ಪಾಂಡೇಶ್ವರ-ಪ್ರಸ್ತುತ ದಿನಗಳಲ್ಲಿ ಮಹಿಳೆ ಎಲ್ಲಾ ಕ್ಷೇತ್ರದಲ್ಲಿ ಸೈ ಎನ್ನಿಸಿಕೊಳ್ಳುತ್ತಿದ್ದಾಳೆ- ಜೇಮ್ಸ್ ಡಿಸೋಜ

0
921

Click Here

Click Here

ಕುಂದಾಪುರ ಮಿರರ್ ಸುದ್ದಿ…

ಕೋಟ: ಉದ್ಯಮ ರಂಗದಲ್ಲಿ ಮಹಿಳೆ ಸ್ವಾವಲಂಬಿಯಾಗಿ ಬದುಕಲು ಸಾಧ್ಯವಿದೆ ಎಂಬುವುದನ್ನು ಈ ಶಿಬಿರವೇ ಸಾಕ್ಷಿಕರಿಸಿದೆ ಎಂದು ಉಡುಪಿ ಜಿಲ್ಲಾ ಪಂಚಾಯತ್ ಯೋಜನಾ ಸಹಾಯಕ ನಿರ್ದೇಶಕ ಜೇಮ್ಸ್ ಡಿಸೋಜ ಹೇಳಿದ್ದಾರೆ.

ಪಾಂಡೇಶ್ವರ ಗ್ರಾಮಪಂಚಾಯತ್‍ನಲ್ಲಿ ಗ್ರಾಮೀಣಾಭಿವೃದ್ಧಿ ಸ್ವಉದ್ಯೋಗ ತರಬೇತಿ ಸಂಸ್ಥೆ ರುಡ್ ಸೆಟ್ ಬ್ರಹ್ಮಾವರ ಇವರ ಮಾರ್ಗದರ್ಶನದಲ್ಲಿ ಕರ್ನಾಟಕ ರಾಜ್ಯ ಜೀವನೋಪಾಯ ಅಭಿಯಾನದಡಿ ಪಾಂಡೇಶ್ವರ ಗ್ರಾಮಪಂಚಾಯತ್ ನೇತ್ರತ್ವದಲ್ಲಿ ಸೇಹ ಸಂಜೀವಿನಿ ಸ್ವಸಹಾಯ ಒಕ್ಕೂಟಗಳ ಮಹಿಳಾ ಶಿಬಿರಾರ್ಥಿಗಳಿಗೆ ಹತ್ತು ದಿನಗಳ ಕಾಲ ಹಮ್ಮಿಕೊಂಡ ಸ್ವ ಉದ್ಯೋಗ ಶಿಬಿರದ ಸಮಾರೋಪ ಸಮಾರಂಭದಲ್ಲಿ ಮಾತನಾಡಿ ಪ್ರತಿಭೆಗಳು ಅನಾವರಣಗೊಳ್ಳಲು ಇಂಥಹ ಯೋಜನೆಗಳು ಸಹಕಾರಿಯಾಗಲಿದೆ ಇದರ ಮಾರ್ಗದರ್ಶನ ನೀಡುವ ರುಡ್ ಸೆಟ್ ಸಂಸ್ಥೆಯ ಕಾರ್ಯ ಶ್ಲಾಘನೀಯ ಹಾಗೂ ಈ ರೀತಿಯ ಕಾರ್ಯಕ್ರಮಗಳ ಮೂಲಕ ಮಹಿಳೆ ಎಲ್ಲಾ ರಂಗದಲ್ಲೂ ಸೈ ಎನ್ನಿಸಿಕೊಳ್ಳುತ್ತಿದ್ದಾರೆ ಇದೊಂದು ಒಳ್ಳೆಯ ಬೆಳವಣಿಗೆಯಾಗಿದೆ ಎಂದು ಶಿಬಿರಾರ್ಥಿಗಳ ಕಾರ್ಯವನ್ನು ಕೊಂಡಾಡಿದರು.

ಕಾರ್ಯಕ್ರಮವನ್ನು ಪಾಂಡೇಶ್ವರ ಗ್ರಾಮಪಂಚಾಯತ್ ಅಧ್ಯಕ್ಷೆ ಕಲ್ಪನಾ ದಿನಕರ್ ಪೂಜಾರಿ ಉದ್ಘಾಟಿಸಿದರು.

