ಮಾ.20ರಂದು ಸ್ಪರ್ಶ ಕಾರ್ಯಕ್ರಮ, ರಂಗಕರ್ಮಿ ಜಿ.ರಾಮಚಂದ್ರ ಐತಾಳ್‍ಗೆ ಹುಟ್ಟೂರ ಸನ್ಮಾನ, ಅದ್ಧೂರಿಯ ಅಟ್ಟಣಿಗೆಯ ಯಕ್ಷಗಾನ ಪ್ರದರ್ಶನ

0
309

Click Here

Click Here

ಕುಂದಾಪುರ ಮಿರರ್ ಸುದ್ದಿ…

Click Here

ಕೋಟ: ಬಾಳೆಬೆಟ್ಟು ಫ್ರೆಂಡ್ಸ್ ಬಾಳೆಬೆಟ್ಟು ಹಾಗೂ ಭಗತ್ ಸಿಂಗ್ ಯುವ ವೇದಿಕೆ ಕೋಟ ಇವರ ಪ್ರಸ್ತುತಿಯಲ್ಲಿ ಸ್ಪರ್ಶ-ಭಾವ ಬಣ್ಣಗಳ ಉದ್ಘೋಷ ಕಾರ್ಯಕ್ರಮ ಇದೇ ಮಾ 20ರಂದು ಮಣೂರು ಸ್ಪರ್ಶ ಮೈದಾನದಲ್ಲಿ ಆಯೋಜನೆ ಮಾಡಿದೆ. ಈ ವರ್ಷದ ಹುಟ್ಟೂರು ಸನ್ಮಾನ ಹಿರಿಯ ರಂಗಕರ್ಮಿ ಮತ್ತು ಚಿಂತಕ ಗುಂಡ್ಮಿ ರಾಮಚಂದ್ರ ಐತಾಳ್‍ರವರನ್ನು ಆಯ್ಕೆಗೊಳಿಸಿದ್ದು , ಸ್ಥಳೀಯ ಶೈಕ್ಷಣಿಕ ಸಾಧಕರಿಗೆ ವಿಶೇಷ ಅಭಿನಂದನೆ ಕಾರ್ಯಕ್ರಮ, ನಿವೃತ್ತ ಯೋಧರಿಗೆ ಗೌರವಾರ್ಪಣೆ, ಅಕ್ಷರ ದಾಸೋಹ ಎನ್ನುವಂತಹ ಹೆಸರಿನಲ್ಲಿ ಬಡ ವಿದ್ಯಾರ್ಥಿಯ ದತ್ತು ಸ್ವೀಕಾರ ಮತ್ತು ಸ್ಥಳೀಯ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಧನ ವಿತರಣೆ ನಡೆಯಲಿದೆ. ಸಾಂಸ್ಕೃತಿಕ ಕಾರ್ಯಕ್ರಮಗಳ ಭಾಗವಾಗಿ ಸ್ಥಳೀಯ ಅಂಗನವಾಡಿ ಪುಟಾಣಿಗಳ ನೃತ್ಯ ಸಿಂಚನ ಮತ್ತು , ದಶಕಗಳ ಹಿಂದೆ ಯಕ್ಷರಂಗದಲ್ಲಿ ದಾಖಲೆ ಪ್ರದರ್ಶನ ಕಂಡ ಅದೇ ರಂಗ ಸಂಯೋಜನೆ ಮತ್ತು ಅತಿಥಿ ಕಲಾವಿದರ ಕೂಡುವಿಕೆಯಲ್ಲಿ ಶ್ರೀ ಅನಂತಪದ್ಮನಾಭ ಯಕ್ಷಗಾನ ಮಂಡಳಿ ಇವರಿಂದ ದೇವದಾಸ್ ಈಶ್ವರಮಂಗಲ ವಿರಚಿತ ನಾಗವಲ್ಲಿ ಎಂಬ ಅಟ್ಟಣಿಗೆ ಯಕ್ಷಗಾನ ಬಯಲಾಟ ಪ್ರದರ್ಶನಗೊಳ್ಳಲಿದೆ ಎಂದು ಸಂಘಟಕ ಪ್ರಸಾದ್ ಬಿಲ್ಲವ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Click Here

LEAVE A REPLY

Please enter your comment!
Please enter your name here