ಕುಂದಾಪುರ ಮಿರರ್ ಸುದ್ದಿ…
ಕೋಟ: ಜನತಾ ಸಮೂಹ ಸಂಸ್ಥೆಯಲ್ಲಿ ರಾಷ್ಟೀಯ ಸುರಕ್ಷತಾ ದಿನಾಚರಣೆಯನ್ನು ಗುರುವಾರ ಆಚರಿಸಲಾಯಿತು.
ಸಂಸ್ಥೆಯ ಮುಖ್ಯಸ್ಥ ಆನಂದ್ ಸಿ ಕುಂದರ್ ಸುರಕ್ಷತಾ ಉಪಕರಣಗಳ ಪ್ರದರ್ಶನವನ್ನು ಉದ್ಘಾಟಿಸಿ ಮಾತನಾಡಿ ಸುರಕ್ಷಾ ಪರಿಕರಗಳು ಪ್ರತಿಯೊಂದು ಸಂಸ್ಥೆಯ ಅತೀ ಮುಖ್ಯವಾದ ಆಸ್ತಿಯಾಗಿದೆ ಮತ್ತು ಅದನ್ನು ಉಪಯೋಗಿಸುವುದು ಪ್ರತಿಯೊಬ್ಬ ಸಿಬ್ಬಂದಿಯ ಆದ್ಯ ಕರ್ತವ್ಯವಾಗಿರುತ್ತದೆ. ಸಂಸ್ಥೆಯ ಸಿಬ್ಬಂದಿಗಳೆಲ್ಲ ಒಂದೆ ಕುಟುಂಬದ ಸದಸ್ಯರಾಗಿ ದುಡಿಯುವ ಮೂಲಕ ಪ್ರತಿಯೊಬ್ಬರು ತಮ್ಮ ಮತ್ತು ಜೊತೆ ಕೆಲಸಗಾರರ ಸುರಕ್ಷತೆಗಾಗಿ ಸಂಸ್ಥೆಯಿಂದ ಒದಗಿಸಿದ ಉಪಕರಣಗಳನ್ನು ಸೂಕ್ತವಾಗಿ ಬಳಸಿ ಸಂಸ್ಥೆಯಲ್ಲಿ ಸುರಕ್ಷಿತ ವಾತಾವರಣವನ್ನು ಸೃಷ್ಟಿಸಬೇಕು ಎಂದು ತಿಳಿಸಿದರು.
ಈ ಕಾರ್ಯಕ್ರಮದಲ್ಲಿ ಸಂಸ್ಥೆಯ ನಿರ್ದೇಶಕರಾದ ರಕ್ಷಿತ್ ಕುಂದರ್, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಧಾನೇಶ್ ಜೀವಾನಿ, ಮುಖ್ಯ ಲೆಕ್ಕಾಧಿಕಾರಿ ಸಿ ಅಶ್ವಥ್ ಜೆ ಶೆಟ್ಟಿ ಭಾಗವಹಿಸಿದ್ದರು, ಸಂಸ್ಥೆಯ ವ್ಯವಸ್ಥಾಪಕರಾದ ಶ್ರೀನಿವಾಸ್ ಕುಂದರ್ ಅವರು ಸುರಕ್ಷಾ ಪ್ರತಿಜ್ಜಾ ವಿಧಿಯನ್ನು ಸಿಬ್ಬಂದಿಗಳಿಗೆ ಬೋದಿಸಿದರು. ಸಂಸ್ಥೆಯ ಸುರಕ್ಷತಾ ಅಧಿಕಾರಿ ಸಂದೀಪ್ ಶೆಟ್ಟಿ ಕಾರ್ಯಕ್ರಮವನ್ನು ಆಯೋಜಿಸಿ ಸುರಕ್ಷತಾ ಉಪಕರಣದ
ಪ್ರಾಮುಖ್ಯತೆಯನ್ನು ಸಿಬ್ಬಂದಿಗಳಿಗೆ ವಿವರಿಸಿದರು.ರವಿಕಿರಣ್ ಕೋಟ ಕಾರ್ಯಕ್ರಮವನ್ನು ನಿರ್ವಹಿಸಿದರು.











