ನಡೆಯಿತು.

Click Here

ಕಾರ್ಯಕ್ರಮದ ಅಂಗವಾಗಿ ತುಳುವೇಶ್ವರ ದೇವಸ್ಥಾನದ ಪುನರ್ವೈಭವೀಕರಣಕ್ಕಾಗಿ ಭೂದಾನ ಸೇವೆಗೆ ಸಂಬಂಧಿಸಿದ ವಿಜ್ಞಾಪನ ಪತ್ರವನ್ನು ಬಿಡುಗಡೆ ಮಾಡಲಾಯಿತು. ಭಕ್ತರು ಈ ಮಹತ್ಕಾರ್ಯದಲ್ಲಿ ಪಾಲ್ಗೊಂಡು ದೇಣಿಗೆ ನೀಡುವಂತೆ ಮನವಿ ಮಾಡಲಾಯಿತು.

ಕಾರ್ಯಕ್ರಮದಲ್ಲಿ ಅರ್ಚಕರಾದ ಮಹೇಶ್ ಕಿಣಿ, ತುಳುವರ್ಲ್ಡ್ ಫೌಂಡೇಶನ್ ನಿರ್ದೇಶಕ ಡಾ. ರಾಜೇಶ್ ಆಳ್ವ, ಕೃಷ್ಣಮೂರ್ತಿ ಅಡಿಗ ಬಸ್ರೂರು, ಭಾನುಮತಿ ಶೆಟ್ಟಿ ಕಕ್ವಗುತ್ತು, ಕೃಷ್ಣಮೂರ್ತಿ ರಾವ್ ಪಾದೆಬೆಟ್ಟು, ಸನ್ಮತ್ ಹೆಗ್ಡೆ ಬಸ್ರೂರು, ದಿನಕರ ಕಿಣಿ, ತುಳುವರ್ಲ್ಡ್ ಫೌಂಡೇಶನ್ ಪ್ರಧಾನ ಕಾರ್ಯದರ್ಶಿ ವಸಂತ ರೈ, ಕಾರ್ಯದರ್ಶಿ ಹರಿಪ್ರಸಾದ್ ರೈ ಜಿಕೆ, ಬಂಟ್ಸ್ ಸಂಘ ಮಹಿಳಾ ಘಟಕ ಮುಲ್ಕಿ ಅಧ್ಯಕ್ಷರು ರೋಹಿಣಿ ಶೆಟ್ಟಿ (ಕೊಲ್ನಾಡು),
ಬಿಲ್ಲವ ಸಂಘ ಮಹಿಳಾ ಮಂಡಳಿ ಮುಲ್ಕಿ ಗೌರವಾಧ್ಯಕ್ಷರು ಸರೋಜಿನಿ ಸುವರ್ಣ, ತುಳುವ ಮಹಾಸಭೆ ಸಂಚಾಲಕರಾದ ಗಣೇಶ್ ಬಂಗೇರ, ವಿನಯ ಆರ್. ಆಳ್ವಾ, ಗೀತಾ ಗಣೇಶ್, ಭಾರತಿ ರೈ ಮುಲ್ಕಿ, ಪ್ರಜ್ವಲ್ ಆಳ್ವ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಊರಿನ ಅನೇಕ ಭಕ್ತರು ತುಳುನಾಡಿನ ಹೊಸ ವರ್ಷವಾದ ಬಿಸು ಹಬ್ಬವನ್ನು ಭಕ್ತಿಭಾವದಿಂದ ಸ್ವಾಗತಿಸಿ, ದೇವರ ಸನ್ನಿಧಿಯಲ್ಲಿ ಶಾಂತಿ, ಆರೋಗ್ಯ ಹಾಗೂ ಸಮೃದ್ಧಿಗಾಗಿ ಪ್ರಾರ್ಥನೆ ಸಲ್ಲಿಸಿದರು.

Click Here

LEAVE A REPLY

Please enter your comment!
Please enter your name here