ಕುಂದಾಪುರ ಮಿರರ್ ಸುದ್ದಿ…
ಕುಂದಾಪುರ: ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಕಂಡ್ಲೂರು ಗ್ರಾಮ ಸಮಿತಿ ವತಿಯಿಂದ ಸಾರ್ವಜನಿಕ ಸೇವೆಗೆ ನೂತನ ಆಂಬ್ಯುಲೆನ್ಸ್ ಉದ್ಘಾಟನಾ ಸಮಾರಂಭ ಮಾ.1 ರಂದು ಕಂಡ್ಲೂರು ಜಾಮೀಯಾ ಮಸೀದಿ ಬಳಿ ನಡೆಯಿತು.

ಎಸ್.ಡಿ.ಪಿ.ಐ ಬೈಂದೂರು ವಿಧಾನ ಸಭಾ ಕ್ಷೇತ್ರ ಸಮಿತಿ ಅಧ್ಯಕ್ಷ ಸುಹೇಲ್ ಮುಕ್ತೇಸರ್ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದು ಪಕ್ಷದ ಕಾರ್ಯ ಶೈಲಿಯ ಬಗ್ಗೆ ಮಾಹಿತಿ ನೀಡಿದರು.
ಆಂಬ್ಯುಲೆನ್ಸ್ ಸೇವೆಯ ಲೋಕಾರ್ಪಣೆಯನ್ನು ಎಸ್.ಡಿ.ಪಿ.ಐ ರಾಜ್ಯಾಧ್ಯಕ್ಷ ಅಬ್ದುಲ್ ಮಜೀದ್ ಮೈಸೂರು ನೆರವೇರಿಸಿ ಮಾನವೀಯ ಸೇವೆ ಮತ್ತು ಜನಪರ ನೈಜ ರಾಜಕೀಯ ಮಾಡುಲು ಎಸ್.ಡಿ.ಪಿ.ಐ ಜೊತೆಗೆ ಕೈಜೋಡಿಸಿ ದ್ವೇಷ ರಾಜಕೀಯಕ್ಕೆ ಸಮಾಜದಿಂದ ನಿರ್ಮೂಲನೆ ಮಾಡಬೇಕೆಂದು ಕರೆನೀಡಿದರು.
ಈ ಸಂದರ್ಭದಲ್ಲಿ ಅಥಿತಿಗಳಾಗಿ ಆಗಮಿಸಿದ ಮೌಲಾನ ಉಬೆದುಲ್ಲಾ ಅಬುಬ್ಕರ್ ನದ್ವಿ ರವರು ಇಸ್ಲಾಂ ಧರ್ಮ ಸಮಾಜ ಮತ್ತು ಮಾನವೀಯ ಸೇವೆಗೆ ನೀಡುವ ಮಹತ್ವದ ಬಗ್ಗೆ ವಿವರಿಸಿದರು ಹಾಗೂ ಶಾಫೀ ಬೆಳ್ಳಾರೆ ಪ್ರಸಕ್ತ ರಾಜಕೀಯ ವ್ಯವಸ್ಥೆ ಹಾಗೂ ಪರಿಹಾರದ ಕುರಿತು ವಿಶ್ಲೇಷಿದರು ಹಾಗೂ ಕಂಡ್ಲೂರು ಜಾಮೀಯಾ ಮಸೀದಿ ಖತೀಬರಾದ ಮೌಲಾನ ಇಲ್ಯಾಸ್ ನದ್ವಿ ಮಾನವೀಯ ಸೇವೆ ಕಾಲದ ಬೇಡಿಕೆ ಎಂಬ ಸಂದೇಶ ನೀಡಿದರು ನಂತರ ವೈದ್ಯಕೀಯ ಕ್ಷೇತ್ರದಲ್ಲಿ ಸಾಧನೆಗೈದ ಡಾ.ತಮೀಮ್ ಮುಕ್ತೇಸರ್ ಮತ್ತು ಕಂಡ್ಲೂರು ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ಲತಾ ನಾಯಕ್ ಅವರನ್ನು ಸನ್ಮಾನಿಸಲಾಯಿತು.
ಎಸ್.ಡಿ.ಪಿ.ಐ ಕಂಡ್ಲೂರು ಗ್ರಾಮ ಸಮಿತಿ ಅಧ್ಯಕ್ಷ ರಫೀಕ್ ಕಂಡ್ಲೂರು ವಂದಿಸಿದರು. ಲಿಯಾಕತ್ ಕಂಡ್ಲೂರು ಪ್ರಾಸ್ತವಿಕ ಮಾತುಗಳನ್ನಾಡಿದರು.











