ಆತ್ಮವಿಶ್ವಾಸ-ದೇವರಮೇಲಿನ ನಂಬಿಕೆಯೇ ಉತ್ತಮಜೀವನದ ಮಾರ್ಗೋಪಾಯ – ಗಣೇಶ್ ಕಿಣಿ

0
509

Click Here

Click Here

ಕುಂದಾಪುರ ಮಿರರ್ ‌ಸುದ್ದಿ…

ಬೆಳ್ವೆ : ನಮ್ಮ ಮನಸ್ಸು ಸುಸ್ಥಿತಿಯಲ್ಲಿರಬೇಕು, ಆಗ ಸಮಾಜದ ಅಭಿವೃದ್ಧಿ ಕೂಡ ಸಾಧ್ಯ. ಮನೆ-ಮನಗಳಲ್ಲಿರುವ ರಾಕ್ಷಸ ಪ್ರವೃತ್ತಿಯನ್ನು ಬಿಟ್ಟು ಆತ್ಮವಿಶ್ವಾಸ,ಮನೋಸ್ಥೈರ್ಯ, ದೇವರಬಗೆಗಿನ ನಮ್ಮ ನಂಬಿಕೆಯಿಂದ ಉತ್ತಮ ಜೀವನ ಸಾಧ್ಯ ಎಂದು ಬೆಳ್ವೆ ಶ್ರೀ ಗಣೇಶ್ ಕ್ಯಾಶೂಸ್ ಮತ್ತು ಸಮೂಹ ಸಂಸ್ಥೆಗಳ ಮಾಲಕರಾದ ಗಣೇಶ್ ಕಿಣಿಯವರು ಹೇಳಿದರು.

ಅವರು ಬೆಳ್ವೆ ಸಂದೇಶ್ ಕಿಣಿ ಮೆಮೋರಿಯಲ್ ಚಾರಿಟೇಬಲ್ ಪೌಂಡೇಶನ್(ರಿ)ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ ಟ್ರಸ್ಟ್ (ರಿ)ಬೆಳ್ವೆ ವಲಯ ಹಾಗೂ ಪ್ರಗತಿಬಂಧು ಸ್ವಸಹಾಯ ಸಂಘಗಳ ಒಕ್ಕೂಟಗಳು ಬೆಳ್ವೆ ವಲಯ ಇವರ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಿರುವ ವಲಯ ಮಟ್ಟದ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ,ಧಾರ್ಮಿಕ ಸಭಾ ಕಾರ್ಯಕ್ರಮ ಹಾಗೂ ಸಾಧನಾ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದರು.

ಕಾರ್ಯಕ್ರಮದಲ್ಲಿ ಹಸಿರು ಇಂಧನ ಸಾಧನಗಳ ವಿತರಣೆ ಕಾರ್ಯಕ್ರಮವನ್ನು ನೆರವೇರಿಸಿ ಮಾತನಾಡಿರುವ ಶ್ರೀ.ಕ್ಷೇ.ಧ. ಗ್ರಾ.ಯೋಜನೆಯ ಕುಂದಾಪುರ ತಾಲೂಕಿನ ಹಿರಿಯ ಯೋಜನಾಧಿಕಾರಿ ಮುರುಳೀಧರ ಕೆ ಶೆಟ್ಟಿಯವರು ಮಾತನಾಡಿ ಕೊರೊನಾ ಕಾಲದಲ್ಲಿ ಕೂಡ ಗ್ರಾಮಾಭಿವೃದ್ದಿ ಯೋಜನೆಯ ಕಾರ್ಯಕ್ರಮಗಳು ಚಲನಶೀಲವಾಗಿತ್ತು. ಯೋಜನೆಯ ಸದಸ್ಯರು ಗ್ರಾಮಾಭಿವೃದ್ದಿ ಯೋಜನೆಯ ಮೂಲಕ ಸಿಗುವ ಎಲ್ಲ ಸೌಲಭ್ಯಗಳು ಸದುಪಯೋಗಪಡಿಸಿ ಕೊಳ್ಳಬೇಕು ,ಆಗ ಮಾತ್ರ ಸ್ವಸಹಾಯ ಸಂಘದ ಸದಸ್ಯರು ಆರ್ಥಿಕ ಸ್ವಾವಲಂಬನೆ ಸಾಧಿಸಲು ಸಾಧ್ಯ. ಯೋಜನೆಯ ಮೂಲಕ ಸದಸ್ಯರು ಕಲಿಯಬೇಕು ಹಾಗೂ ಇತರರಿಗೆ ಕಲಿಸಬೇಕು ಎಂದರು.

