ಕುಂದಾಪುರ ಮಿರರ್ ಸುದ್ದಿ…
ಕೋಟ: ರಾಜ್ಯದ ಸಮಾಜಕಲ್ಯಾಣ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಖಾತೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ದಂಪತಿ ಶಾಂತಾ ಸಮೇತರಾಗಿ ಕೋಟದ ಮಹತೋಭಾರ ಹಿರೇಮಹಾಲಿಂಗೇಶ್ಚರ ದೇವಸ್ಥಾನಕ್ಕೆ ಭೇಟಿ ನೀಡಿದರು.
ಮಹಾಶಿವರಾತ್ರಿ ಹಿನ್ನಲ್ಲೆಯಲ್ಲಿ ದೇವಳದಲ್ಲಿ ಪೂಜೆ ಸಲ್ಲಿಸಿದರು. ಈ ಸಂದರ್ಭದಲ್ಲಿ ದೇವಳದ ಪ್ರಧಾನ ಅರ್ಚಕ ರಾಜೇಂದ್ರ ಅಡಿಗ ಪ್ರಸಾದ ವಿತರಿಸಿದರು.
ಶ್ರೀ ಹಿರೇಮಹಾಲಿಂಗೇಶ್ಚರ ಮಿತ್ರವೃಂದದ ವತಿಯಿಂದ ಫಲಹಾರವನ್ನು ಸಚಿವರು ಸ್ವೀಕರಿಸಿ ಹಿಂತಿರುಗಿದರು.
ದೇವಳದ ಆಡಳಿತ ಮಂಡಳಿಯ ಸದಸ್ಯ ಜಿ.ಎಸ್ ಆನಂದ್ ದೇವಾಡಿಗ,ಗುತ್ತಿಗೆದಾರ ಸೀತಾರಾಮ್ ಆಚಾರ್ಯ, ಹಿಂದೂ ಧಾರ್ಮಿಕದತ್ತಿ ಪರಿಷತ್ ಸದಸ್ಯೆ ಶಾಲಿನಿ ಸುರೇಶ್ , ದೇವಳದ ಅರ್ಚಕರು ಉಪಸ್ಥಿತರಿದ್ದರು.











