ಕುಂದಾಪುರ ಮಿರರ್ ಸುದ್ದಿ…
ಕುಂದಾಪುರ: ಇಲ್ಲಿನ ಹೃದಯ ಭಾಗದಲ್ಲಿರುವ ಶಿವಪ್ರಸಾದ್ ಗ್ರ್ಯಾಂಡ್ ಬಿಲ್ಡಿಂಗ್ ನಲ್ಲಿ ಸುಸಜ್ಜಿತವಾಗಿ ನಿರ್ಮಾಣಗೊಂಡಿರುವ ಶ್ರೀ ಕ್ಲಿನಿಕಲ್ ಲ್ಯಾಬೋರೇಟರಿ ಆಧುನಿಕ ಕಂಪ್ಯೂಟರೀಕೃತ ರಕ್ತ ತಪಾಸಣಾ ಕೇಂದ್ರ ಶುಭಾರಂಭಗೊಂಡಿತು
ಶಿವಪ್ರಸಾದ್ ಗ್ರ್ಯಾಂಡ್ ಬಿಲ್ಡಿಂಗ್ ನ ಮಾಲಕರಾದ ಅಭಿನಂದನ್ ಶೆಟ್ಟಿ ಅವರು ಲ್ಯಾಬೋರೇಟರಿಯನ್ನು ಉದ್ಘಾಟಿಸಿದರು.
ಉದ್ಘಾಟನಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಕುಂದಾಪುರ ಸರಕಾರಿ ಆಸ್ಪತ್ರೆಯ ಫಿಜಿಷಿಯನ್ ಡಾ. ನಾಗೇಶ್ ಪುತ್ರನ್, ಚರ್ಮ ರೋಗ ತಜ್ಞರಾದ ಡಾ ಅರುಣ್ ಕುಮಾರ್ ಶೆಟ್ಟಿ, ದಂತ ವೈದ್ಯರಾದ ಡಾ. ಆಸಿಫ್ ಬ್ಯಾರಿ, ಪುರಸಭೆ ಸದಸ್ಯರಾದ ವಿ ಪ್ರಭಾಕರ್, ಜೇಸಿಐ ಕುಂದಾಪುರ ಸಿಟಿ ಅಧ್ಯಕ್ಷರಾದ ಜೆ ಸಿ ಅಭಿಲಾಷ್ ಬಿ ಎ, ಗಿರೀಶ್ ಜಿ ಕೆ, ಮೀನಾ ಮೆಡಿಕಲ್ಸ್ ಮಾಲಕ ಸುರೇಶ್, ಇಂದಿರಾ ಡಿ ಪುತ್ರನ್, ಶಾರದಾ, ಶೇಖರ್ ಶ್ರೇಯಾನ್, ಪ್ರಕಾಶ್ ವಿಜಯಕುಮಾರ್ ವಿಠಲ್ ವಾಡಿ ಭರತ್ ವಿಠಲ್ ವಾಡಿ ಹಾಗೂ ದಿನೇಶ್ ಪುತ್ರನ್ ವಿಠಲ್ ವಾಡಿ ಇವರು ಉಪಸ್ಥಿತರಿದ್ದರು.











