ಕುಂದಾಪುರ ಮಿರರ್ ಸುದ್ದಿ…
ಕೋಟ: ಆರ್.ವಿ. ವಿಶ್ವವಿದ್ಯಾನಿಲಯದ ದೃಶ್ಯ ಮತ್ತು ಪ್ರದರ್ಶನ ಕಲೆಗಳ ಕೇಂದ್ರವು ಜೆ.ಪಿ.ನಗರದ ಆರ.ವಿ. ಡೆಂಟಲ್ ಕಾಲೇಜಿನ ಶಿವಾನಂದ ಶರ್ಮಾ ಕಲಾಕ್ಷೇತ್ರದಲ್ಲಿ ಬೆಂಗಳೂರಿನ ಯಕ್ಷದೇಗುಲದ ಮಕ್ಕಳ ತಂಡದಿಂದ “ಅಭಿಮನ್ಯು ಕಾಳಗ” ಯಕ್ಷಗಾನ ಪ್ರದರ್ಶನ ಮಾ. 19 ರಂದು ನಡೆಯಿತು.
ಕೆ.ಮೋಹನ್ ನಿರ್ದೇಶನದ ಯಕ್ಷದೇಗುಲದ ಬಾಲ ಕಲಾವಿದರಾಗಿ ಶ್ರೀರಾಮ್, ಶ್ರೀವತ್ಸ, ಶೀವಿದ್ಯಾ, ರಥನ್, ಅನಿಕ, ಸುಹಾಸ್, ಮೇಘನ ಮತ್ತು ಚಿನ್ಮಯ್ ಭಾಗವಹಿಸಿದರು. ಭಾಗವತರಾಗಿ ಲಂಬೋದರ ಹೆಗಡೆ, ಮದ್ದಲೆಯಲ್ಲಿ ಸಂಪತ್, ಚಂಡೆಯಲ್ಲಿ ಅಮೃತ್‍ದೇವ ಭಾಗಿಯಾದರು. ಪ್ರಿಯಾಂಕ ಕೆ ಮೋಹನ್ ಪ್ರಸಂಗ ನಿರ್ದೇಶನ ಮಾಡಿದರು. ಕಾರ್ಯಕ್ರಮಕ್ಕೆ ರಾಜ್ಯ ಸಭಾ ಸದಸ್ಯೆ ಡಾ.ಬಿ. ಜಯಶ್ರೀ, ರಂಗಶಂಕರದ ಅರುಂದತಿನಾಗ್, ಜನಪ್ರಿಯ ಬರಹಗಾರರಾದ ಡಾ. ಜಯಂತ್ ಕಾಯ್ಕಿಣಿ ಅಲ್ಲದೇ ಮುಕ್ತ ಮುಕ್ತ ಧಾರಾವಾಹಿಯ ನಿರ್ದೇಶಕ ಟಿ. ಎನ್. ಸೀತಾರಾಮ್ ಕಾರ್ಯಕ್ರಮಕ್ಕೆ ಸಾಕ್ಷಿಯಾದರು. ಕಾರ್ಯಕ್ರಮದ ಯಶಸ್ವಿಗೆ ಬಾಲಕೃಷ್ಣ ಭಟ್, ಕೋಟ ಸುದರ್ಶನ ಉರಾಳ್, ವಿಶ್ವನಾಥ ಉರಾಳ್ ಸಹಕರಿಸಿದರು.