ವಿಶೇಷ ಧಾರ್ಮಿಕ ಉಪನ್ಯಾಸದ ಮೂಲಕ ತಮ್ಮ 525ನೇ ಧಾರ್ಮಿಕ ಪ್ರವಚನವನ್ನು ನೀಡಿರುವ ಖ್ಯಾತ ವಾಸ್ತುತಜ್ಞರು, ಪ್ರಸಂಗಕರ್ತರು, ಜ್ಯೋತಿಷಿಗಳಾದ ಡಾ॥.ಕೆ.ಬಸವರಾಜ್ ಶೆಟ್ಟಿಗಾರ್ ರವರು ಶ್ರೀ ಸತ್ಯನಾರಾಯಣ ಸ್ವಾಮಿಯ ಪೂಜಾ ವ್ರತದ ಬಗ್ಗೆ ಜನರಿಗೆ ಪದ್ಯ ಹಾಗೂ ಗದ್ಯದ ಮೂಲಕ ಕಥೆಯನ್ನು ಸವಿಸ್ತಾರವಾಗಿ ತಿಳಿಸಿದರು.

Click Here

ಇದೇ ವೇಳೆಯಲ್ಲಿ ಗ್ರಾಮಾಭಿವೃದ್ದಿ ಯೋಜನೆಯ ಮಹತ್ವಾಕಾಂಕ್ಷಿ ಯೋಜನೆಗಳಾದ ಸೆಲ್ಕೊ ಸೋಲಾರ್, ಕುಕ್ ಸ್ಟವ್, ಮೈಕ್ರೋ ಬಚತ್, ಈ ಶ್ರಮ ಕಾರ್ಡ್ ಸೌಲಭ್ಯವನ್ನು ಅರ್ಹ ಫಲಾನುಭವಿಗಳಿಗೆ ವಿತರಿಸಲಾಯಿತು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಬೆಳ್ವೆ ಗ್ರಾ.ಪಂ.ಅಧ್ಯಕ್ಷರಾದ ಎಸ್.ಚಂದ್ರಶೇಖರ್ ಶೆಟ್ಟಿ, ಬೆಳ್ವೆ ಶ್ರೀ ಶಂಕರನಾರಾಯಣ ದೇವಸ್ಥಾನದ ಆಡಳಿತ ಮೊಕ್ತೇಸರರಾದ ಶಂಕರ್ ಶೆಟ್ಟಿ,ವಲಯದ ಜನಜಾಗೃತಿ ವೇದಿಕೆ ಅಧ್ಯಕ್ಷರಾದ ಸುದರ್ಶನ್ ಶೆಟ್ಟಿ, ಬೆಳ್ವೆ ವ್ಯವಸಾಯ ಸೇವಾ ಸಹಕಾರಿ ಸಂಘ.ನಿ. ಇದರ ಅಧ್ಯಕ್ಷರಾದ ಎಸ್ ಜಯರಾಂ ಶೆಟ್ಟಿ,ವಲಯಾಧ್ಯಕ್ಷರಾದ ಉಮೇಶ್ ಹೆಗ್ಡೆ, ಒಕ್ಕೂಟದ ಅಧ್ಯಕ್ಷರಾದ ವಾಸು ಪೂಜಾರಿ, ಹೇಮಂತ್ ಪೂಜಾರಿ,ರವಿ ಪೂಜಾರಿ, ಪ್ರಭಾವತಿ, ಜಯಂತಿ, ಅರುಣ್ ಕುಮಾರ್ ಶೆಟ್ಟಿ, ಸುಮತಿ, ಸಂತೋಷ್ ಉಪಸ್ಥಿತರಿದ್ದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂದೇಶ ಕಿಣಿ ಮೆಮೋರಿಯಲ್ ಚಾರಿಟೇಬಲ್ ಫೌಂಡೇಶನ್ (ರಿ)ಇದರ ಅಧ್ಯಕ್ಷರಾದ ಬಿ.ಸತೀಶ್ ಕಿಣಿ ವಹಿಸಿದ್ದರು.

