ಕುಂದಾಪುರ ಮಿರರ್ ಸುದ್ದಿ…
ಮಾರಣಕಟ್ಟೆ: ಡಾ. ಬಿ. ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನ ಎನ್.ಎಸ್.ಎಸ್. ವಾರ್ಷಿಕ ವಿಶೇಷ ಶಿಬಿರವು ಫೆ.12ರಿಂದ 18 ರ ತನಕ ಶ್ರೀ ಕ್ಷೇತ್ರ ಮಾರಣಕಟ್ಟೆಯಲ್ಲಿ ನಡೆದಿದ್ದು, ಕ್ಯಾಂಪನಲ್ಲಿ ಶಿಬಿರಾರ್ಥಿಗಳಿಗೆ ಹಾಗೂ ಗ್ರಾಮಸ್ಥರಿಗೆ ಉಪಯೋಗವಾಗುವಂತೆ ಉಚಿತ ಆಯುರ್ವೇದ ಆರೋಗ್ಯ ತಪಾಸಣಾ ಶಿಬಿರವನ್ನು ಫೆ.14 ರಂದು ಮಹಾಲಿಂಗೇಶ್ವರ ಕಲ್ಯಾಣ ಮಂಟಪದಲ್ಲಿ ಆಯೋಜಿಸಲಾಗಿತ್ತು.
ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಯುರ್ವೇದ ಆಸ್ಪತ್ರೆ ಮತ್ತು ಕಾಲೇಜು, ಕುತ್ಪಾಡಿ-ಉದ್ಯಾವರ, ರೋಟರಿ ಕ್ಲಬ್ ಕುಂದಾಪುರ ದಕ್ಷಿಣ,ಇನ್ನರ್ ವಿಲ್ ಕ್ಲಬ್ ಕುಂದಾಪುರ ದಕ್ಷಿಣ ಇವರ ಸಹಯೋಗದೊಂದಿಗೆ ಉಚಿತ ಆಯುರ್ವೇದ ಆರೋಗ್ಯ ತಪಾಸಣಾ ಶಿಬಿರವನ್ನು ಹಮ್ಮಿಕೊಳ್ಳಲಾಗಿತ್ತು.
ಶಿಬಿರವನ್ನು ಮಂಜುನಾಥ ಶೆಟ್ಟಿ ಹೆಗಡೆಗದ್ದೆ ಮನೆ ಇಡೂರು ಉದ್ಘಾಟಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ರೋಟರಿ ಕ್ಲಬ್ ಕುಂದಾಪುರ ದಕ್ಷಿಣದ ಅಧ್ಯಕ್ಷರಾದ ರೊ.ಮಹೇಂದ್ರ ಶೆಟ್ಟಿ ವಹಿಸಿದ್ದರು. ಆಯುಷ್ಯದ ಬಗ್ಗೆ ಜನಮಾನಸಕ್ಕೆ ಸಂಪೂರ್ಣ ಅರಿವು ಮೂಡಿಸು ವುದೇ ಆಯುರ್ವೇದ ಆರೋಗ್ಯ ರಕ್ಷಣೆ ಮಾಡಿಕೊಳ್ಳಲು ಬೇಕಾದ ಆಹಾರ-ವಿಹಾರ, ಆಚಾರ-ವಿಚಾರ ಗಳಿಂದ ಶರೀರ ಸಮತೋಲನದಲ್ಲಿಟ್ಟು ಕಾಪಾಡಿಕೊಳ್ಳಬೇಕು ಎಂದು ಮಂಜುನಾಥೇಶ್ವರ ಆಯುರ್ವೇದ ಕಾಲೇಜು ಮತ್ತು ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ| ನಾಗರಾಜ್ ಪೂಜಾರಿ ತಿಳಿಸಿದರು.
ಇನ್ನರ್‌ವೀಲ್ ಅಧ್ಯಕ್ಷೆ ಎನ್. ಸೌಮ್ಯಾ ಶೆಟ್ಟಿ, ಕಾರ್ಯದರ್ಶಿ ಎನ್. ಶಾಂತಾ ಕಾಂಚನ್ , ಕಾಲೇಜಿನ ಎನ್.ಎಸ್.ಎಸ್.ಯೋಜನಾಧಿಕಾರಿ ಪ್ರವೀಣ್ ಮೊಗವೀರ ಗಂಗೊಳ್ಳಿ, ಸಹಯೋಜನಾಧಿಕಾರಿ ರೇಷ್ಮಾ ಶೆಟ್ಟಿ, ರೋಟರಿ ಕ್ಲಬ್‌ನ ಕೆ.ಪಿ. ಭಟ್, ರಮಾನಂದ ಕಾರಂತ್ ಉಪಸ್ಥಿತರಿದ್ದರು.
ಶಿಬಿರಾರ್ಥಿಗಳಿಗೆ ಹಾಗೂ ಸಾರ್ವಜನಿಕರಿಗೆ ಉಚಿತವಾಗಿ ತಪಾಸಣೆ ನಡೆಸುವುದರ ಜೊತೆಗೆ ಔಷಧ ವಿತರಿಸಲಾಯಿತು. ಕುತ್ಪಾಡಿ ಕಾಲೇಜು ಮತ್ತು ಆಸ್ಪತ್ರೆಯ ವೈದ್ಯರಾದ ಡಾ। ನಾಗರಾಜ್, ಡಾ| ರಾಕೇಶ್, ಡಾ| ಅರುಣ್, ಡಾ| ಅರ್ಪಣಾ ಜೈನ್, ಡಾ| ಚಿತ್ರಲೇಖ, ಕಿರಿಯ ಹಾಗೂ ಸ್ನಾತಕೋತ್ತರ ವೈದ್ಯರ ತಂಡ ತಪಾಸಣೆ ನಡೆಸಿ, ಮಾಹಿತಿಗಳನ್ನು ನೀಡಿದರು. 234ಕ್ಕೂ ಹೆಚ್ಚು ನಾಗರಿಕರು ಶಿಬಿರದ ಪ್ರಯೋಜನ ಪಡೆದರು.