Click Here

ಅಧ್ಯಕ್ಷತೆಯನ್ನು ಪಾಂಡೇಶ್ವರ ಗ್ರಾಮಪಂಚಾಯತ್ ಅಭಿವೃದ್ಧಿ ಅಧಿಕಾರಿ ಇನಾಯಿತ್ ಉಲ್ ವಹಿಸಿದ್ದರು.

ಈ ಸಂದರ್ಭದಲ್ಲಿ ರುಡ್‍ಸೆಟ್ ಉಪನ್ಯಾಸಕ ತರಬೇತುದಾರ ಸಂತೋಷ್ ಶೆಟ್ಟಿ,ಸುಮತಿ ಕೊಟ್ಯಾನ್ ರವರನ್ನು ಗೌರವಿಸಲಾಯಿತು.

ಅತಿಥಿಗಳಾಗಿ ಪಂಚಾಯತ್ ಉಪಾಧ್ಯಕ್ಷ ಸ್ವಿಲ್ವೇಸ್ಟಾರ್ ಡಿಸೋಜ,ಕರ್ನಾಟಕ ರಾಜ್ಯ ಜೀವನೋಪಾಯ ಅಭಿಯಾನ ಇದರ ಜಿಲ್ಲಾ ವ್ಯವಸ್ಥಾಪಕಿ ನವ್ಯಾ,ಜಿಲ್ಲಾ ಕಾರ್ಯಕ್ರಮ ಸಂಯೋಜಕ ಪ್ರಭಾಕರ್ ಆಚಾರ್ಯ, ಕೃಷ್ಣ ಕುಮಾರ್, ರುಡ್ ಸೆಟ್ ಸಂಸ್ಥೆ ಬ್ರಹ್ಮಾವರ ಇದರ ನಿರ್ದೇಶಕ ಪಾಪ ನಾಯಕ್, ಸಂಜೀವಿನಿ ಒಕ್ಕೂಟದ ಅಧ್ಯಕ್ಷೆ ಶ್ರೀದೇವಿ,ಪಂಚಾಯತ್ ಸದಸ್ಯರು ಮತ್ತಿತರರು ಉಪಸ್ಥಿತರಿದ್ದರು. ಒಕ್ಕೂಟದ ಸದಸ್ಯೆ ವಿದ್ಯಾ ರವಿಚಂದ್ರ ಸ್ವಾಗತಿಸಿದರು. ಕಾರ್ಯಕ್ರಮವನ್ನು ಸಂಜೀವಿನಿ ಒಕ್ಕೂಟದ ಉಷಾ ಗಣೇಶ್ ಪೂಜಾರಿ ನಿರೂಪಿಸಿದರು.ಒಕ್ಕೂಟದ ಸದಸ್ಯೆ ಸಂಧ್ಯಾ ಆಚಾರ್ಯ ವಂದಿಸಿದರು

ಗಮನ ಸೆಳೆದ ಬ್ಯಾಗ್,ಫೈಲ್ಸ್,ಕವರ್ ಇತರ ವಸ್ತುಗಳು
ಸತತ ಹತ್ತು ದಿನಗಳಿಂದ ಸಂಬಂಧಪಟ್ಟ ಸಂಸ್ಥೆಗಳ ಮೂಲಕ ಕೈ ಕಸುಬಿನಲ್ಲಿ ಮೂಡಿಬಂದ ಕಲ್ಲರ್ ಪೇಪರ್ ಬ್ಯಾಗ,ಕವರ್,ಫೈಲ್ಸ್,ಸೀರೆ ಗುಚ್ಚಾ,ಫಿನಾಯಲ್,ಇತರ ತಿಂಡಿ ತಿನಿಸುಗಳು ಹೀಗೆ ಸಾಕಷ್ಟು ವಸ್ತುಗಳು ಪಂಚಾಯತ್ ಆವರಣದಲ್ಲಿ ಪ್ರದರ್ಶನಗೊಂಡವು

ಸ್ಥಳೀಯವಾಗಿ ಬೇಡಿಕೆ
ಶಿಬಿರ ಆರಂಭಗೊಂಡ ನಾಲ್ಕೆ ದಿನಗಳಲ್ಲಿ ತಮ್ಮ ಕೈಚಳಕದಲ್ಲಿ ಮೂಡಿಬಂದ ಕಲ್ಲರ್ ಪೇಪರ್ ಬ್ಯಾಗ್ ,ಎನವಲಪ್ ಕವರ್,ಫೈಲ್ ಗಳಿಗೆ ಸಾಕಷ್ಟು ಬೇಡಿಕೆಗಳು ವ್ಯಕ್ತವಾದವು.

Click Here

LEAVE A REPLY

Please enter your comment!
Please enter your name here