ಕಾರ್ಯಕ್ರಮದಲ್ಲಿ ಬೆಳ್ವೆ ವಲಯದ ಮೇಲ್ವಿಚಾರಕ ಸಂತೋಷ್,ಅಮಾಸೇಬೈಲು ವಲಯ ಮೇಲ್ವೀಚಾರಕ ಪ್ರವೀಣ್,ಹಾಲಾಡಿ ವಲಯದ ಮೇಲ್ವೀಚಾರಕ ಸಂತೋಷ್ ನಾಯ್ಕ್ ವಲಯದ ಎಲ್ಲ ಒಕ್ಕೂಟಗಳ ಸೇವಾ ಪ್ರತಿನಿಧಿಗಳು,ರಾಷ್ಟ್ರೀಯ ವಿಪತ್ತು ನಿರ್ವಹಣಾ ತಂಡದ ಸದಸ್ಯರು,ಯಂತ್ರ ಶ್ರೀ ಯೋಧರು, ತರಬೇತಿ ಸಹಾಯಕರು, ಸುವಿಧ ಸಹಾಯಕರು, ಸಾಮಾನ್ಯ ಸೇವಾ ಕೇಂದ್ರದ ಸಿಬ್ಬಂದಿಯವರು ,ವಲಯದ ಎಲ್ಲಾ ಒಕ್ಕೂಟದ ಪ್ರಗತಿ ಬಂಧು ಸ್ವ ಸಹಾಯ ಸಂಘಗಳ ಪದಾಧಿಕಾರಿಗಳು ,ಸರ್ವ ಸದಸ್ಯರು ಉಪಸ್ಥಿತರಿದ್ದರು.

ವಲಯಮಟ್ಟದಲ್ಲಿ ವಿವಿಧ ಕಾರ್ಯಕ್ರಮಗಳಲ್ಲಿ ಸಾಧನೆ ಮಾಡಿರುವ ವಲಯದ ಒಕ್ಕೂಟದವರನ್ನು ಹಾಗೂ ಸೇವಾಪ್ರತಿನಿಧಿಯವರನ್ನು,ಯಂತ್ರ ಶ್ರೀ ಯೋಧರಾದ ಕೃಷ್ಣನಾಯ್ಕ್ ಬೆಳ್ವೆ ,ಅಶೋಕ್ ಮರಾಠಿ ಹೈಕಾಡಿ,ವಲಯದ ಎಲ್ಲಾ ಸುವಿಧಾ ಸಹಾಯಕರು ಹಾಗೂ ಸಾಮಾನ್ಯ ಸೇವಾ ಕೇಂದ್ರದ ಸಿಬ್ಬಂದಿಯವರನ್ನು ಹಾಗೂ ಶೌರ್ಯ ವಿಪತ್ತು ನಿರ್ವಹಣ ತಂಡದವರನ್ನು ಅಭಿನಂದಿಸಲಾಯಿತು.

ತಂಡದ ಸದಸ್ಯೆ ಪಲ್ಲವಿ ಪ್ರಾರ್ಥನೆ ನೆರವೇರಿಸಿದರು.
ಸೇವಾಪ್ರತಿನಿಧಿ ಜಯಲಕ್ಷ್ಮೀ, ತಾಲೂಕಿನ ಕೃಷಿ ಅಧಿಕಾರಿ ಚೇತನ್ ಕುಮಾರ್ ಕಾರ್ಯಕ್ರಮ ನಿರೂಪಿಸಿ ,ವಲಯದ ಮೇಲ್ವಿಚಾರಕ ಸಂತೋಷ್ ಸ್ವಾಗತಿಸಿದರು. ಸೇವಾಪ್ರತಿನಿಧಿ ಶ್ರೀಮತಿ ವಲಯದ ಸಾಧನಾ ವರದಿ ಮಂಡಿಸಿ,ಪ್ರಶಾಂತ್ ವಂದಿಸಿದರು.

Click Here

LEAVE A REPLY

Please enter your comment!
Please enter your name here