
ಕುಂದಾಪುರ ಮಿರರ್ ಸುದ್ದಿ…
ಕೋಟ: ಕೋಟ ಅಮೃತೇಶ್ವರಿ ಹಲವು ಮಕ್ಕಳ ತಾಯಿ ದೇವಳಕ್ಕೆ ಎಸ್.ಟಿ.ಜಿ.ಸಿ ವೆಂಚರ್ ಪ್ರೈವೇಟ್ ಲಿಮಿಟೆಡ್ ಮಾಲಿಕ ವಿನೋದ್ ಕುಮಾರ್ ಭೇಟಿ ನೀಡಿ ಶ್ರೀದೇವಿಯ ದರ್ಶನ ಪಡೆದರು.
ಈ ಸಂದರ್ಭದಲ್ಲಿ ದೇವಳದಲ್ಲಿ ವಿಶೇಷ ಪೂಜೆ ಸಲ್ಲಿಸಿದರು.ದೇವಳದ ವತಿಯಿಂದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಆನಂದ್ ಸಿ ಕುಂದರ್ ಶಾಲು ಹೊದಿಸಿ ಪ್ರಸಾದ ವಿತರಿಸಿ ಗೌರವಿಸಿದರು.
ಎಸ್.ಟಿ.ಜಿ.ಸಿ ವೆಂಚರ್ ಪ್ರೈವೇಟ್ ಲಿಮಿಟೆಡ್ ರಾಜ್ಯ ಅಧ್ಯಕ್ಷ ಕೆ ನಾಗರಾಜ ಗಾಣಿಗ , ಸಂಸ್ಥೆಯ ತಮಿಳುನಾಡು ಅಧ್ಯಕ್ಷ ಕಾತೀಕೆನ್ ಎಸ್,ಪಾಂಡಿಚೇರಿಯ ಅಧ್ಯಕ್ಷ ಎ.ಕೆ ರಾಜಶೇಖರ್,ಕಂಪನಿಯ ಮ್ಯಾನೆಜಿಂಗ್ ಟ್ರಸ್ಟಿ ಪೇರಿಯಾ ಸ್ವಾಮಿ,ದೇವಳದ ಟ್ರಸ್ಟಿಗಳಾದ ಚಂದ್ರ ಪೂಜಾರಿ,ಜಿ.ಸತೀಶ್ ಹೆಗ್ಡೆ ,ಎಂ ಸುಬ್ರಾಯ ಆಚಾರ್ಯ,ಕಂಪನಿಯ ಸಿಬ್ಬಂದಿ ರಾಘವೇಂದ್ರ ಪೂಜಾರಿ,ಕೋಟ ಗ್ರಾಮಪಂಚಾಯತ್ ಸದಸ್ಯ ಚಂದ್ರಯ್ಯ ಆಚಾರ್ಯ,ಶಾಂಭವೀ ಶಾಲಾ ಆಡಳಿತ ಮಂಡಳಿಯ ಅಧ್ಯಕ್ಷ ಕೆ.ರಾಜಾರಾಮ್ ಐತಾಳ್,ದೇವಳದ ಸಿಬ್ಬಂದಿಗಳಾದ ಗಣೇಶ್ ಹೊಳ್ಳ,ಅಪೂರ್ವ,ಸಂದೇಶ್ ತೋಳಾರ್,ಕಿರಣ್ ಪೂಜಾರಿ ಮತ್ತಿತರರು ಉಪಸ್ಥಿತರಿದ್ದರು.










