ಕುಂದಾಪುರ ಮಿರರ್ ಸುದ್ದಿ…
ಕುಂದಾಪುರ: ಮಾ.3ರಿಂದ ನಡೆಯಲಿರುವ 13ನೇ ಬೆಂಗಳೂರು ಅಂತರರಾಷ್ಟ್ರೀಯ ಚಲನಚಿತ್ರೋತ್ಸವದ ಪ್ರತಿಷ್ಠಿತ ಭಾರತೀಯ ಸಿನಿಮಾ ಸ್ಪರ್ಧೆಗೆ ‘ಮಾಲ್ವಿಕ ಮೋಶನ್ ಪಿಚ್ಚರ್ಸ್’ ನಿರ್ಮಾಣದ ಚಿತ್ರ ‘ಆ 90 ದಿನಗಳು’ ಆಯ್ಕೆಯಾಗಿದೆ.
55 ರಾಷ್ಟ್ರಗಳ 200 ಚಿತ್ರಗಳು ಇದರಲ್ಲಿ ಭಾಗವಹಿಸಲಿರುವ ಸ್ಪರ್ಧೆಯಲ್ಲಿ ರಾಷ್ಟ್ರ ಪ್ರಶಸ್ತಿ ಪುರಸ್ಕೃತ ‘ಗುಲ್ವಾಡಿ ಟಾಕೀಸ್’ ಅರ್ಪಿಸುವ ರೊನಾಲ್ಡ್ ಲೋಬೊ ಮತ್ತು ಯಾಕೂಬ್ ಖಾದರ್ ಗುಲ್ವಾಡಿ ನಿರ್ದೇಶನದ ಸಸ್ಪೆನ್ಸ್ ಮತ್ತು ಥ್ರಿಲ್ಲರ್ ಕಥೆ ಹೊಂದಿರುವ ಆ 90 ದಿನಗಳು ಸಿನಿಮಾ ಸ್ಥಾನ ಪಡೆದಿದೆ.
ಈ ಸಿನಿಮಾದಲ್ಲಿ ರತಿಕ್ ಮುರ್ಡೇಶ್ವರ್, ಭವ್ಯ, ರಾಧ ಭಗವತಿ, ಕೃತಿಕ ದಯಾನಂದ್, ಜೋ ಸೈಮನ್, ಪ್ರದೀಪ್ ಪೂಜಾರಿ, ಅಮೀರ್ ಹಂಝ, ಪಕೀರ್ ಸಲಾಂ, ರವಿ ಕಿರಣ್ ಮುರ್ಡೇಶ್ವರ ಮುಂತಾದವರು ಅಭಿನಯಿಸಿದ್ದಾರೆ. ಸಹ ನಿರ್ಮಾಪಕರಾಗಿ ಗಿರೀಶ ಶೆಟ್ಟಿಗಾರ್, ನವೀನ ವಿಲಿಯಮ್ಸ್ ಬರ್ಬೋಜ, ತಾಂತ್ರಿಕ ನಿರ್ದೇಶನ: ಬಿ ಶಿವಾನಂದ್, ಛಾಯಾಗ್ರಹಣ: ಪಿ.ವಿ.ಆರ್ ಸ್ವಾಮಿ ಗೂಗಾರ ದೊಡ್ಡಿ, ಸಂಗೀತ: ಕೃಷ್ಣ ಬಸ್ರೂರು, ಸಂಕಲನ: ನಾಗೇಶ ಓ, ಕಲರಸ್ಟ್: ಎ ಗುರು ಪ್ರಸಾದ್, ಸೌಂಡ್ ಡಿಸೈನರ್: ಬಾಲಕೃಷ್ಣ, ಸಾಹಿತ್ಯ: ಪ್ರಮೋದ ಮರವಂತೆ, ಗಾಯಕರು: ಅರ್ಫಾಝ್ ಉಳ್ಳಾಲ್, ಶಶಿಕಲ ಸುನೀಲ್ ಮುಂತಾದವರು ತಾಂತ್ರಿಕ ವರ್ಗದಲ್ಲಿದ್ದಾರೆ.